|

ಜಾಗೃತಿ ಸಮಿತಿಗೆ ನಾಮನಿರ್ದೇಶನಕ್ಕೆ ಅರ್ಜಿ ಆಹ್ವಾನ

ಜಾಗೃತಿ ಸಮಿತಿಗೆ ನಾಮನಿರ್ದೇಶನಕ್ಕೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡೇತರ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕರು ಕಲಬುರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಎಂ.ಎಸ್.ಕಾಯ್ದೆ 2013 ಸೆಕ್ಷನ್ 24ರಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಜಾಗೃತಿ ಸಮಿತಿಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷ ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಗಳನ್ನು ಶಾಶ್ವತ ಅಹ್ವಾನಿತರೆಂದು ನಾಮನಿರ್ದೇಶನ ಮಾಡಲು ಸಫಾಯಿ ಕರ್ಮಚಾರಿಗಳ ಮತ್ತು ಮ್ಯಾನ್ಯುಯಲ್ ಸ್ಕ್ಯಾವೆಂಜರಗಳವರ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿರುವವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ 2013ರ ಸೆಕ್ಷನ್ 24ರನ್ವಯ ಜಿಲ್ಲಾ ಮಟ್ಟದ ಜಾಗೃತಿ ಸಮಿತಿಗೆ ಸದಸ್ಯರನ್ನು ನೇಮಿಸಬೇಕಾಗಿದೆ.

ಕೊನೆಯ ದಿನಾಂಕ:

ಅರ್ಜಿಯನ್ನು 2025ರ ಜು.5ರ ಸಂಜೆ 5 ಗಂಟೆಯೊಳಗಾಗಿ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿನಿರ್ದೇಶಕರ ಕಚೇರಿ ಕಲಬುರ್ಗಿ.

ಹೆಚ್ಚಿನ ಮಾಹಿತಿಗಾಗಿ:

ಕಚೇರಿ ದೂರವಾಣಿ ಸಂಖ್ಯೆ 08472-278621, ಮೊಬೈಲ್ ಸಂಖ್ಯೆ 9480843034 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Similar Posts

Leave a Reply

Your email address will not be published. Required fields are marked *