ಬೆಂಗಳೂರು.22.ಜನವರಿ.26: ಕರ್ನಾಟಕ ರಾಜ್ಯದ 32 ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ 9292 ಬೋಧಕ, ಬೋಧಕೇತರ ಹುದ್ದೆ ಖಾಲಿ ಇವೆ ಹಾಗೆ 5 ವಿಶ್ವವಿದ್ಯಾಲಯಗಳಲ್ಲಿ ಉಪ ಕುಲಪತಿ ಹುದ್ದೆಯೂ ಖಾಲಿ ಉಳಿದಿದೆ.
ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಅಗತ್ಯ ಬೋಧಕರ ಅನಿವಾರ್ಯತೆ ಇದೆ. ಆದರೆ ರಾಜ್ಯದ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸೇರಿದಂತೆ ಒಟ್ಟು 9292 ಹುದ್ದೆಗಳು ಖಾಲಿ ಇವೆ.
ಇವುಗಳನ್ನು ಭರ್ತಿ ಮಾಡಲು ಸರ್ಕಾರ ಏನೂ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾಲಯ ಒಳಗೊಂಡು ಐದು ವಿವಿಗಳಲ್ಲಿ ಉಪ ಕುಲಪತಿ ಹುದ್ದೆಯೂ ಖಾಲಿ ಇವೆ. ಹಾಗಾದರೆ ಯಾವ ವಿಶ್ವ ವಿದ್ಯಾಲಯಗಳನ್ನು ಎಷ್ಟು ಹುದ್ದೆಗಳು ಖಾಲಿ
ಈ ಕುರಿತಾದ ಮಾಹಿತಿ ಇಲ್ಲಿದೆ.
ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಹುದ್ದೆ
ಬಾಕಿ ಹುದ್ದೆಗಳ ನೇಮಕಾತಿಗೆ ಏನು ಕ್ರಮ
ಬೋಧಕ, ಬೋಧಕೇತರ ಹುದ್ದೆ ಆಗಿಲ್ಲ ನೇಮಕಾತಿ
ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಬೋಧಕ ಮತ್ತು ಬೋಧಕೇತರ 9292 ಹುದ್ದೆಗಳು ಖಾಲಿ ಇವೆ. ಅಷ್ಟೇ ಅಲ್ಲದೆ, 5 ಉಪ ಕುಲಪತಿ ಹುದ್ದೆಗಳು ಭರ್ತಿ ಆಗಿಲ್ಲ.
ಉನ್ನತ ಶಿಕ್ಷಣ ಇಲಾಖೆ ನೀಡಿರುವ ಮಾಹಿತಿಗಳ ಪ್ರಕಾರ ವಿವಿಗಳಲ್ಲಿ ಹಲವು ಹುದ್ದೆಗಳು ನೇಮಕಾತಿಗೆ ಬಾಕಿ ಇವೆ.
ಈ ಹುದ್ದೆಗಳನ್ನು ಭರ್ತಿ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾರ್ವಜನಿಕ ವಿಶ್ವ ವಿದ್ಯಾಲಯಗಳ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಪರಾಮರ್ಶಿಸಿ ಸೂಕ್ತ ಶಿಫಾರಸ್ಸುಗಳ್ನು ಮಾಡುವಂತೆ ಸರ್ಕಾರದಿಂದ ಡಿಸಿಎಂ ಡಿಕೆ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿಲಾಗಿದೆ.
ಈ ಸಮಿತಿಯು ಆರ್ಥಿಕ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಶ್ವ ವಿದ್ಯಾಲಯಗಳ ಸಂಶೋಧನೆ, ಮೂಲಸೌಲಭ್ಯ, ಅನುದಾನ, ಪಿಂಚಣಿ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಅನುಕೂಲ ಆಗುವಂತೆ ಅಗತ್ಯ ಹುದ್ದೆಗಳ ನೇಮಕಾತಿ ಹಾಗೂ ಇತರ ಅವಶ್ಯಕತೆಗಳ ಕುರಿತಾಗಿ ಸಭೆಗಳನ್ನು ಮಾಡಲಾಗುತ್ತದೆ.
ಒಟ್ಟು 32 ವಿಶ್ವವಿದ್ಯಾಲಯಗಳಲ್ಲಿ 2997 ಬೋಧಕ ಹುದ್ದೆಗಳು ಖಾಲಿ ಇದ್ದರೆ, 6295 ಬೋಧಕೇತರ ಹುದ್ದೆಗಳು ಖಾಲಿ ಇವೆ. ಇನ್ನು 4702 ಬೋಧಕ ಹುದ್ದೆಗಳು ಮಂಜೂರಾದರೆ, 9107 ಬೋಧಕೇತರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದೆ.






Any questions related to ರಾಜ್ಯದಲ್ಲಿ 32 ಸಾರ್ವಜನಿಕ ವಿಶ್ವ ವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ 9292 ಹುದ್ದೆಗಳು ಖಾಲಿ.?