ಕಲಬುರಗಿ.01.ಜೂನ್.26: ರಾಜ್ಯ ರಾಜಕಾರಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇದೀಗ ನೂತನ ಮುಖ್ಯಮಂತ್ರಿ ಆಗ್ತಿದ್ದಾರೆ. ಹೀಗಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ನಲ್ಲಿ ತುಂಬಾ ಪೈಪೋಟಿ ನಡೆಯುತ್ತಿದೆ.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿತ ಕಲಬುರಗಿಯಲ್ಲಿ ಮಾತಾಡಿ ಎಐಸಿಸಿ ಅಧ್ಯಕ್ಷ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಕೆಪಿಸಿಸಿ ಬಿಗ್ ಹಿಂಟ್ ಕೊಟ್ಟಿದ್ದಾರೆ. ಯಾರಿಗೆ ಸಿಗಲಿದೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೋಡೋಣ?
‘ಸಿಎಂಗೆ ಜೊತೆ ಅಧ್ಯಕ್ಷರಿಗೆ ಉತ್ತಮ ಸಮನ್ವಯ ಇರಬೇಕು’
ನೂತನ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ವಿಚಾರ ಸಂಬಂಧ ಕಲಬುರಗಿಯಲ್ಲಿ ಮಾತಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ್ರು, ನೂತನ ಅಧ್ಯಕ್ಷರನ್ನ ಆಯ್ಕೆ ಮಾಡೋದಕ್ಕಾಗಿ ಸರ್ಚ್ ಮಾಡುತ್ತಿದ್ದೇವೆ ಎಂದ್ರು. ಸಾಮಾನ್ಯವಾಗಿ ಒಬ್ಬರು ಬಿಟ್ಟ ಮೇಲೆ ಮತ್ತೊಬ್ಬರು ಬರಲೇಬೇಕು. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡುತ್ತೇವೆ. ಸಿಎಂಗೆ ಉತ್ತಮ ಸಮನ್ವಯ ಇರಬೇಕು, ಅಂಥವರನ್ನೇ ಆಯ್ಕೆ ಮಾಡ್ತೇವೆ ಎಂದು ಖರ್ಗೆ ಹೇಳಿದ್ದಾರೆ.
‘ಸ್ಪೀಡ್ ಹಾಗೂ ಸದಾ ಆಯಕ್ಟಿವ್ ಆಗಿರೋ ಸಾರಥಿ ಬೇಕು’
ಮುಂಬರುವ ಚುನಾವಣೆ ಹಾಗೂ ಪಕ್ಷ ಕಟ್ಟುವ ದೃಷ್ಟಿಯಿಂದ ಎಲ್ಲವನ್ನೂ ವಿಚಾರ ಮಾಡಿ ಆಯ್ಕೆ ಮಾಡಬೇಕಾಗುತ್ತದೆ. ಚುನಾವಣೆಗೆ ಕೇವಲ 24 ತಿಂಗಳು ಮಾತ್ರ ಅವಕಾಶ ಇರೋದ್ರಿಂದ ಬಹಳ ಸ್ಪೀಡ್ ಆಗಿ ಕೆಲಸ ಮಾಡಬೇಕಿದೆ. ಸ್ಪೀಡ್ ಆಗಿ, ಎಲ್ಲರನ್ನ ಸಂಪರ್ಕಿಸಿ, ಎಲ್ಲರನ್ನ ಒಗ್ಗಟ್ಟಾಗಿ ತಗೊಂಡು ಹೋಗುವ ನಾಯಕನನ್ನು ನಾವು ಹುಡುಕಬೇಕಿದೆ. ಇವೆಲ್ಲವೂ ವಿಚಾರ ಮಾಡಿ ನಾವು ಅಧ್ಯಕ್ಷರ ಆಯ್ಕೆ ಮಾಡುತ್ತೇವೆ ಎಂದ ಏರ್ಪೋರ್ಟ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಹೇಳಿದ್ದಾರೆ.
ಡಿಸಿಎಂ ಆಯ್ಕೆ ಬಗ್ಗೆ ಖರ್ಗೆ ಹೇಳಿದ್ದೇನು?
ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಾಡಿದ್ದು, ಹೊಸ ಡಿಸಿಎಂ ಪ್ರಸ್ತಾಪ ಇನ್ನೂ ಬಂದಿಲ್ಲ. ಪ್ರಸ್ತಾಪ ಬಂದ್ಮೇಲೆ ಎಷ್ಟು ಜನರನ್ನ ಡಿಸಿಎಂ ಮಾಡಬೇಕು? ಎಷ್ಟು ಮಿನಿಸ್ಟರ್ ಮಾಡಬೇಕು ತೀರ್ಮಾನ ಮಾಡಲಾಗುವುದು. ಮಹತ್ವದ ಅಧ್ಯಕ್ಷ ಸ್ಥಾನಗಳನ್ನೂ ಜೊತೆಯಲ್ಲೇ ಮಾಡಬೇಕಾ? ಎನ್ನುವ ಚರ್ಚೆ ಸಹ ನಡೆದಿದೆ
ಈ ವಿಚಾರಗಳ ಬಗ್ಗೆ ಜೂನ 3ರ ನಂತರ ಗೊತ್ತಾಗುತ್ತೆ. ಮೊದಲ ಹಂತದಲ್ಲಿ ಎಷ್ಟು ಜನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸ್ತಾರೆ ಎನ್ನುವ ಪ್ರಪೋಜಲ್ ಇನ್ನೂ ಬಂದಿಲ್ಲ. ಎಂಟು ಸಚಿವರನ್ನು ಮಾಡ್ತಾರೋ ಹತ್ತು ಜನರನ್ನು ಸಚಿವರನ್ನಾಗಿ ಮಾಡ್ತಾರೋ ಅನ್ನೋ ಪ್ರಸ್ತಾಪ ಬಂದಿಲ್ಲ ಎಂದಿದ್ದಾರೆ.
ಸದ್ಯಕ್ಕೆ ಒಂದು ಹಂತದಲ್ಲಿ ಸಚಿವರನ್ನು ಮಾಡಿ ಅದು ಆದ ಬಳಿಕ 15 ದಿನ ಅಥವಾ ಒಂದು ತಿಂಗಳು ಬಿಟ್ಟು ಎರಡನೇ ಹಂತದ ಮಂತ್ರಿ ಮಂಡಲ ರಚನೆ ಮಾಡುವ ವಿಚಾರ ಇದೆ. ಆದ್ರೆ ಸಿಎಂ ಏನು ವಿಚಾರ ಮಾಡ್ತಾರೋ ಅವರಿಗೇ ಬಿಟ್ಟಿದ್ದು ಎಂದು ಖರ್ಗೆ ಹೇಳಿದ್ದಾರೆ.





Any questions related to ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಸರ್ಚ್ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ?