NEET-2025 ಪರೀಕ್ಷೆಯಲ್ಲಿ ಜ್ಞಾನ ಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ!!
|

NEET-2025 ಪರೀಕ್ಷೆಯಲ್ಲಿ ಜ್ಞಾನ ಸುಧಾ ಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ!!

ಇತ್ತೀಚಿಗೆ ಪ್ರಕಟಗೊಂಡ NEET-2025 ರ ಫಲಿತಾಂಶದಲ್ಲಿ ನಗರದ ಪ್ರತಿಷ್ಠಿತ ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಕಾಲೇಜಿಗೆ ಮತ್ತು ಬೀದರ ಜಿಲ್ಲೆಗೆ ಗೌರವ ತಂದು ಕೊಟ್ಟಿದ್ದಾರೆ. ಈ ಸಾಧನೆಗೆ ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಪೂರ್ಣಿಮಾ ಜಾರ್ಜ್, ಜ್ಞಾನ ಸುಧಾ ವಿದ್ಯಾಲಯದ ನಿರ್ದೇಶಕರಾದ ಡಾ. ಮುನೇಶ್ವರ ಲಾಖ ಜ್ಞಾನ ಸುಧಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ಚನ್ನವೀರ ಪಾಟೀಲ್, ಜ್ಞಾನ ಸುಧಾ ವಿಜ್ಞಾನ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಸುಜಾತಾ…

ಹಾಸ್ಟಲ್‌ಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ
|

ಹಾಸ್ಟಲ್‌ಗೆ ಜಿಲ್ಲಾಧಿಕಾರಿ ಭೇಟಿ: ಪರಿಶೀಲನೆ

ಬೀದರ.17.ಜೂನ್.25:- ಬೀದರನ ಕಮಲನಗರ ವಸತಿ ಪೂರ್ವ ಬಾಲಕರ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸೌಕರ್ಯಗಳ ಕುರಿತು ಮಾಹಿತಿ ಪಡೆದರು. ಅವರು ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದ ಕಮಲನಗರ ವಸತಿ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಸವಲತ್ತುಗಳನ್ನು ಪರಿಶೀಲಿಸಿದರು. ಊಟ, ತಿಂಡಿ, ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಚಂದೋರಿ ಗ್ರಾಮದಲ್ಲಿ ನಡೆಯುತ್ತಿರುವ ನಬಾರ್ಡ ಹೊಸ ಕಟ್ಟಡದ ಕಾಮಗಾರಿ…

ಪ್ರವೇಶಾತಿಗಾಗಿ ಅರ್ಜಿ ಆಹ್ವಾನ
|

ಪ್ರವೇಶಾತಿಗಾಗಿ ಅರ್ಜಿ ಆಹ್ವಾನ

ಬೀದರ.17.ಜೂನ್.25:- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಜನವಾಡ ರಸ್ತೆ ಬೀದರದಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ಬಿ.ಎ., ಬಿ.ಕಾಂ., ಹಾಗೂ ಬಿ.ಎಸ್ಸಿ. ಪ್ರಥಮ ವರ್ಷಕ್ಕೆ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತ ಪಿಯುಸಿ ಪಾಸಾದ ಮಹಿಳಾ ವಿದ್ಯಾರ್ಥಿನಿಯರು ದಿನಾಂಕ: 24-04-2025 ರಿಂದ 30-06-2025 ರವರೆಗೆ ದಂಡ ರಹಿತವಾಗಿ ಹಾಗೂ ದಿನಾಂಕ: 01-07-2025 ರಿಂದ 07-07-2025 ರವರೆಗೆ 500 ರೂ. ದಂಡದೊoದಿಗೆ ಪ್ರವೇಶ ಪಡೆಯಬಹುದಾಗಿದೆ ಹೆಚ್ಚಿನ ಮಾಹಿತಿ…

ಜೂ.19 ರಂದು ವಿದ್ಯುತ್ ವ್ಯತ್ಯಯ
|

ಜೂ.19 ರಂದು ವಿದ್ಯುತ್ ವ್ಯತ್ಯಯ

ಬೀದರ.17.ಜೂನ್.25:-ಕಮಠಾಣ ಉಪ-ಕೇಂದ್ರದಿAದ ಸರಬರಾಜು ಆಗುವ 110/33-11ಕೆವಿ ಕಮಠಾಣ ಫೀಡರನ ಮೇಲೆ ತುರ್ತು ಕಾರ್ಯ ಇರುವುದರಿಂದ ದಿನಾಂಕ: 19-06-2025 ರಂದು ಬೆಳಿಗ್ಗೆ 8 ಗಂಟೆಯಿoದ ಮಧ್ಯಾಹ್ನ 2 ಗಂಟೆಯವರೆಗೆ 11ಕೆವಿ ಫೀಡರಗಳಾದ 11ಕೆವಿ ಕಮಠಾಣ 11ಕೆವಿ ಕಾಲೇಜ್, 1ಕೆವಿ ಮಿರ್ಜಾಪೂರ, 11ಕೆವಿ ಕಂಗನ್‌ಕೋಟ್, 11ಕೆವಿ ಬೆಳ್ಳೂರ್, 11ಕೆವಿ ಬಾವಗಿ, 33ಕೆವಿ ಮುನ್ನಳ್ಳಿ, 33ಕೆವಿ ಜಿಜಿಪಿಎಲ್ ಫೀಡರಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಕಾರಣ ಗ್ರಾಹಕರು ಸಹಕರಿಸಬೇಕೆಂದು ಬೀದರ ವಿಭಾಗದ ಜೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
|

ಬಾಲ ಪುರಸ್ಕಾರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಬೀದರ.17.ಜೂನ್.25:- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಿಂದ ಭಾರತ ಸರ್ಕಾರವು “ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ” ಪ್ರಶಸ್ತಿಯನ್ನು ನೀಡಲು 18 ವರ್ಷದೊಳಗಿನ ಮಕ್ಕಳಿಂದ ಅನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ತಿಳಿಸಿದ್ದಾರೆ. ಮಕ್ಕಳ ಧೈರ್ಯ ಮತ್ತು ಸಾಹಸದಿಂದ ಇತರರನ್ನು ರಕ್ಷಿಸಿದ ಶೌರ್ಯ, ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಾಂತ್ರಿಕತೆ, ಪರಿಸರ, ಕಲೆ ಮತ್ತು ಸಂಸ್ಕೃತಿ ಹಾಗೂ ಸoಶೋಧನೆಯಲ್ಲಿ (ಹೊಸ ಅವಿಷ್ಕಾರ) ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ 31-07-2025ಕ್ಕೆ ಅನ್ವಯವಾಗುವಂತೆ 05 ವರ್ಷ…

ಬೀಜ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
|

ಬೀಜ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ.17.ಜೂನ್.25:- ಕಮಲನಗರ ತಾಲೂಕಿನ ಹೊಲಸಮುದ್ರ ಗ್ರಾಮದ ಬೀಜ ವಿತರಣೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಿಗೆ ಬಿತ್ತನೆ ಬೀಜಗಳು ಸಮರ್ಪಕವಾಗಿ ನೀಡಲಾಗುತ್ತಿದೆ ಅಥವಾ ಇಲ್ಲವೇ ಎಂದು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ರೈತರೊಂದಿಗೆ ಚರ್ಚಿಸಿ ಮುಂಗಾರು ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಿಸಲು ತಿಳಿಸಲಾಗಿರುವುದರಿಂದ ರೈತರು ಯಾವುದೇ ಆತಂಕ ಪಡುವಂತಿಲ್ಲ ಎಂದು ತಿಳಿಸಿದರು.

ಜೂ.21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆಗೆ ಸೂಚನೆ- ಎಡಿಸಿ ಶಿವಕುಮಾರ ಶೀಲವಂತ
|

ಜೂ.21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಅಗತ್ಯ ಸಿದ್ಧತೆಗೆ ಸೂಚನೆ- ಎಡಿಸಿ ಶಿವಕುಮಾರ ಶೀಲವಂತ

ಬೀದರ.17.ಜೂನ್.25:- ಇದೇ ಜೂನ್.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು “ಒಂದು ಭೂಮಿ, ಒಂದು ಆರೋಗ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ ಆಚಾರಿಸಲಾಗುತ್ತಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಜೂನ್.13 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಜೂನ್.21 ರಂದು ಬೆಳಿಗ್ಗೆ 6:30 ರಿಂದ 8 ಗಂಟೆಯವರೆಗೆ ನಗರದ ಕೋಟೆ ಆವರಣದಲ್ಲಿ ಕಾರ್ಯಕ್ರಮ ಜರುಗುತ್ತದೆ ಎಂದು ತಿಳಿಸಿದರು….

ಕ.ಕಾ.ಪ್ರ.ದರ್ಜೆ ಕಾಲೇಜು: ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ
|

ಕ.ಕಾ.ಪ್ರ.ದರ್ಜೆ ಕಾಲೇಜು: ಎನ್.ಎಸ್.ಎಸ್. ಶಿಬಿರಕ್ಕೆ ಚಾಲನೆ

ಬೀದರ.17.ಜೂನ್.25:- ಬೀದರ ವಿಶ್ವವಿದ್ಯಾಲಯ ಬೀದರ ಹಾಗೂ ಕವಿರತ್ನ ಕಾಳಿದಾಸ ಪ್ರಥಮ ದರ್ಜೆ ಕಾಲೇಜು, ಬೀದರ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟಿçÃಯ ಸೇವಾ ಯೋಜನೆ (ಎನ್.ಎಸ್.ಎಸ್.) ಶಿಬಿರ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಟ್ಟಾದಲ್ಲಿ ಜೂನ್ ೧೭, ರಿಂದ ಜೂನ್ ೨೩ರ ವರೆಗೆ ಹಮ್ಮಿಕೋಳ್ಳಲಾಗಿದೆ. ಕಾರ್ಯಕ್ರಮವನ್ನು ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿನೆಟ್ಟು ನೀರೆರೆಯುವ ಮೂಲಕ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷರಾದ ಅಮೃತರಾವ ಚಿಮಕೋಡೆ ಅವರು ಮಾತನಾಡುತ್ತ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ರಾಷ್ಟ್ರೀಯ ಸೇವಾ ಯೋಜನೆ…

ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಅಧ್ಯಾಪಕರ ನೇಮಕಾತಿಗಳು GFMS ಮೂಲಕ ಕೇಂದ್ರೀಕೃತಗೊಳ್ಳಲಿವೆ

ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಅಧ್ಯಾಪಕರ ನೇಮಕಾತಿಗಳು GFMS ಮೂಲಕ ಕೇಂದ್ರೀಕೃತಗೊಳ್ಳಲಿವೆ

ಈ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಅತಿಥಿ ಅಧ್ಯಾಪಕರ ನೇಮಕಾತಿಗಳು GFMS ಮೂಲಕ ಕೇಂದ್ರೀಕೃತಗೊಳ್ಳಲಿವೆ ಇಂದೋರ್: ಮುಂಬರುವ ಶೈಕ್ಷಣಿಕ ವರ್ಷದಿಂದ, ಉನ್ನತ ಶಿಕ್ಷಣ ಇಲಾಖೆಯು ಮಧ್ಯಪ್ರದೇಶದಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಅತಿಥಿ ಅಧ್ಯಾಪಕರ ಮೇಲ್ವಿಚಾರಣೆ ಮತ್ತು ನಿರ್ವಹಣಾ ವ್ಯವಸ್ಥೆ (GFMS) ಮೂಲಕ ಎಲ್ಲಾ ಅತಿಥಿ ಅಧ್ಯಾಪಕರ ನೇಮಕಾತಿಗಳನ್ನು ನೋಡಿಕೊಳ್ಳಲಿದೆ. ರಾಜ್ಯದ ಸರ್ಕಾರಿ ಕಾಲೇಜುಗಳು ಇನ್ನು ಮುಂದೆ ತಮ್ಮ ವಿವೇಚನೆಯಿಂದ ಅತಿಥಿ ಅಧ್ಯಾಪಕರನ್ನು ನೇಮಿಸಿಕೊಳ್ಳಲು ಅನುಮತಿಸಲಾಗುವುದಿಲ್ಲ. ನೇಮಕಾತಿ, ಹಾಜರಾತಿ, ವೇತನ ಪ್ರಕ್ರಿಯೆ, ಕುಂದುಕೊರತೆ ಪರಿಹಾರ ಮತ್ತು ಅತಿಥಿ ಅಧ್ಯಾಪಕರ ಅನುಭವ ಪ್ರಮಾಣಪತ್ರಗಳ…

ಡಿಪ್ಲೋಮಾ ಕೋರ್ಸ್‍ಗಳ ಪ್ರವೇಶ: ಅರ್ಜಿ ಆಹ್ವಾನ
|

ಡಿಪ್ಲೋಮಾ ಕೋರ್ಸ್‍ಗಳ ಪ್ರವೇಶ: ಅರ್ಜಿ ಆಹ್ವಾನ

ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಬೈಕಂಪಾಡಿ, ಮಂಗಳೂರು ಇಲ್ಲಿ 2025-26 ನೇ ಸಾಲಿನ ಡಿಪ್ಲೋಮಾ ಕೋರ್ಸ್‍ಗಳ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 100% ಉದ್ಯೋಗ ಆಧಾರಿತ ಡಿಪ್ಲೋಮಾ ಕೋರ್ಸುಗಳಾದ ಡಿಪ್ಲೋಮಾ ಇನ್ ಆರ್ಟಿಫಿಶಿಯಲ್ ಇಂಟಲಿಜನ್ಸ್ ಆಂಡ್ ಮೆಷಿನ್ ಲರ್ನಿಂಗ್ ಮತ್ತು ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್ ವಿಭಾಗದಲ್ಲಿ ಹಾಗೂ ಡಿಪ್ಲೋಮಾ ಇನ್ ಪ್ರಿಶಿಷನ್ ಮಾನ್ಯಫ್ಯಾಕ್ಚರಿಂಗ್ ವಿಭಾಗದಲ್ಲಿ ಬಾಕಿ ಉಳಿದಿರುವ ಸೀಟುಗಳಿಗೆ ಪ್ರವೇಶ ಅವಕಾಶ ಕಲ್ಪಿಸಲಾಗಿರುತ್ತದೆ. ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ…