Home » ಲೈವ್ ನ್ಯೂಸ್ » ಅಬಕಾರಿ ಇಲಾಖೆಯಿಂದ ಇ-ಹರಾಜು: ಬಿಡ್ ಆಹ್ವಾನ.

ಅಬಕಾರಿ ಇಲಾಖೆಯಿಂದ ಇ-ಹರಾಜು: ಬಿಡ್ ಆಹ್ವಾನ.

Facebook
X
WhatsApp
Telegram

ಕೊಪ್ಪಳ.24.ಡಿಸೆಂಬರ್ 25: ಅಬಕಾರಿ ಇಲಾಖೆಯಲ್ಲಿ ಭಾರತೀಯ ಮದ್ಯ ಅಥವಾ ವಿದೇಶ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಇ-ಹರಾಜು ನಡೆಸುತ್ತಿದ್ದು, ಬಿಡ್‌ಗಳನ್ನು ಆಹ್ವಾನಿಸಿದೆ.


ಅಬಕಾರಿ ಇಲಾಖೆ ಭಾರತೀಯ ಮದ್ಯ ಅಥವಾ ವಿದೇಶ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಯಶಸ್ವಿ ಹೆಚ್-1 ಬಿಡ್ ಗಳಿಗೆ ಸಿ.ಎಲ್-2ಎ ಮತ್ತು ಸಿ.ಎಲ್-9ಎ ನಮೂನೆಗಳಲ್ಲಿ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದು ನೀಡಲು ಬಿಡ್‌ದಾರರಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಈ ಪ್ರಕ್ರಿಯೆಯು ಇ-ಹರಾಜು ವೆಬ್‌ಸೈಟ್  https://www.msicecommerce.com  ಮೂಲಕ ನಡೆಯಲಿದ್ದು, ಹರಾಜು ನಡೆಯುವ ಮತ್ತು ಅಂಗೀಕಾರ ಪತ್ರ (ಎಲ್‌ಒಎ) ನೀಡುವ ವರ್ಷವನ್ನು ಒಳಗೊಂಡAತೆ ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯಿಸುತ್ತದೆ.


ಇ-ಹರಾಜಿಗೆ ಸಂಬoಧಿಸಿದ ವಿವರವಾದ ಮಾರ್ಗಸೂಚಿಗಳು ಇಲಾಖೆಯ ವೆಬ್‌ಸೈಟ್  https://stateexcise.karnataka.gov.in                   ನಲ್ಲಿ ಲಭ್ಯವಿರುತ್ತವೆ.                                                           ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08539-222002, 222001,                                      ಮೊ.ಸಂ. 9449597170 ಗೆ ಸಂಪರ್ಕಿಸಬಹುದು ಎಂದು ಕೊಪ್ಪಳ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology