Home » ಲೈವ್ ನ್ಯೂಸ್ » ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ ಸುಪ್ರೀಂ ಕೋರ್ಟ್ ತೀರ್ಪು ಕಾಯಿದಿರಿಸಿ ಪರ್ಯಾಯ ಉದ್ಯೋಗ ಕಲ್ಪಿಸಲು ಆಗ್ರಹ.

ನಾನ್ ಯುಜಿಸಿ ಅತಿಥಿ ಉಪನ್ಯಾಸಕರಿಗೆ ಸುಪ್ರೀಂ ಕೋರ್ಟ್ ತೀರ್ಪು ಕಾಯಿದಿರಿಸಿ ಪರ್ಯಾಯ ಉದ್ಯೋಗ ಕಲ್ಪಿಸಲು ಆಗ್ರಹ.

Facebook
X
WhatsApp
Telegram

ಶಿಮೊಗಾ.03.ಜನವರಿ.26: ಪದವಿ ಕಾಲೇಜುಗಳ ಅತಿಥಿ ಉಪನ್ಯಾ ಸಕರ ರಾಜ್ಯ ಸಮನ್ವಯ ಸಮಿತಿ ಯ ನಿಯೋಗ ಶಿಕಾರಿಪುರದ ಕು -ಮದ್ವತಿ ವಿದ್ಯಾಸಂಸ್ಥೆಯಲ್ಲಿ ಬಿಜೆ ಪಿ ರಾಜ್ಯಾಧ್ಯಕ್ಷರು, ಶಾಸಕರು ಆದ
ಬಿ. ವೈ. ವಿಜಯೇಂದ್ರ ರವರನ್ನು ಭೇಟಿ ಮಾಡಿದರು.

ದಶಕಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆಸಲ್ಲಿಸುತ್ತಾ ಬಂದ 6,0000 ಅತಿಥಿ ಉಪನ್ಯಾ ಸಕರು ಯುಜಿಸಿ ಅರ್ಹತೆ ಪಡೆದಿ ಲ್ಲ ಎಂಬ ಕಾರಣಕ್ಕೆ ಪ್ರಸಕ್ತ 2025-26 ನೇ ಸಾಲಿನ ನೇಮಕಾತಿ
ಪ್ರಕ್ರಿಯೆ ಇಂದ ಕೈ ಬಿಡಲಾಗಿದೆ.

ಇದರಿಂದ ಸಾವಿರಾರು ಕುಟುಂಬ ಗಳು ಕಂಗಾಲಾಗಿದ್ದಾರಗಿದ್ದಾರೆ.
ಧೀರ್ಘ ಕಾಲದಿಂದ ಸೇವೆಸಲ್ಲಿ ಸುತ್ತಾ ಬಂದ ಅನೇಕರು ವಯೋ
ಮಿತಿ ಮೀರಿದ್ದಾರೆ. ಪರ್ಯಾಯ ಉದ್ಯೋಗ ಸಿಗುವುದು ಕಷ್ಟವಾ ಗಿದೆ. ಕಳೆದ ಎರಡು ತಿಂಗಳುಗಳಿಂದ ತಾತ್ಕಾಲಿಕ ಹುದ್ದೆ ಇಲ್ಲದೆ, ವೇತನ ಇಲ್ಲದೆ ಬಿಪಿ, ಶುಗರ್ ಮಾತ್ರೆಗೂ ಹಣ ಇಲ್ಲದೇಕೆ ಲವರು ಪರದಾ ಡುವಂತಾಗಿದೆ.

ಆದ್ದರಿಂದ ರಾಜ್ಯದ ಅಧಿಕೃತ ವಿರೋಧ ಪಕ್ಷವಾದ ತಾವು ತಮ್ಮ ಪಕ್ಷದ ಪರವಾಗಿ ನಮ್ಮಗಳ
  ಸಂಕಷ್ಟಕ್ಕೆ ಧ್ವನಿಯಾಗಬೇಕು. ಎಂದು ನಿಯೋಗ ಮನವಿ ಮಾಡಿ ದರು.

ಈಗಲೇ ಸರ್ಕಾರದ ತಾತ್ಕಾಲಿಕ ಸೇವೆಯಿಂದ ಹೊರ ಬಂದ ಅತಿಥಿ ಉಪನ್ಯಾಸಕರ ಪರವಾಗಿ ಸುಪ್ರೀ ಕೋರ್ಟ್ ನಲ್ಲಿ ಎಸ್. ಎಲ್. ಪಿ. ಹಾಕುವುದದಾಗಿ ಸರ್ಕಾರ ಹೇಳು ತ್ತಿದೆ. ಆದರೆ ಸದರಿ ವಿಚಾರ ಏನಾ ಗಿದೆ ಎಂಬ ಮಾಹಿತಿ ಇಲ್ಲ.

ಆದ್ದರಿಂದ ಸುಪ್ರೀಂ ಕೋರ್ಟ್ ತೀರ್ಪು ಬರುವವರಿಗೆ ರಾಜ್ಯದ ವಿವಿಧ ಇಲಾಖೆಯಲ್ಲಿ ಅಥವಾ ಮಾತೃ ಇಲಾಖೆಯಲ್ಲಿ ಖಾಲಿ ಇರುವ ನಾನ್ ಟೀಚಿಂಗ್ ಹುದ್ದೆಗಳಿಗೆ ಅತಿಥಿ ಉಪನ್ಯಾ ಸಕರನ್ನು ನೇಮಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹಾಕು ವಂತೆ ನಿಯೋಗ ಕೋರಲಾಗಿದೆ.

ನಿಯೋಗದಲ್ಲಿ ಸಮನ್ವಯ ಸಮಿ ತಿಯ ರಾಜ್ಯಾಧ್ಯಕ್ಷರಾದ ಡಾ. ಸೋಮಶೇಖರ್.ಎಚ್. ಶಿಮೊಗ್ಗಿ.
ಡಾ. ಈಶ್ವರ್ ರಾವ್, ನಾಗರಾಜ್ ಕಾಗಿನಲ್ಲಿ, ಶಿವಮೂರ್ತಿ, ಸುಧೀರ್
ಇತರರು ಇದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology