ಬೀದರ,25.ಡಿಸೆಂಬರ್.25:- ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ/ ಮಂಜೂರಾಗದೇ ಬಾಕಿ ಉಳಿದಿರುವ ಕರ್ನಾಟಕ ರಾಜ್ಯದ್ಯಾಂತ ಒಟ್ಟು 569 ಸನ್ನದುಗಳನ್ನು ಇ-ಹರಾಜು ಮಾಡಲು ಉದ್ದೇಶಿಸಿದ್ದು, ಬೀದರ್ ಜಿಲ್ಲೆಗೆ ಒಟ್ಟು 10 10 CL-2A & 1 CL-9A ಸನ್ನದುಗಳನ್ನು ಹಂಚಿಕೆ ಮಾಡಿರುತ್ತಾರೆ.
ದಿನಾಂಕ: 22-12-2025 ರಿಂದ ಬಿಡ್ಡುದಾರರ ನೋಂದಣಿ ಪ್ರಕ್ರಿಯೆ ಆನ್‍ಲೈನ್ ಮೂಲಕ ಪ್ರಾರಂಭವಾಗಿದ್ದು, ಅರ್ಜಿದಾರರು MSTC ಲಿಮಿಟಡ್‍ನ ರವರ ವೆಬ್‍ಸೈಟ್ https://www.mstcecommerce.com ಮೂಲಕ ಬಿಡ್ಡುದಾರರುಗಳನ್ನು ಆಹ್ವಾನಿಸಲಾಗಿದೆ ಎಂದು ಬೀದರ ಅಬಕಾರಿ ಉಪ ಆಯುಕ್ತರಾದ ರವಿಶಂಕರ ಎ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೊಂದಣಿ ಶುಲ್ಕ ರೂ. 1,000 ಹಾಗೂ ಜಿ.ಎಸ್.ಟಿ ರೂ.180 (18%) ಗಳನ್ನು ಪಾವತಿಸಿ ನೋಂದಣಿ ಮಾಡಿ ನಂತರ ಪ್ರತಿ ಸನ್ನದಿಗೆ ಬಿಡ್ಡ ಮಾಡಲು ಪ್ರತ್ಯೇಕವಾಗಿ ಅರ್ಜಿ ಶುಲ್ಕ ರೂ. 50,000 ಗಳನಡ್ಡಿ-ಪೆಮೆಂಟ್ ಮೂಲಕ ಪಾವತಿಸಬೇಕಾಗಿದ್ದು, ಸದರಿ ಮೊತ್ತವು Non-refundable ಆಗಿರುತ್ತದೆ. ನಂತರದಲ್ಲಿ Final bidding ಮೊತ್ತಕ್ಕೆ 2% EMD ಮೊತ್ತವನ್ನು ಸಹ ಇ-ಪೆಮೆಂಟ್ ಮೂಲಕ ಪಾವತಿಸಬೇಕಾಗಿರುತ್ತದೆ.
ಬೀದರ ಜಿಲ್ಲಾ ಸಂಭಾವ್ಯ ಬಿಡ್ಡುದಾರರಿಗೆ ದಿನಾಂಕ: 02-01-2026 ರಂದು ಬೆಳಿಗ್ಗೆ 10:30 ಗಂಟೆಯಿಂದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರ ರಂಗಮಂದಿರ ಬೀದರ ಇಲ್ಲಿ ಒಂದು ದಿನದ ತರಬೇತಿಯನ್ನು ಆಯೋಜಿಸಲಾಗಿರುತ್ತದೆ.
ನೇರ ಹರಾಜು 13-01-2026 ರಂದು ಸಾಲ್ಟ್-1 (ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ): ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಆನ್‍ಲೈನ್ ಮೂಲಕ ವ್ಯಾಲೆಟ್‍ಗೆ ಹಣ ಪಾವತಿಯು ಖಚಿತವಾದ ನಂತರವೇ ಬಿಡ್‍ದಾರರುಗಳು ಆನ್‍ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ಆದ್ದರಿಂದ ಬಿಡ್‍ದಾರರುಗಳು ತಾವು ಭಾಗವಹಿಸಲು ಇಚ್ಚಿಸುವ ನಿರ್ದಿಷ್ಟ ಸ್ಲಾಟನ ಹರಾಜು ಪ್ರರಂಭವಾಗುವ 48 ಗಂಟೆಗಳ (working day) ಮುಂಚಿತವಾಗಿ ಅಂದರೆ ದಿನಾಂಕ: 08-01-2025 ರ ಮುಂಚಿತವಾಗಿ) ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದಲ್ಲಿ ಪ್ರಕ್ರಿಯೆ ಸುಗಮವಾಗುತ್ತದೆ. ಆನ್‍ಲೈನಲ್ಲಿ ನೋಂದಣಿ ಮಾಡುವಾಗ, ವ್ಯಾಲೆಟ್‍ಗೆ ಹಣ ಪಾವತಿ ಮಾಡುವಾಗ ಅಥವಾ ಇನ್ನಾವುದೇ ಸಮಸ್ಸೆಗಳು ಉದ್ಭವಿಸಿದಲ್ಲಿ MSTC ಲಿಮಿಟಡ್ ಕಂಪನಿಯ ಸಹಾಯಕ್ಕಾಗಿ 9535347426 ಹಾಗೂ 9535198026 ರವರುಗಳನ್ನು ಸಂಪರ್ಕಿಸ ಬಹುದಾಗಿರುತ್ತದೆ.
ಅಬಕಾರಿ ಆಯುಕ್ತರು ಹೊರಡಿಸಿರುವ ವೇಳಾಪಟ್ಟಿಯನ್ನು ಅಬಕಾರಿ ಇಲಾಖಾ ವೆಬ್‍ಸೈಟ್ (https://stateexcise.karnataka.gov.in ಮತ್ತು ಎಂ.ಎಸ್.ಟಿ.ಸಿ ಇ-ಹರಾಜು ಪೆÇೀರ್ಟಲ್ https://www.mstcecommerce.com ನಲ್ಲಿ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.








Any questions related to ಬೀದರ್ ಜಿಲ್ಲೆಯ 11 ಮದ್ಯದ ಅಂಗಡಿಗಳ ಇ-ಹರಾಜು?