Home » ಲೈವ್ ನ್ಯೂಸ್ » ಶಿಕ್ಷಕಿಯರ ಹೆರಿಗೆ ರಜೆ ನಿಯಮದಲ್ಲಿ ಮಹತ್ವದ ಬದಲಾವಣೆ : ಸಚಿವ ಮಧು ಬಂಗಾರಪ್ಪ

ಶಿಕ್ಷಕಿಯರ ಹೆರಿಗೆ ರಜೆ ನಿಯಮದಲ್ಲಿ ಮಹತ್ವದ ಬದಲಾವಣೆ : ಸಚಿವ ಮಧು ಬಂಗಾರಪ್ಪ

Facebook
X
WhatsApp
Telegram

ಬೆಂಗಳೂರು.17.ಮಾರ್ಚ್.26:ಸರ್ಕಾರಿ ಶಾಲಾ ಶಿಕ್ಷಕಿಯರ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಹೊಸ ಮಾರ್ಗಸೂಚಿಯನ್ನು ಜಾರಿಗೆ ತರುತ್ತಿದೆ ಎಂದು ಸಚಿವ ಮಧು ಬಂಗಾರಪ್ ಹೇಳಿದ್ದಾರೆ. ಇನ್ಮುಂದೆ ಶಿಕ್ಷಕಿಯರು ತಮ್ಮ ಹೆರಿಗೆಯ (Pregnancy) ನಿಗದಿತ ದಿನಾಂಕಕ್ಕಿಂತ 15 ದಿನ ಮೊದಲೇ ರಜೆ ಪಡೆಯಲು ಅವಕಾಶ ಕಲ್ಪಿಸಲಾಗುವುದು ಅಂದು ಸ್ಪಾಟ್ ಪಡೆದರು.

ಮಾ.16 ರಂದುವಿಧಾನ ಪರಿಷತ್ತಿನಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಚಿವರು, ಶಿಶುಪಾಲನಾ ರಜೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಹೆರಿಗೆ ರಜೆ ಮುಗಿಸಿ ಹಿಂದಿರುಗುವ ಶಿಕ್ಷಕಿಯರಿಗೆ ಮುಂದಿನ ಐದು ವರ್ಷಗಳ ಕಾಲ ಅವರು ಬಯಸಿದ ಸ್ಥಳಕ್ಕೆ ನಿಯಮಾನುಸಾರ ವರ್ಗಾವಣೆ ನೀಡುವ ಭರವಸೆಯನ್ನೂ ಸರ್ಕಾರ ನೀಡಿದೆ.

ಇನ್ನು ಶಿಕ್ಷಕಿಯರ ಗೈರುಹಾಜರಿಯ ಅವಧಿಯಲ್ಲಿ ಬೋಧನೆಗೆ ತೊಂದರೆಯಾಗದಂತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು. ಮಾನವೀಯ ನೆಲಗಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಜೂನ್ ಒಳಗಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇಲಾಖೆ ಯೋಜಿಸಿದೆ. ಈ ಕ್ರಮವು ಮಹಿಳಾ ನೌಕರರ ವೃತ್ತಿಜೀವನ ಮತ್ತು ವೈಯಕ್ತಿಕ ಆರೋಗ್ಯದ ಸಮತೋಲನಕ್ಕೆ ಸಹಕಾರಿಯಾಗಲಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology