|

ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಲೆಕ್ಕಪರಿಶೋಧಕರ ಆಯ್ಕೆ ಮಾಹಿತಿ ಸಲ್ಲಿಸಲು ಸೂಚನೆ

ಬೀದರ.28.ಅಗಸ್ಟ್.25:- ಬೀದರ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳು / ಸೌಹಾರ್ದ ಸಹಕಾರಿಗಳು ತಾವು ಪ್ರತಿ ವರ್ಷದಂತೆ ಈ ವರ್ಷವು ದಿನಾಂಕ: 25/09/2025ರ ಒಳಗಾಗಿ ಪ್ರತಿಯೊಂದು ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ತಮ್ಮ ಸಂಘದ ವಾರ್ಷಿಕ ಮಹಾಸಭೆಯನ್ನು ಕಡ್ಡಾಯವಾಗಿ ಜರುಗಿಸಬೇಕು. ಅದರಲ್ಲಿ ಸನ್ 2024-25 ನೇ ಸಾಲಿನ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ಆಯ್ಕೆ ಮಾಡಿಕೊಳ್ಳಬೇಕು.

ತಾವು ಜರುಗಿಸಿದ ವಾರ್ಷಿಕ ಮಹಾಸಭೆಯ ನಡುವಳಿಗಳನ್ನು ಕರ್ನಾಟಕ ಸಹಕಾರ ಸಂಘಗಳ/ಸೌಹಾರ್ದ ಸಹಕಾರಿಗಳ ನಿಯಮಗಳ ನಿಯಮ 29 (ಃ) S / 8(ಃ) 8 ರೀತ್ಯ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡ ಬಗ್ಗೆ 07 ದಿನಗಳ ಒಳಗಾಗಿ ವಾರ್ಷಿಕ ಮಹಾಸಭೆಯ ನಡಾವಳಿಯೊಂದಿಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ ಕಛೇರಿಗೆ ಮಾಹಿತಿಗಾಗಿ ಕೋರಿ ದಿನಾಂಕ: 27/01/2025 ರಂದು ಪತ್ರಿಕಾ ಪ್ರಕಟಣೆ ಹೊರಡಿಸಲಾಗಿರುತ್ತದೆ ಹಾಗೂ ಸದರಿ ಸಂಘಗಳಿಗೆ ವೈಯಕ್ತಿಕವಾಗಿ ಪತ್ರ ವ್ಯವಹಾರದ ಮೂಲಕ ಮಾಹಿತಿಯನ್ನು ನೀಡಿದಾಗ್ಯೂ ಸದರಿ ಮಾಹಿತಿಯು ಇಲಾಖೆಗೆ ತಹಲ್‍ವರೆಗೆ ಸಲ್ಲಿಕೆಯಾಗದೆ ಇರುವ ಕಾರಣ ಅಂತಿಮವಾಗಿ ಸೂಚನೆಯು ಈ ಪ್ರಕಟಣೆ ಮೂಲಕ ನೀಡಲಾಗಿರುತ್ತದೆ.

ಆದುದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ/ಸೌಹಾರ್ದ ಸಹಕಾರಿ ಕಾಯ್ದೆ ಕಲಂ 63(1)/33(1) ರನ್ವಯ ಆಯ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗಿತ್ತು. ಆದರೆ ಆಯ್ಕೆ ಮಾಹಿತಿ ಸಲ್ಲಿಸದೇ ಇರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ / ಸೌಹಾರ್ದ ಸಹಕಾರಿ ಕಾಯ್ದೆ ಕಲಂ 63(2) /33(2) ಪ್ರಾವಿಸೊದನ್ವಯ ಪ್ರದತ್ತವಾದ ಅಧಿಕಾರದ ಮೆರೆಗೆ ನೀವು ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಳ್ಳದೆ ಇರುವುದರಿಂದ ಕರ್ನಾಟಕ ಸಹಕಾರ ಸಂಘಗಳ ನಿಯಮ / ಸೌಹಾರ್ದ ಸಹಕಾರಿ ನಿಯಮ 29(ಃ)8 / 8(ಃ)8 ರನ್ವಯ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಈ ಇಲಾಖೆಗೆ ತಿಳಿಯಪಡಿಸದೇ ಇರುವುದರಿಂದ ತಾವು ವಾರ್ಷಿಕ ಮಹಾ ಸಭೆಯಲ್ಲಿ ಲೆಕ್ಕಪರಿಶೋಧಕರನ್ನು ನೇಮಕ ಮಾಡಿಕೊಂಡಿರುವುದಿಲ್ಲವೆಂದು ಪರಿಭಾವಿಸಿ ಇಲಾಖಾ ವತಿಯಿಂದ ತಮ್ಮ ಸಂಘಗಳ ಲೆಕ್ಕಪರಿಶೋಧನೆಗಾಗಿ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಸ್ಪಷ್ಟಪಡಿಸುತ್ತಾ ಈ ಕುರಿತು ನಿಮ್ಮ ಹೇಳಿಕೆ/ಮಾಹಿತಿ ಏನಾದರೂ ಇದ್ದಲ್ಲಿ “ಮಾನ್ಯ ಉಪ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಉಪ ನಿರ್ದೇಶಕರ ಕಛೇರಿ, ಬೀದರ ಎಲ್.ಐ.ಜಿ-124 ಕೆ.ಎಚ್.ಬಿ.ಕಾಲೋನಿ, ಬೀದರ-585401” ರವರಿಗೆ ಈ ಪ್ರಕಟಣೆಯಾದ 03 ದಿನಗಳ ಒಳಗಾಗಿ ಮಾಹಿತಿ ಸಲ್ಲಿಸಲು ತಿಳಿಯಪಡಿಸಿದೆ.

ಇಲ್ಲವಾದಲ್ಲಿ ನೀವು ತಿಳಿಸಬೇಕಾಗಿರುವುದು ಏನು ಇಲ್ಲವೆಂದು ಪರಿಗಣಿಸಿ ನಿಮ್ಮ ಸಂಘದ ಲೆಕ್ಕಪರಿಶೋಧನೆ ನಿರ್ವಹಿಸಲು ಇಲಾಖಾ ವತಿಯಿಂದ ಲೆಕ್ಕಪರಿಶೋಧಕರನ್ನು ನೇಮಿಸಲಾಗುವುದೆಂದು ಬೀದರ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *