|

ಭಾಗ್ಯಲಕ್ಷ್ಮೀ ಯೋಜನೆಗೆ 18 ವರ್ಷ ಪೂರ್ಣ: ಮೊದಲ ಫಲಾನುಭವಿಗಳಿಗೆ ಹಣ ರವಾನೆ ಆರಂಭ

ಬೀದರ.14.ಜೂನ್.25:- ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ  ಬರುವ ಭಾಗ್ಯಲಕ್ಷ್ಮೀ ಯೋಜನೆಯಡಿ ದಿನಾಂಕ:01-06-2006 ರಿಂದ 31-07-2008ರ ಅವಧಿಯಲ್ಲಿ (Project-1) ಜನಿಸಿ ನೋಂದಣಿಯಾಗಿರುವ ಹೆಣ್ಣು ಮಕ್ಕಳ ಹೆಸರಿನಲ್ಲಿ 10,000 ರೂ. ಠೇವಣಿ ಮೊತ್ತವನ್ನು ಪಾಲುದಾರ ಹಣಕಾಸು ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮದಲ್ಲಿ ಹೂಡಲಾಗಿದ್ದು.

ಈ ಯೋಜನೆಯ ಮಾರ್ಗಸೂಚಿಯನ್ವಯ ಸದರಿ ದಿನಾಂಕದ ನಂತರ ಜನಿಸಿ, ಯೋಜನೆಯಡಿ ನೋಂದಣಿಯಾಗಿ, 18 ವರ್ಷ ಪೂರ್ಣಗೊಂಡಿರುವ ಬಿಪಿಎಲ್ ಕುಟುಂಬದ ಮೊದಲ 02 ಹೆಣ್ಣು ಮಕ್ಕಳಿಗೆ ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಬೀದರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪರಿಪಕ್ವ ಮೊತ್ತಕ್ಕೆ ಸಲ್ಲಿಸಬೇಕಾದ ದಾಖಲಾತಿಗಳ ವಿವರ: ಭಾಗ್ಯಲಕ್ಷ್ಮೀ ಬಾಂಡ್, ಫಲಾನುಭವಿಯ ಜನನ ಪ್ರಮಾಣ ಪತ್ರ, ಪಡೀತರ ಚೀಟಿ, ಶಾಲಾ ದಾಖಲಾತಿಗಳು, ಬ್ಯಾಂಕ್ ಪಾಸ್‍ಬುಕ್, ಇತರೇ ದಾಖಲಾತಿಗಳು.


ಅದನರ್ವಯ ಈ ಯೋಜನೆಯಡಿ ಈಗಾಗಲೇ ಬಾಂಡ್ ಸೌಲಭ್ಯವನ್ನು ಪಡೆದಿರುವ ಫಲಾನುಭವಿಗಳು ಆಯಾ ತಾಲ್ಲೂಕಿನ ಅಂಗನವಾಡಿ ಕೇಂದ್ರದಲ್ಲಿ ಬರುವ ಅಂಗನವಾಡಿ ಕಛೇರಿಗೆ/ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ/ ಉಪ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ, ಸದರಿ ಯೋಜನೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. 18 ವರ್ಷ ಪೂರ್ಣಗೊಂಡಿರುವ ಬಿಪಿಎಲ್ ಕುಟುಂಬದ ಮೊದಲ 02 ಹೆಣ್ಣು ಭಾಗ್ಯಲಕ್ಷ್ಮೀ ಯೋಜನೆಯ ಪರಿಪಕ್ವ ಅರ್ಜಿಯನ್ನು ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *