ಜ್ಞಾನಸುಧಾ ವಿದ್ಯಾಲಯದಲ್ಲಿ ಸಂಭ್ರಮದಿಂದ ವಿಶ್ವ ಸಂಗೀತ ದಿನಾಚರಣೆ
ಬೀದರ.22.ಜೂನ್.25:- ಜಿಎಸ್‍ವಿ ಸರಿಗಮಪ’ ಸ್ಪರ್ಧೆ: ಗಾನ ಸುಧೆ ಹರಿಸಿದ ವಿದ್ಯಾರ್ಥಿಗಳುಬೀದರ್: ನಗರದ ಮಾಮನಕೇರಿಯಲ್ಲಿರುವ ಜಿಲ್ಲೆಯ ಪ್ರತಿಷ್ಠಿತ ಶಾಲೆಯಾದ ಜ್ಞಾನಸುಧಾ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ‘ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ತಮ್ಮ ಸುಮಧುರ ಕಂಠದಲ್ಲಿ ಸಂಗೀತ ಸುಧೆಯನ್ನು ಹರಿಸಿದರು. ವಿಶ್ವ ಸಂಗೀತ ದಿನಾಚರಣೆ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ಹಮ್ಮಿಕೊಳ್ಳಲಾಗಿದ್ದ ‘ಜ್ಞಾನಸುಧಾ ವಿದ್ಯಾಲಯ (ಜಿಎಸ್‍ವಿ) ಸರಿಗಮಪ’ ಸ್ಪರ್ಧೆಯಿಂದಾಗಿ ವಿದ್ಯಾಲಯದ ಜ್ಞಾನರಂಗ ಸಭಾಂಗಣದಲ್ಲಿ ಸಂಗೀತ ಹಬ್ಬದ ವಾತಾವರಣ ನಿರ್ಮಿತಗೊಂಡಿತು. ಸ್ಪರ್ಧಾರ್ಥಿಗಳು ಸುಶ್ರಾವ್ಯವಾಗಿ ಹಾಡುವ ಮೂಲಕ ಪ್ರೇಕ್ಷಕರಿಗೆ…