Home » ಲೈವ್ ನ್ಯೂಸ್ » ಸಿಎಂ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ ಎಂದ. ಕಾಂಗ್ರೆಸ್ ವರಿಷ್ಠ ನಾಯಕರು .

ಸಿಎಂ ಹುದ್ದೆ ಸದ್ಯಕ್ಕೆ ಖಾಲಿ ಇಲ್ಲ ಎಂದ. ಕಾಂಗ್ರೆಸ್ ವರಿಷ್ಠ ನಾಯಕರು .

Facebook
X
WhatsApp
Telegram

ಬೆಂಗಳೂರು.15.ಮಾರ್ಚ್.26: ಕರ್ನಾಟಕ ರಾಜ್ಯ ವಿಧಾನಸಭಾ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ಕ್ಷಣದಿಂದ ಇಲ್ಲಿಯವರೆಗೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ಚರ್ಚೆ ನಿಂತಿಲ್ಲ. ಸಿಎಂ ಸಿದ್ದರಾಮಯ್ಯ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಆಗುವ ಆಕಾಂಕ್ಷೆ ಮತ್ತು ಅದರ ಕುರಿತಾದ ಚರ್ಚೆಗಳು ರಾಜ್ಯಾದ್ಯಂತ ಆಗ್ತಿದೆ.

ಇತ್ತೀಚೆಗೆ ನಡೆದ ಇಂಡಿಯಾ ಟುಡೇ ಕಾನ್ಕ್ಲೇವ್ನಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕರ್ನಾಟಕದಲ್ಲಿ ನಾಯಕತ್ವದ ಬಗ್ಗೆ ಯಾವುದೇ ಗೊಂದಲವಿಲ್ಲ, ರಾಜ್ಯದಲ್ಲಿ ನಮಗೆ ಸಮರ್ಥ ನಾಯಕತ್ವವಿದ್ದು, ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ.

ನಾಯಕತ್ವದ ಬದಲಾವಣೆಯ ವಿಷಯವು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್ ಮತ್ತು ಕಾಂಗ್ರೆಸ್ ಶಾಸಕರ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ಎಚ್ಚರಿಕೆ ನೀಡಿದ್ದ ವೇಣುಗೋಪಾಲ್

ಅಧಿಕಾರ ಹಂಚಿಕೆಯ ಕುರಿತಾಗಿ ಕಾಂಗ್ರೆಸ್ನ ಕೆಲ ಸಚಿವರು ಮತ್ತು ಶಾಸಕರ ಮಾತನಾಡುತ್ತಲೇ ಇದ್ದು, ಇದೇ ವಿಷಯವಾಗಿ ಈ ಹಿಂದೆ ಮಾತನಾಡಿದ್ದ ವೇಣುಗೋಪಾಲ್, ಪಕ್ಷದ ಆಂತರಿಕ ವಿಷಯಗಳನ್ನು ರಸ್ತೆಯಲ್ಲಿ ಚರ್ಚಿಸಬಾರದು.

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದು, ಯಾರಾದರೂ ಶಿಸ್ತು ಉಲ್ಲಂಘಿಸಿ ಹೇಳಿಕೆ ನೀಡಿದರೆ ಹೈಕಮಾಂಡ್ ಅದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಎಚ್ಚರಿಕೆ ನೀಡಿದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology