Home » ಲೈವ್ ನ್ಯೂಸ್ » (10 lac Fellowship) 10 ಲಕ್ಷ ರೂ. ಫೆಲೋಶಿಪ್ ಗೆ ಅರ್ಜಿ ಆಹ್ವಾನ :

(10 lac Fellowship) 10 ಲಕ್ಷ ರೂ. ಫೆಲೋಶಿಪ್ ಗೆ ಅರ್ಜಿ ಆಹ್ವಾನ :

Facebook
X
WhatsApp
Telegram

ಬೆಂಗಳೂರು.15.ಮಾರ್ಚ್.26: ಗೂಗಲ್ ಕಂಪನಿಯಿಂದ Google Fellowship 2026ರ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯರು ಕೂಡ ಗೂಗಲ್ ಫೆಲೋಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ (Google Summer Fellowship 2026)

2026ರ ಜೂನ್ ನಿಂದ ಫೆಲೋಶಿಪ್ ಆರಂಭವಾಗಲಿದ್ದು, ಮೂರು ತಿಂಗಳು ವಿದ್ಯಾರ್ಥಿಗಳು ಟೆಕ್ನಾಲಜಿ, ಸಂಶೋಧನೆ ಸೇರಿ ಹಲವು ಕ್ಷೇತ್ರಗಳಲ್ಲಿ ಅಧ್ಯಯನ ಮಾಡಬಹುದು.

ಇದು ತಂತ್ರಜ್ಞಾನ ಮತ್ತು ಅಂತರ್ಜಾಲ ನೀತಿಗಳಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 9 ಕೊನೆಯ ದಿನವಾಗಿದೆ. ಭವಿಷ್ಯದಲ್ಲಿ ವಿದೇಶದಲ್ಲಿ ಉದ್ಯೋಗ ಪಡೆಯಬೇಕು ಎನ್ನುವವರಿಗೂ ಇದು ಒಳ್ಳೆಯ ಅವಕಾಶವಾಗಿದೆ.

ಅರ್ಹತೆಗಳು ಏನೇನು?

• 2026ರ ಆಗಸ್ಟ್ 30ರ ವೇಳೆಗೆ ಮಾನ್ಯತೆ ಪಡೆದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಅಥವಾ ಪಿಎಚ್.ಡಿ ವ್ಯಾಸಂಗ ಮಾಡುತ್ತಿರಬೇಕು.
• 2026ರ ಜನವರಿ 1ರ ವೇಳೆಗೆ ಕನಿಷ್ಠ 18 ವರ್ಷ ತುಂಬಿರಬೇಕು.
• ಉತ್ತಮ ಸಂಶೋಧನೆ (Research), ವಿಶ್ಲೇಷಣೆ, ಬರವಣಿಗೆ ಮತ್ತು ಸಂವಹನ ಕೌಶಲಗಳನ್ನು ಹೊಂದಿರಬೇಕು.
• ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು, ಆದರೆ ಅವರು ಆಯಾ ದೇಶದಲ್ಲಿ ಕೆಲಸ ಮಾಡಲು ಅಧಿಕೃತ ಅನುಮತಿ (Work Authorization) ಹೊಂದಿರಬೇಕು. ಗೂಗಲ್ ಇದಕ್ಕೆ ಯಾವುದೇ ವೀಸಾ ಸಹಾಯ ಮಾಡುವುದಿಲ್ಲ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

• ಅಧಿಕೃತ ವೆಬ್ ಸೈಟ್ google.com/policyfellowship/usa ಗೆ ಭೇಟಿ ನೀಡಿ.
• ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ವಿವರಗಳು ಮತ್ತು ರೆಸ್ಯೂಮ್ ಅಪ್ ಲೋಡ್ ಮಾಡಿ.
• ನೀವು ಕೆಲಸ ಮಾಡಲು ಇಚ್ಛಿಸುವ ಗರಿಷ್ಠ ಎರಡು ಆತಿಥೇಯ ಸಂಸ್ಥೆಗಳನ್ನು (Host Organizations) ಆಯ್ಕೆ ಮಾಡಿಕೊಳ್ಳಿ.
• ನಿಮ್ಮ ಆಸಕ್ತಿಯನ್ನು ವಿವರಿಸುವ ಪರ್ಸನಲ್ ಸ್ಟೇಟ್ ಮೆಂಟ್ ಸಲ್ಲಿಸಿ.
• ಅರ್ಜಿಗಳನ್ನು ಆಯಾ ಆತಿಥೇಯ ಸಂಸ್ಥೆಗಳು ಪರಿಶೀಲಿಸುತ್ತವೆ.
• ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology