Home » ಲೈವ್ ನ್ಯೂಸ್ » ಒತ್ತಡ ಬದುಕು ನಿವಾರಣೆಗೆ ಯೋಗ ಸಹಕಾರಿ-ನ್ಯಾ.ವಿಜಯಕುಮಾರ ಎಂ.ಆನoದಶೆಟ್ಟಿ

ಒತ್ತಡ ಬದುಕು ನಿವಾರಣೆಗೆ ಯೋಗ ಸಹಕಾರಿ-ನ್ಯಾ.ವಿಜಯಕುಮಾರ ಎಂ.ಆನoದಶೆಟ್ಟಿ

Facebook
X
WhatsApp
Telegram

ಬೀದರ.27.ಜೂನ್.25:- ಒತ್ತಡ ಬದುಕು ನಿವಾರಣೆಗೆ ಯೋಗ ಸಹಕಾರಿಯಾಗಿರುವುದರಿಂದ ಎಲ್ಲರೂ ದಿನನಿತ್ಯ ಯೋಗ ಮಾಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಜಯಕುಮಾರ ಎಂ ಆನಂದಶೆಟ್ಟಿ ಹೇಳಿದರು.


ಅವರು ಇತ್ತೀಚಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೀದರ, ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಆವರಣ ಬೀದರದಲ್ಲಿ ಹಮ್ಮಿಕೊಂಡಿದ್ದ 11ನೇ ಅಂತರಾಷ್ರ‍್ಟೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗವನ್ನು ಇದೀನ ಮಾತ್ರ ಸಿಮಿತವಾಗಿಡದೆ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೇಹದ ಸರ್ವ ಅಂಗಗಳು ಕೆಲಸಕ್ಕೆ ವ್ಯಾಯಾಮ ಬಹುಮುಖ್ಯವಾಗಿರುವುದರಿಂದ ಎಲ್ಲರೂ ಯೋಗಕ್ಕೆ ಒತ್ತು ನೀಡಬೇಕೆಂದರು.


ಈ ಸಂದರ್ಭದಲ್ಲಿ ಬೀದರ ತಾಲೂಕಿನ ಎಲ್ಲಾ ನ್ಯಾಯಾಧೀಶರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಮತ್ತು ವಕೀಲರು, ಜಿಲ್ಲಾ ನ್ಯಾಯಾಂಗ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಿಬ್ಬಂಧಿ ವರ್ಗದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Author

ಪ್ರಮುಖ ಸುದ್ದಿ

Stock market

Astrology