ಗುತ್ತಿಗೆ ಮೀಸಲು ಜಾರಿಗೆ ವಿಧೇಯಕ ವಿಂಗಡಣೆ
ಬೆಂಗಳೂರು.14.ಜೂನ್.25:- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (ಕೆಟಿಪಿಪಿ) ತಿದ್ದುಪಡಿ ವಿಧೇಯಕವನ್ನೇ ವಿಂಗಡಿಸುವ ಗಂಭೀರ ಚಿಂತನೆಯನ್ನು ರಾಜ್ಯ ಸರ್ಕಾರ ನಡೆಸಿದೆ. ಸರ್ಕಾರಿ ಕಾಮಗಾರಿಗಳಲ್ಲಿ ‘ಗುತ್ತಿಗೆ ಮೀಸಲು’ ಸೌಲಭ್ಯದ ಕಾನೂನು ತೊಡಕು ನಿವಾರಿಸಲು ಸರ್ಕಾರ ಚಿಂತನೆಯಮಾಡುತ್ತಿದೆ. ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಸೌಲಭ್ಯವನ್ನು ಮುಸ್ಲಿಮರಿಗೂ (ಪ್ರವರ್ಗ-2ಬಿ) ಅನ್ವಯಿಸಲು ಸರ್ಕಾರ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. ಆದರೆ, ಈ ವಿಧೇಯಕ ಅಂಗೀಕರಿಸಲು ನಿರಾಕರಿಸಿದ್ದ ರಾಜ್ಯಪಾಲರು, ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು. ಈ ವಿಧೇಯಕ ನನೆಗುದಿಗೆ ಬೀಳುವುದರೊಂದಿಗೆ ಎಸ್ಸಿ, ಎಸ್ಟಿ, ಪ್ರವರ್ಗ-1ರ ಗುತ್ತಿಗೆದಾರರಿಗೂ ಗುತ್ತಿಗೆ…