Home » ಲೈವ್ ನ್ಯೂಸ್ » ಜ.23 ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಜ.23 ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

Facebook
X
WhatsApp
Telegram

ಕೊಪ್ಪಳ.21.ಜನವರಿ.26: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ  ಜನವರಿ 23 ರಂದು ಬೆಳಿಗ್ಗೆ 10 ಗಂಟೆಯಿoದ ಮಧ್ಯಾಹ್ನ 1.30ರ ವರೆಗೆ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಯೋಜಿಸಲಾಗಿದೆ.

ಪಿ.ಯು.ಸಿ., ಐಟಿಐ(ಯಾವುದೇ ವೃತ್ತಿ), ಡಿಪ್ಲೊಮಾ ಮೆಕ್ಯಾನಿಕಲ್, ಡಿಪ್ಲೊಮಾ ಎಲೆಕ್ಟಿçಕಲ್, ಇತರೆ ಪದವಿ ವಿದ್ಯಾರ್ಹತೆ ಹೊಂದಿದ 18 ರಿಂದ 30 ವರ್ಷದೊಳಗಿನ ನಿರುದ್ಯೋಗಿ ಪುರಷರು ದೃಢೀಕರಿಸಲಾದ ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳ 3 ಪ್ರತಿಗಳೊಂದಿಗೆ ಮತ್ತು ಆಧಾರ ಕಾರ್ಡಿನ ಪ್ರತಿ, ಬಯೋಡಾಟಾ (ರೆಸುಮ್) ಹಾಗೂ ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ.

ಉದ್ಯೋಗಾಕಾಂಕ್ಷಿಗಳು  https://forms.gle/JUms1oPocRNQufRo7     ಮೂಲಕ ನೋಂದಣಿ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology