ಕೊಪ್ಪಳ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ವರ್ಣಿತ್ ನೇಗಿ ಅಧಿಕಾರ ಸ್ವೀಕಾರ
ಕೊಪ್ಪಳ.ಜೂನ್.25:- ಕೊಪ್ಪಳ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ವರ್ಣಿತ್ ನೇಗಿ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಸಿಇಓ ರಾಹಲ್ ರತ್ನಂ ಪಾಂಡೇಯ ಅವರು ನೂತನ ಸಿಇಓ ಅವರಿಗೆ ಅಧಿಕಾರಿ ಹಸ್ತಾಂತರಿದರು. 2019 ರ ಐಎಎಸ್ ಬ್ಯಾಚ್‌ನ ಅಧಿಕಾರಿಯಾದ ವರ್ಣಿತ್ ನೇಗಿ ಅವರು ಮೂಲತಃ ಛತ್ತೀಸಗಡ ರಾಜ್ಯದವರಾಗಿದ್ದಾರೆ. ಅವರು ಮೊದಲು ತಮ್ಮ ಪ್ರೋಬೇಷನರಿ ಅವಧಿಯನ್ನು ಕೊಪ್ಪಳದಲ್ಲಿ ಮುಗಿಸಿದ ನಂತರ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿ ನಂತರ ಮೈಸೂರು ಆಡಳಿತ ತರಬೇತಿ ಸಂಸ್ಥೆ(ಎ.ಟಿ.ಐ)…