ವೈಜ್ಞಾನಿಕ ಪಶುಪಾಲನೆಯಿಂದ ಆರ್ಥಿಕ ಅಭಿವೃದ್ಧಿ, ಸುಸ್ಥಿರತೆ ಕುರಿತು ತರಬೇತಿ ಕಾರ್ಯಕ್ರಮಕ್ಕಿಂದು ಚಾಲನೆ
ಬೀದರ.16.ಜುಲೈ.25:- ಜಿಲ್ಲೆಯ ರೈತರು ಕೃಷಿಯ ಜೊತೆಯಲ್ಲಿ ವೈಜ್ಞಾನಿಕ ಪಶುಪಾಲನೆಯಂತಹ ಉಪಕಸುಬುಗಳನ್ನು ಕೈಗೆತ್ತಿಕೊಂಡರೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದು ಕರ್ನಾಟಕ ಪಶುವೈದ್ಯಕೀಯ, ಪಶು ಹಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ತಿಳಿಸಿದರು. ಅವರು ಮಂಗಳವಾರ ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ) ಕಟ್ಟಿತುಗಾಂವ ಬೀದರ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತ ಬಾಂಧವರಿಗಾಗಿ/ಪಶುಪಾಲಕರಿಗಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ ಬೀದರನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಬೆಂಗಳೂರು ಪ್ರಾಯೋಜಿಸಿರುವ…