Home » ಲೈವ್ ನ್ಯೂಸ್ » ಕೆಎಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ

ಕೆಎಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ

Facebook
X
WhatsApp
Telegram

ಬೆಂಗಳೂರು.19.ಮೇ.26:ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದು, 8 ಜನ ಕರ್ನಾಟಕ ಆಡಳಿತ ಸೇವೆ (KAS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅಧೀನ ಕಾರ್ಯದರ್ಶಿ ಕೇಶವಪ್ರಸಾದ್ ಕೆ.ಎಚ್ ಅವರು ರಾಜ್ಯಪಾಲರ ಆದೇಶಾನುಸಾರ ಈ ಅಧಿಕೃತ ಅಧಿಸೂಚನೆ ಜಾರಿಮಾಡಲಾಗಿದೆ.

ಸ್ಥಳ ನಿರೀಕ್ಷಣೆಯಲ್ಲಿದ್ದ ಹಲವು ಹಿರಿಯ ಅಧಿಕಾರಿಗಳಿಗೆ ಈ ಆದೇಶದಲ್ಲಿ ಹೊಸ ಜವಾಬ್ದಾರಿಗಳನ್ನು ನೀಡಲಾಗಿದ್ದು, ಪ್ರಮುಖವಾಗಿ ಹೊಸದಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಮಹತ್ವದ ಹುದ್ದೆಗಳಿಗೆ ಮೂವರು ಅಧಿಕಾರಿಗಳನ್ನು ನೇಮಕ ಮಾಡಿರುವುದು ಈ ವರ್ಗಾವಣೆಯ ಹೈಲೈಟ್ ಆಗಿದೆ.

ವರ್ಗಾವಣೆಗೊಂಡ 8 ಕೆಎಎಸ್ ಅಧಿಕಾರಿಗಳ ಕಂಪ್ಲೀಟ್ ಲಿಸ್ಟ್ ಇಲ್ಲಿದೆ:

1.ಚಿದಾನಂದ ಸದಾಶಿವ ವಟಾರೆ

ಹಿಂದಿನ ಹುದ್ದೆ: ಮುಖ್ಯ ಆಡಳಿತಾಧಿಕಾರಿ, ಗ್ಯಾಸ್ಟ್ರೋಎಂಟ್ರಾಲಜಿ ಸೈನ್ಸಸ್ ಸಂಸ್ಥೆ, ಬೆಂಗಳೂರು.

ವರ್ಗಾವಣೆಗೊಂಡ ಹೊಸ ಹುದ್ದೆ: ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ (KSIIDC), ಬೆಂಗಳೂರು.

2.ವಿಜಯ ಈ. ರವಿಕುಮಾರ್

ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.

ವರ್ಗಾವಣೆಗೊಂಡ ಹೊಸ ಹುದ್ದೆ: ಜಂಟಿ ಆಯುಕ್ತರು (ಆಡಳಿತ), ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣಾ ಇಲಾಖೆ, ಬೆಂಗಳೂರು.

3.ಇ. ಬಾಲಕೃಷ್ಣಪ್ಪ

ಹಿಂದಿನ ಹುದ್ದೆ: ಅಪರ ಜಿಲ್ಲಾಧಿಕಾರಿ, ಹೊಸಪೇಟೆ, ವಿಜಯನಗರ ಜಿಲ್ಲೆ.

ವರ್ಗಾವಣೆಗೊಂಡ ಹೊಸ ಹುದ್ದೆ: ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ, ವಿಜಯನಗರ ಜಿಲ್ಲೆ.

4.ಲೋಕೇಶ್ ಪಿ.ಎನ್.

ಹಿಂದಿನ ಹುದ್ದೆ: ವಿಶೇಷ ಅಧಿಕಾರಿ, ಜಿಲ್ಲಾ ಖನಿಜ ಪ್ರತಿಷ್ಠಾನ, ಬಳ್ಳಾರಿ.

ವರ್ಗಾವಣೆಗೊಂಡ ಹೊಸ ಹುದ್ದೆ: ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿ, ಹೊಸಪೇಟೆ, ವಿಜಯನಗರ ಜಿಲ್ಲೆ.

5.ಕವಿತಾ ರಾಜಾರಾಮ್

ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.

ವರ್ಗಾವಣೆಗೊಂಡ ಹೊಸ ಹುದ್ದೆ: ಹೆಚ್ಚುವರಿ ಆಯುಕ್ತರು, ಬೆಂಗಳೂರು ಪಶ್ಚಿಮ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ.

6.ಅಭಿಜಿನ್ ಬಿ.

ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.

ವರ್ಗಾವಣೆಗೊಂಡ ಹೊಸ ಹುದ್ದೆ: ಜಂಟಿ ಆಯುಕ್ತರು, ಐಟಿ ಸೆಲ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು.

7.ದುರ್ಗಾ ಎನ್.

ಹಿಂದಿನ ಹುದ್ದೆ: ಸ್ಥಳ ನಿರೀಕ್ಷಣೆಯಲ್ಲಿದ್ದರು.

ವರ್ಗಾವಣೆಗೊಂಡ ಹೊಸ ಹುದ್ದೆ: ಉಪ ನಿರ್ದೇಶಕರು (ಕಾರ್ಯಾಚರಣೆ), 108-ಆರೋಗ್ಯ ಕವಚ ಹಾಗೂ 104-ಆರೋಗ್ಯ ಸಹಾಯವಾಣಿ, ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್, ಬೆಂಗಳೂರು.

8.ಡಾ. ಸಂತೋಷ್ ಕುಮಾರ್ ಬಿರಾದಾರ್

ಹಿಂದಿನ ಹುದ್ದೆ: ವಿಶೇಷ ಭೂಸ್ವಾಧೀನಾಧಿಕಾರಿ, ಬಿಡಿಎ-4, ಬೆಂಗಳೂರು.

ವರ್ಗಾವಣೆಗೊಂಡ ಹೊಸ ಹುದ್ದೆ: ವಿಶೇಷ ಭೂಸ್ವಾಧೀನಾಧಿಕಾರಿ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.

ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹೆಚ್ಚಿನ ಆದ್ಯತೆ

ಈ ಬಾರಿ ವರ್ಗಾವಣೆಯಲ್ಲಿ ಬೆಂಗಳೂರಿನ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಿಡಿಎ ಮತ್ತು ಬಿಬಿಎಂಪಿಯ ಹೊಸ ಆವೃತ್ತಿಯಂತಿರುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ಕ್ಕೆ ಕವಿತಾ ರಾಜಾರಾಮ್, ಅಭಿಜಿನ್ ಬಿ. ಮತ್ತು ಡಾ. ಸಂತೋಷ್ ಕುಮಾರ್ ಬಿರಾದಾರ್ ಅವರನ್ನು ನೇಮಿಸುವ ಮೂಲಕ ರಾಜಧಾನಿಯ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಆಡಳಿತದಲ್ಲೂ ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology