Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಪ್ರತಿಭಟನೆ

ಅತಿಥಿ ಉಪನ್ಯಾಸಕರ ಪ್ರತಿಭಟನೆ

Facebook
X
WhatsApp
Telegram

ಬೆಂಗಳೂರು.14.ಮಾರ್ಚ್.26: ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು, UGC ನಿಯಮಗಳಡಿ ಅರ್ಹತೆ ಪೂರೈಸದ ಕಾರಣ ಸಂಕಷ್ಟದಲ್ಲಿದ್ದು, ಸುಮಾರು 6,000ಕ್ಕೂ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸೇವಾ ಭದ್ರತೆ, ಗೌರವಧನ ಹೆಚ್ಚಳ ಹಾಗೂ ಮಹಿಳಾ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ ಬೇಡಿಕೆಗಳಿಗಾಗಿ ಇವರು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರವು ಸೇವೆ ಸಲ್ಲಿಸಿದವರಿಗೆ ₹5 ಲಕ್ಷ ಇಡುಗಂಟು ನೀಡಲು ಆದೇಶಿಸಿದೆ.


ಅತಿಥಿ ಉಪನ್ಯಾಸಕರ ಪ್ರಮುಖ ಮಾಹಿತಿ:
ನೇಮಕಾತಿ: ತಾತ್ಕಾಲಿಕವಾಗಿ ಶೈಕ್ಷಣಿಕ ವರ್ಷದ ಆಧಾರದ ಮೇಲೆ ನೇಮಕಗೊಳ್ಳುತ್ತಾರೆ, ಕಾಲೇಜು ಶಿಕ್ಷಣ ಇಲಾಖೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತದೆ.
ಪ್ರಸ್ತುತ ಸಮಸ್ಯೆ: UGC ಮಾರ್ಗಸೂಚಿಗಳ ಅನ್ವಯ NET/SET/PhD ಇಲ್ಲದವರನ್ನು ಕೈಬಿಡಲಾಗಿದೆ.
ಇಡುಗಂಟು ಸೌಲಭ್ಯ: 60 ವರ್ಷ ಪೂರ್ಣಗೊಳಿಸಿದ ಅಥವಾ ಮರಣ ಹೊಂದಿದವರಿಗೆ ₹5 ಲಕ್ಷ ಆರ್ಥಿಕ ನೆರವು ಘೋಷಿಸಲಾಗಿದೆ.


ದಾಖಲೆ ಪರಿಶೀಲನೆ: ಅತಿಥಿ ಉಪನ್ಯಾಸಕರ ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ಸರ್ಕಾರ SOP (Standard Operating Procedure) ಜಾರಿಗೊಳಿಸಿದೆ.
ಕಾಲೇಜು ಶಿಕ್ಷಣ ಇಲಾಖೆ

ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕಾಯಂ ಉದ್ಯೋಗ ಮತ್ತು ಉತ್ತಮ ವೇತನಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಸಮಸ್ಯೆ ಉಂಟಾಗಿದ್ದು ಹೇಗೆ? ಯುಜಿಸಿ ನಿಯಮಗಳ ಪ್ರಕಾರ ಅತಿಥಿ ಉಪನ್ಯಾಸಕರ ನೇಮಕಾತಿ ಪೂರ್ಣಕಾಲಿಕ ಶಿಕ್ಷಕರಂತೆಯೇ ಇರಬೇಕು ಎಂದು ರೂಪಿಸಲಾಗಿತ್ತು. ಅಲ್ಲದೇ ಈ ಕುರಿತು ಯುಜಿಸಿ ಅರ್ಹತೆ ಪಡೆದ ಅಭ್ಯರ್ಥಿಗಳು ಹೈಕೋರ್ಟ್‌ ಮೊರೆ ಹೋಇ, ಅರ್ಹತೆ ಇಲ್ಲದವರನ್ನು ತೆಗೆದುಹಾಕಬೇಕೆಂದು ಅರ್ಜಿ ಸಲ್ಲಿಸಿದ್ದರು. ಕಳೆದ ನವೆಂಬರ್‌ – ಡಿಸೆಂಬರ್‌ನಲ್ಲಿ ಈ ಆದೇಶ ಬಂದ ನಂತರ, ರಾಜ್ಯಾದ್ಯಂತ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದ, ಉಪನ್ಯಾಸಕರನ್ನು ತೆಗೆದುಹಾಕಲಾಯಿತು. ಈ ಪರಿಣಾಮ ಸುಮಾರು 6,000 ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ನಿರುದ್ಯೋಗಿಗಳಾಗಿದ್ದಾರೆ ಎನ್ನಲಾಗಿದೆ.

ಅತಿಥಿ ಉಪನ್ಯಾಸಕರ ಪ್ರತಿಭಟನೆ

ಯುಜಿಸಿ ನಿಯಮದ ವಿರುದ್ಧ ಬಾಧಿತ ಅತಿಥಿ ಉಪನ್ಯಾಸಕರು ಕೂಡಾ ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಅಲ್ಲದೇ ಸಿಎಂ ಸಿದ್ದರಾಮಯ್ಯ ಕೂಡಾ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಅವರಿಗೆ ಮುಂದುವರೆಸುವಂತೆ ಮನವಿ ಮಾಡಿದ್ದರು. ಆದರೆ ಸಚಿವ ಎಂ.ಸಿ. ಸುಧಾರಕರ್‌ ಅವರು ಯುಜಿಸಿ ನಿಯಮ ಬದಲಾಯಿಸಿದರೆ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಹೇಳಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology