Home » ಲೈವ್ ನ್ಯೂಸ್ » ಬೆಂಗಳೂರು ಚಲೋ.. ಬೆಂಗಳೂರು ಚಲೋ ಹೋರಾಟಕ್ಕೆ, ವೆಂಕಟೇಶ ಸಿ. ಅವರು ಕರೆ ನೀಡಿದ್ದಾರೆ.

ಬೆಂಗಳೂರು ಚಲೋ.. ಬೆಂಗಳೂರು ಚಲೋ ಹೋರಾಟಕ್ಕೆ, ವೆಂಕಟೇಶ ಸಿ. ಅವರು ಕರೆ ನೀಡಿದ್ದಾರೆ.

Facebook
X
WhatsApp
Telegram

ಬೆಂಗಳೂರು.14.ಜನವರಿ.26: ರಾಜ್ಯಾದ್ಯಂತ ನಾನ್ ಯುಜಿಸಿ ಅತಿಥಿ ಉಪನ್ಯಾಸಕರು ಫ್ರೀಡಂ ಪಾರ್ಕನಲ್ಲಿ ದಿನಾಂಕ: 19-01-2026 ನುಡಿದಂತೆ ಹೋರಾಟಕ್ಕೆ ಕರೆ ನೀಡಿದ್ದಾರೆ. ಸರ್ಕಾರ  ಎಲ್ಲಿವರೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವದಿಲ್ಲಾ ಅಲ್ಲಿವರೆಗೆ ನಿರಂತರ ಹೋರಾಟಕ್ಕೆ ಸಿದ್ಧರಾಗಿ ಬೇಡಿಕೆಗಳ  ಒತ್ತಾಯಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸತತ ಎರಡು,ಮೂರು ದಶಕದಿಂದ ಕಾರ್ಯ ನಿರ್ವಹಿಸ್ತಾ ಬಂದಿರುವ ಅತಿಥಿ ಉಪನ್ಯಾಸಕರು ಇವತ್ತು ಸೇವಾ ನಿವೃತ ಆಗಿದ್ದಾರೆ ಸರ್ಕಾರದ ಹುಸಿ ಭರವಸೆಗಳು ಕೇಳಿ ಇವತ್ ಖಾಯಂ ಮಾಡುತೇ ನಾಳೆ ಖಾಯಮತಿ ಮಾಡುತ್ತೆ ಇಂಥ ಆಶಾ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಾ ಮಾಡುತ್ತಾ ಎರಡು ರಿಂದ ಮೂರು ದಶಕ ಕಳೆದಿದ್ದಾರೆ ಇವತ್ತು ಅವರ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಿಲ್ಲ ಅವರ ಜೀವನದ ಸಾಧನೆ ಏನು ? ಇವತ್ತಿನ ನಿಜವಾದ ಪರಿಸ್ಥಿತಿ ನೋಡಿದರೆ ನಿವೃತಿ ಆಗಿರುವ ಅತಿಥಿ ಉಪನ್ಯಾಸಕರಿಗೆ ಪರಿವಾರ ನಡೆಸಲು ತುಂಬಾ ಕಷ್ಟ ಆಗುತ್ತಿದೆ ಅವರ ಸಾಮಾಜಿಕ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿದೆ.

ಇವರು 430 ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಕಡಿಮೆ ಸಂಬಳ ಪಡೆದು ಕಾರ್ಯ ಮಾಡಿದ್ದಾರೆ ಆ ಸಮಯದಲ್ಲಿ ಸರ್ಕಾರಕ್ಕೆ ಎಷ್ಟು ಲಾಭ ಆಗಿರಬಹುದು ?

ರಾಜ್ಯ ಸರ್ಕಾರ ರಾಜ್ಯಾದ್ಯಂತ 430 ಕಾಲೇಜುಗಳಲ್ಲಿ ಎರಡು ದಶಕದಿಂದ ಕಾರ್ಯ ನಿರ್ವಹಿಸಿರುವ ಅತಿಥಿ ಉಪನ್ಯಾಸಕರಿಗೆ ಯುಜಿಸಿ ಅನರ್ಹ ಮತ್ತು ಯುಜಿಸಿ ಅನರ್ಹ ಬೇಧಭಾವ ಮಾಡಿ ಖಾಯಂ ಮಾಡುವ ಸಮಯದಲ್ಲಿ ಅವರಿಗೆ ಸೇವೆಯಿಂದ ವಜಾಗೊಳಿಸಿದೇ.

ಸರ್ಕಾರದ ಹೇಳಿಕೆಗಳು:…  ನಮ್ ಸರ್ಕಾರ ಅತಿಥಿ ಉಪನ್ಯಾಸಕರಿಗೆ CLP ಸರ್ವೋಚ್ಚ ನ್ಯಾಯಾಲಯದ ಎಸ್.ಎಲ್.ಪಿ ಯ ಅಭಿಪ್ರಾಯ ಪಡೆದು ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಕೊಡುತ್ತಿದ್ದೇವೆ…….

ಅತಿಥಿ ಉಪನ್ಯಾಸಕರ ಅಭಿಪ್ರಾಯ:……. ಸರ್ವೋಚ್ಚ ನ್ಯಾಯಾಲಯದ ಎಸ್.ಎಲ್.ಪಿ ಯ ಅಭಿಪ್ರಾಯ ಬರುವವರೆಗೂ 6600 ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರಿಗೆ ಕುಟುಂಬ ನಿರ್ದಹಣೆ ಮಾಡಲು ಖರ್ಚ್ ವೆಚ್ಚ ಅವರು ಹೇಗೆ ಸಾಧ್ಯ ?

ಫ್ರೀಡಂ ಪಾರ್ಕನಲ್ಲಿ ದಿನಾಂಕ: 19-01-2026 ರಿಂದ ಬೆಳಗಾವಿ ಅಧಿವೇಶನದಲ್ಲಿ ನುಡಿದಂತೆ ಸರ್ಕಾರ ತಕ್ಷಣವೇ ನಡೆದಕೊಂಡು 2018 ರ ಯುಜಿಸಿ ನಿಯಮದಿಂದ ಹೊರಗೆ ಬಿದ್ದ 6600 ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರಿಗೆ ಪರ್ಯಾಯ ವ್ಯವಸ್ಥೆ ಹಾಗೂ ಪರ್ಯಾಯ ವ್ಯವಸ್ಥೆ ಕಲ್ಪಿಸುವರೆಗೆ ಪತಿ ತಿಂಗಳು ಗೌರವಧನ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆಕರೆ.

ಉನ್ನತ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿರುವ 6600 ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರನ್ನು ಉನ್ನತ ಶಿಕ್ಷಣ ಇಲಾಖೆಯು 2018 ರ ಯು.ಜಿ.ಸಿ ನಿಯಮವನ್ನು ಮುಂದೆ ಇಟ್ಟುಕೊಂಡು 2025-26 ನೇ ಸಾಲಿನಲ್ಲಿ 6600 ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರನ್ನು ಕೈಬಿಡಲಾಗಿದೆ. ಯಾವುದೇ ಸೌಲಭ್ಯಗಳಿಲ್ಲದೆ ಕಡಿಮೆ ವೇತನಕ್ಕೆ ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರನ್ನು ದುಡಿಸಿಕೊಂಡು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಕೈ ಬಿಡುತ್ತಿರುವುದರಿಂದ 6600 ಕುಟುಂಬಗಳು ಡಿಸೆಂಬರ್ 08 ನೇ ತಾರೀಖಿನಿಂದ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿವೆ. ಸರ್ಕಾರವು ತಕ್ಷಣದೇ ಇತರೆ ಇಲಾಖೆಯಲ್ಲಿ ಮಾನವೀಯತೆ ನೆಲೆಗಟ್ಟಿನ ಆಧಾರದ ಮೇಲೆ ಸೇವೆ ಸಲ್ಲಿಸಲು ಜೆ.ಓ.ಸಿ ಮಾದರಿಯಂತೆ ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸಲು 60 ವರ್ಷದವರೆಗೆ ಅವಕಾಶ’ ಕೊಡಿ.

ಹಕ್ಕೋತ್ತಯಗಳು:

1) 2025-26 ನೆಯ ಸಾಲಿಗೆ ಹೊರಗುಳಿದ 6600 ನಾನ್-ಯು.ಜಿ.ಸಿ ಆತಿಥಿ ಉಪನ್ಯಾಸಕರಿಗೆ ವಯೋಮೀತಿ ಮೀರಿದ ಕಾರಣ ಬೇರೆ ವಲಯದಲ್ಲಿ ಕೆಲಸ ದೊರೆಯಲು ಸಾಧ್ಯವಿಲ್ಲ ತಕ್ಷಣವೇ ಕುಟುಂಬ ನಿರ್ವಹಣೆ ಮತ್ತು ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳ ವಿಧ್ಯಾಭ್ಯಾಸ ನಿರ್ವಹಿಸುವುದು ಕಷ್ಟವಾಗುತ್ತದೆ. ಆದ ಕಾರಣ ಸರ್ಕಾರವೇ ರಕ್ಷಣೆ ಮಾಡುವ ಜವಾಬ್ದಾರಿ.ತೆಗೆದುಕೊಳ್ಳುವುದು.

) ಉನ್ನತ ಶಿಕ್ಷಣ ಇಲಾಖೆಯು ದಿನಾಂಕ:08-10-2025 ರ ತೀರ್ಪಿನ ಸಂಬಂಧ ಕಾನೂನು ಅಭಿಪ್ರಾಯ ಪಡೆದು ಅದರನ್ವಯ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಯನ್ನು ದಾಖಲಿಸಲು ಸರ್ಕಾರವು ಆದೇಶ ໐໙ 425 0 2025, 05:29-11-2015 5 ಸರ್ವೋಚ್ಚ ನ್ಯಾಯಾಲಯದ ಎಸ್.ಎಲ್.ಪಿ ಯ ಅಭಿಪ್ರಾಯ ಬರುವವರೆಗೂ 6600 ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರಿಗೆ ಕುಟುಂಬ ನಿರ್ದಹಣೆ ಮಾಡಲು ಪ್ರತಿ ತಿಂಗಳು ಗೌರವಧನ ಅಥವಾ ಇತರೆ ಇಲಾಖೆಯಲ್ಲಿ ಸೇವೆ ಸಲ್ಲಿಸಲು ತಕ್ಷಣವೇ ಅವಕಾಶ ಒದಗಿಸುವುದು

3) ಹೊರಗುಳಿದ 6600 ನಾನ್-ಯು.ಜಿ.ಸಿ ಅತಿಥಿ ಉಪನ್ಯಾಸಕರಿಗೆ ಅವರವರ ಸ್ಥಳೀಯ ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿರುವ ಸರ್ಕಾರದ ವಿವಿಧ ಇಲಾಖೆಗಳಲ್ಲಿ ತಾತ್ಕಲಿಕವಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವುದು.

4) ರಾಜ್ಯದ ಎಲ್ಲಾ ಹೊರಗುಳಿದ 6600 ನಾನ್-ಯುಜಿಸಿ ಅತಿಥಿ ಉಪನ್ಯಾಸಕರು ಈ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಲು ಕೋರಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology