ರಾಯಚೂರು.05.ಸೆಪ್ಟಂಬರ್.26: ರಾಯಚೂರು ಮಹಾನಗರದ ರಂಗಮoದಿರ ಸಮೀಪದ ಸಾರ್ವಜನಿಕ ಉದ್ಯಾನವನದಲ್ಲಿ ಅಭಿವೃದ್ಧಿ ಕಾಮಗಾರಿ 03 ತಿಂಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಂಗಮAದಿರ ಸಮೀಪದಲ್ಲಿರುವ ಸಾರ್ವಜನಿಕ ಉದ್ಯಾನವನದ ಅಭಿವೃದ್ಧಿ ಕಾಮಗಾರಿಯನ್ನು 2025-26ನೇ ಸಾಲಿನಲ್ಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ ಅನುದಾನ ಅಡಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಳ್ಳಲಾಗುತ್ತಿದೆ. ಹಾಗೂ ಕಾಮಗಾರಿ ನಕಾಶೆ, ಸ್ಥಳ ಅವಕಾಶ ಇತ್ಯಾದಿ ಪಾಲಿಕೆಯಿಂದ ಅನುಮೋದನೆಗೊಂಡಿದೆ.
ಈ ಕಾಮಗಾರಿಯನ್ನು ಟೆಂಡರ್ ಕಾಮಗಾರಿಯ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವ ಉದ್ದೇಶದಿಂದ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆ, ಕಾಮಗಾರಿಯ ಸುಗಮ ಅನುಷ್ಠಾನ ಹಾಗೂ ಕಾಮಗಾರಿ ಪ್ರದೇಶದಲ್ಲಿ ಯಾವುದೇ ಅಡಚಣೆ ಉಂಟಾಗದoತೆ ಮುನ್ನೆಚ್ಚರಿಕಾ ಕ್ರಮವಾಗಿ, ಸದರಿ ಉದ್ಯಾನವನಕ್ಕೆ 03 ತಿಂಗಳ ಅವಧಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸದರಿ ಅವಧಿಯಲ್ಲಿ ಸಾರ್ವಜನಿಕರು ಕಾಮಗಾರಿ ನಡೆಯುತ್ತಿರುವ ಉದ್ಯಾನವನದ ಆವರಣಕ್ಕೆ ಪ್ರವೇಶಿಸದೆ, ಸುರಕ್ಷತಾ ದೃಷ್ಟಿಯಿಂದ ಅಳವಡಿಸಲಾಗಿರುವ ತಡೆಗೋಡೆಗಳು ಹಾಗೂ ಸೂಚನಾ ಫಲಕಗಳನ್ನು ಪಾಲಿಸುವಂತೆ ಕೋರಲಾಗಿದೆ.
ಕಾಮಗಾರಿ ಪೂರ್ಣಗೊಂಡ ನಂತರ ಉದ್ಯಾನವನವನ್ನು ಸಾರ್ವಜನಿಕರ ಬಳಕೆಗೆ ಪುನಃ ಮುಕ್ತಗೊಳಿಸಲಾಗುವುದು. ಉದ್ಯಾನವನದ ಅಭಿವೃದ್ಧಿ ಕಾಮಗಾರಿಯನ್ನು ಸುರಕ್ಷಿತವಾಗಿ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾರ್ವಜನಿಕರು ಸಹಕರಿಸುವಂತೆ ರಾಯಚೂರು ಮಹಾನಗರ ಪಾಲಿಕೆ ಮನವಿ ಮಾಡುತ್ತದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Any questions related to ಸಾರ್ವಜನಿಕ ಉದ್ಯಾನವನ ಪ್ರವೇಶಕ್ಕೆ ತಾತ್ಕಾಲಿಕ 03 ತಿಂಗಳ ಕಾಲ ನಿರ್ಬಂಧ?