Home » ಲೈವ್ ನ್ಯೂಸ್ » ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ

ಅತಿಥಿ ಉಪನ್ಯಾಸಕರ ಪರಿಗಣನೆಗೆ ಆಗ್ರಹ

Facebook
X
WhatsApp
Telegram

ಬೀದರ್.06.ಮಾರ್ಚ್.26: ರಾಜ್ಯ ಸರ್ಕಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಭರ್ತಿ ಮಾಡಲು ಉದ್ದೇಶಿಸಿರುವ 941 ಉಪನ್ಯಾಸಕರ ಹುದ್ದೆಗಳ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರನ್ನು ಪರಿಗಣಿಸಬೇಕು’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘ ಮನವಿ.

ಸಂಘದ ಪದಾಧಿಕಾರಿಗಳು ನಗರದಲ್ಲಿ ಮುಖ್ಯಮಂತ್ರಿ ಅವರಿಗೆ ಉದ್ದೇಶಿಸಿ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಲಾಯಿತು.

‘ರಾಜ್ಯದ ವಿವಿಧ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ 1,200ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು 2004ರಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಸಮಸ್ಯೆ ಪರಿಹಾರವಾಗುವವರೆಗೆ ಕಾಯಂ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು. ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಅತಿಥಿ ಉಪನ್ಯಾಸಕರಿಗೆ ಕಾಯಂ ಉಪನ್ಯಾಸಕರ ಸಮಾನ ವೇತನ ನೀಡಬೇಕು. ವಯೋಮಿತಿ ಹಾಗೂ ಪರೀಕ್ಷಾ ಮಾನದಂಡಗಳಲ್ಲಿ ವಿನಾಯಿತಿ ನೀಡಬೇಕು ಎಂದು ಬೇಡಿಕೆ ಮಂಡಿಸಿದರು.

ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ನೇತೃತ್ವ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಕೃಷ್ಣಕಾಂತ್ ವಿಶ್ವಕರ್ಮ, ಉಪಾಧ್ಯಕ್ಷ ನಿತೀಶ್ ಕಾರಬಾರಿ, ಪುಷ್ಪರಾಜ್ ಖರಟ್, ಸಂದೀಪ್ ಕುಲಕರ್ಣಿ, ಆಶಿಶ್ ಸೊಳಕೆ, ಕೀರ್ತಿ, ಫಾತಿಮಾ ಬೇಗಂ, ವೈಶಾಲಿ ಯಾಲಾ, ಪೂರ್ಣಿಮಾ ಸ್ವಾಮಿ, ಹುಸ್ನಜಬೀನ್, ನಜ್ಮಾ ಆಫ್ರಿನ್, ಗೋವಿಂದ ನೈನ್, ಪ್ರವೀಣ್ ತೋರಣೆ, ಎಂ.ಡಿ. ಯೂನುಸ್, ಶಿವಕುಮಾರ ಮರಕುಂದೆ, ದೇವೇಂದ್ರ ಸ್ವಾಮಿ, ಪೂರ್ಣಿಮಾ ಜಮಗಿ ಸೇರಿದಂತೆ ಬೀದರ್ ಹಾಗೂ ಔರಾದ್ ಸರ್ಕಾರಿ ಪಾಲಿಟೆಕ್ನಿಕ್‌ಗಳ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology