ಬೀದರ.03.ಜನವರಿ.26:- ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಅವರು ಜನವರಿ.4 ರಿಂದ 6 ರವರೆಗೆ ಬೀದರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿರುತ್ತಾರೆ.
ಅವರು ಜನವರಿ. 4 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೀದರನ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಚಿಂಚೋಳಿ ಶ್ರೀ ವೀರೇಂದ್ರ ಪಾಟೀಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿರುವ ಶ್ರೀ ವೀರೇಂದ್ರ ಪಾಟೀಲ್ ಎಜ್ಯುಕೇಶನ್ ಟ್ರಸ್ಟ್ನ 24ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಭಾಲ್ಕಿಗೆ ಪ್ರಯಾಣಿಸಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಜನವರಿ.5 ರಂದ ಬೆಳಿಗ್ಗೆ 11 ಗಂಟೆಗೆ ಬೀದರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯತಲ್ಲಿ ಭಾಗವಹಿಸಲಿದ್ದಾರೆ.
ನಂತರ ಸಂಜೆ 6 ಗಂಟೆಗೆ ಬೀದರನಿಂದ ರಸ್ತೆ ಮೂಲಕ ಭಾಲ್ಕಿಗೆ ಪ್ರಯಾಣಿಸಿ ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ.
ಜನವರಿ.6 ರಂದು ಬೆಳಿಗ್ಗೆ 11 ಗಂಟೆಗೆ ಬೀದರನ ಉಟಗೆ ಆಸ್ಪತ್ರೆಯಲ್ಲಿ “WOULD DISABILITIERS DAY” ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 1 ರಿಂದ ಸಂಜೆ 5.25 ಗಂಟೆಯವರೆಗೆ ಬೀದರನ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 6 ಗಂಟೆಗೆ ಭಾಲ್ಕಿ ತಾಲ್ಲೂಕಿನ ಸಿದ್ದಾಪುರವಾಡಿಯಲ್ಲಿ ಸಿದ್ರಾಮೇಶ್ವರ ಜಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7 ಗಂಟೆಗೆ ಸಿದ್ದಾಪುರವಾಡಿಯಿಂದ ರಸ್ತೆ ಮೂಲಕ ಭಾಲ್ಕಿಗೆ ಪ್ರಯಾಣಿಸಿ ಅಲ್ಲಿಯೇ ವಾಸ್ತವ್ಯತ ಮಾಡಲಿದ್ದಾರೆಂದು ಸಚಿವರ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








Any questions related to ಇಂದಿನಿಂದ ಜ.6 ರವರೆಗೆ ಸಚಿವ ಈಶ್ವರ ಬಿ.ಖಂಡ್ರೆ ಅವರ ಬೀದರ ಜಿಲ್ಲಾ ಪ್ರವಾಸ?