ಚೆನ್ನೈ.ತಮಿಳುನಾಡಿನಾದ್ಯಂತ ಇರುವ ಸಾವಿರಾರು ಖಾಸಗಿ ಶಾಲೆಗಳ ಅಕ್ರಮ ಶುಲ್ಕ ವಸೂಲಾತಿ ಮತ್ತು ಪೋಷಕರ ಸುಲಿಗೆಯ ವಿರುದ್ಧ ಮುಖ್ಯಮಂತ್ರಿ ವಿಜಯ್ ಅವರ ಸರ್ಕಾರ ಸಮರ ಸಾರಿದೆ. ರಾಜ್ಯದ ಎಲ್ಲಾ ಖಾಸಗಿ ಶಾಲೆಗಳು ತಮ್ಮ ನೋಟಿಸ್ ಬೋರ್ಡ್ಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಅಧಿಕೃತ ಬೋಧನಾ ಶುಲ್ಕದ ವಿವರಗಳನ್ನು ಕಡ್ಡಾಯವಾಗಿ ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಎಂದು ತಮಿಳುನಾಡು ಸರ್ಕಾರ ಭಾನುವಾರ (ಮೇ,31) ಅತ್ಯಂತ ಕಠಿಣ ಆದೇಶ ಹೊರಡಿಸಿದೆ.
ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಪೋಷಕರಿಂದ ಕದ್ದುಮುಚ್ಚಿ ಹಣ ಪೀಕುವ ಶಾಲೆಗಳ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಕ್ತ ಲೈಸೆನ್ಸ್ ನೀಡಲಾಗಿದೆ.
ಲಾಕ್ ಆಗಲಿವೆ ಹಿಡನ್ ಫೀಸ್ ದಂಧೆಗಳು; ಜೂನ್ 4 ರಿಂದ ಶಾಲೆಗಳು ಪ್ರಾರಂಭ!
ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯು ನೀಡಿರುವ ಇನ್ಸೈಡ್ ಮಾಹಿತಿಯ ಪ್ರಕಾರ, ರಾಜ್ಯದ ನೂರಾರು ಪ್ರಮುಖ ಖಾಸಗಿ ಶಾಲೆಗಳು ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ಪೋಷಕರಿಂದ ಲಕ್ಷಾಂತರ ರೂಪಾಯಿ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಗಂಭೀರ ದೂರುಗಳು ಬಂದಿದ್ದವು. ಅಲ್ಲದೆ, ಇದಕ್ಕೆ ತಕ್ಷಣವೇ ಆಕ್ಷನ್ ತಗೆದುಕೊಂಡಿರುವ ಸರ್ಕಾರ, ಜೂನ್ ೪ ರಿಂದ ತಮಿಳುನಾಡಿನ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಅಧಿಕೃತವಾಗಿ ಪುನರಾರಂಭಗೊಳ್ಳುತ್ತಿದ್ದು, ಅಂದಿನಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ.
ಒಂದೊಮ್ಮೆ ಯಾವುದೇ ಖಾಸಗಿ ಶಾಲೆಯು ಸರ್ಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಒಂದು ರೂಪಾಯಿ ಹೆಚ್ಚುವರಿ ಚಾರ್ಜ್ ಮಾಡಿದರೂ ಸಹ, ಅಂತಹ ಶಾಲೆಯ ಅಧಿಕೃತ ಮಾನ್ಯತೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ತಕ್ಷಣವೇ ರದ್ದುಗೊಳಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚರಿಸಿದ್ದಾರೆ.
13,000 ಶಾಲೆಗಳ ಮೇಲೆ ಕಠಿಣ ಕಣ್ಗಾವಲು; ದೂರು ನೀಡಲು ಪೋಷಕರಿಗೆ ಮುಕ್ತ ಅವಕಾಶ!
ಪ್ರಸ್ತುತ ತಮಿಳುನಾಡಿನಲ್ಲಿ 13,000 ಕ್ಕೂ ಹೆಚ್ಚು ಮಾನ್ಯತೆ ಪಡೆದ ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರವೇಶಾತಿ ಪ್ರಕ್ರಿಯೆಯ ಹೆಸರಿನಲ್ಲಿ ಪೋಷಕರಿಂದ ಯಾವುದೇ ರೀತಿಯ ರಹಸ್ಯ ಶುಲ್ಕಗಳನ್ನು ವಸೂಲಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಕ್ರಾಂತಿಕಾರಿ ನಿಯಂತ್ರಣವನ್ನು ತಮಿಳುನಾಡು ಶಾಲೆಗಳ (ಶುಲ್ಕ ಸಂಗ್ರಹಣೆ ನಿಯಂತ್ರಣ) ತಿದ್ದುಪಡಿ ಕಾಯ್ದೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ಉನ್ನತ ಅಧಿಕಾರಿಗಳು ಮತ್ತು ಪ್ರಮುಖ ಶಿಕ್ಷಣ ತಜ್ಞರನ್ನೊಳಗೊಂಡ ವಿಶೇಷ ಸಮಿತಿಯು ಪ್ರತಿ ತರಗತಿಯ ಪ್ರಮಾಣಿತ ಶುಲ್ಕವನ್ನು ನಿರ್ಧರಿಸುತ್ತದೆ.
ಒಂದೊಮ್ಮೆ ಯಾವುದೇ ಶಿಕ್ಷಣ ಸಂಸ್ಥೆಯು ಕಾನೂನು ಬಾಹಿರವಾಗಿ ಅತಿಯಾದ ಶುಲ್ಕಕ್ಕೆ ಬೇಡಿಕೆ ಇಟ್ಟರೆ, ಪೋಷಕರು ತಕ್ಷಣವೇ ಸಂಬಂಧಪಟ್ಟ ಜಿಲ್ಲಾ ಶಿಕ್ಷಣ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಬಹುದು. ದೂರು ಬಂದ ತಕ್ಷಣವೇ ಅಂತಹ ಶಾಲೆಗಳ ಮೇಲೆ ಮಿಂಚಿನ ದಾಳಿ ನಡೆಸಲು ಜಂಟಿ ತನಿಖಾ ತಂಡಗಳನ್ನು ರಚಿಸಲಾಗಿದೆ.
ಶಿಕ್ಷಣ ವ್ಯವಸ್ಥೆಯನ್ನು ವ್ಯಾಪಾರೀಕರಣ ಮಾಡುತ್ತಿರುವ ಮಾಫಿಯಾಗಳಿಗೆ ಸಿಎಂ ವಿಜಯ್ ನೀಡಿರುವ ಈ ಭೀಕರ ಆಘಾತವು ಇಡೀ ದೇಶಾದ್ಯಂತ ಭಾರಿ ಶ್ಲಾಘನೆಗೆ ಪಾತ್ರವಾಗಿದ್ದು, ಪೋಷಕರ ಹಿತರಕ್ಷಣೆಯಲ್ಲಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಈ ಹೆಜ್ಜೆ ಇತರೆ ರಾಜ್ಯಗಳಿಗೂ ಮಾದರಿಯಾಗಿದೆ,





Any questions related to ಸಾವಿರಾರು ಖಾಸಗಿ ಶಾಲೆಗಳ ಅಕ್ರಮ ಶುಲ್ಕ ವಸೂಲಾತಿಗೆ ಬ್ರೇಕ್?