|

ಸಂಸದ ಸುನೀಲ್ ಬೋಸ್ ರವರ ಹುಟ್ಟು ಹಬ್ಬದ ಹಿನ್ನಲೆ ಹಾಡಿಗಳಿಗೆ   ವೆಂಕಟೇಶ್ ಸಿ ರವರಿಂದ ಬೆಡ್ ಶೀಟ್ ವಿತರಣೆ.

ಯಳಂದೂರು.31.ಆಗಸ್ಟ್.25:- ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಹಾಡಿಗಳಿಗೆ ಚಾಮರಾಜನಗರ ಜಿಲ್ಲಾ ಕಾಂಗ್ರೇಸ್ ಸಮಿತಿಯ ಪದವೀಧರರ ಅಧ್ಯಕ್ಷ ವೆಂಕಟೇಶ್ ಸಿ ರವರು ಸಂಸದ ಸುನೀಲ್ ಬೋಸ್ ರವರ 44 ನೇ ವರ್ಷದ ಹುಟ್ಟು  ಹಬ್ಬದ ಅಂಗವಾಗಿ  ಬೆಡ್ ಶೀಟ್ ಹಾಗೂ ಸಿಹಿ ವಿತರಿಸುವುದರ ಮೂಲಕ ಭಾನುವಾರ ಆಚರಿಸಿದರು.



ಬಿಳಿಗಿರಿರಂಗನ ಬೆಟ್ಟ ಗ್ರಾಮಪಂಚಾಯತಿ ವ್ಯಾಪ್ತಿಗೆ  ಬರುವ ಪೋಡ್ ಗಳಿಗೆ ತೆರಳಿ ವಿತರಿಸಿದರು.

ಬಳಿಕ ಮಾತನಾಡಿ ಚಾಮರಾಜನಗರ ಮೀಸಲು ಕ್ಷೇತ್ರದ ಲೋಕಸಭಾ ಸದಸ್ಯರಾದ ಯುವ ನಾಯಕ ಸುನೀಲ್ ಬೋಸ್ ರವರು ಉತ್ತಮ‌ ರಾಜಕೀಯ ಪಟು ಅಪ್ಪಟ ಅಂಬೇಡ್ಕರ್ ವಾದಿ,  ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಭವಿಷ್ಯದ ನಾಯಕರು ಇವರ ಹುಟ್ಟುಹಬ್ಬವನ್ನು ನಮ್ಮ‌ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅರ್ಥಪೂರ್ಣವಾಗಿ ಆಚರಿಸಬೇಕೆಂದು ಸೋಲಿಗ ಸಮುದಾಯದ ಜನರಿಗೆ 600 ಕ್ಕೂ ಹೆಚ್ಚು  ಕಂಬಳಿಗಳನ್ನು ವಿತರಿಸಿ  ಇವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. 

ನಮ್ಮ ಸಂಸದರಿಗೆ ಆಯಸ್ಸು ಆರೋಗ್ಯ ಸಿಗಲಿ ಇನ್ನೂ ಜನಪರ ಕೆಲಸ ಮಾಡುವುದಕ್ಕೆ ಅವಕಾಶ ಸಿಗಲಿ ಎಂದು ಪ್ರಾರ್ಥನೆಮಾಡಿಕೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕೇತಮ್ಮ, ಗ್ರಾಪಂ ಉಪಾಧ್ಯಕ್ಷರಾದ ಕಮಲಮ್ಮ, ಕೆಸ್ತೂರು ಗ್ರಾಮಪಂಚಾಯತಿ ಸದಸ್ಯರಾದ ಗುರುಲಿಂಗಯ್ಯ, ಮಲ್ಲೇಶ್, ಕೊಳ್ಳೇಗಾಲ ಯುವ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಗೋವಿಂದರಾಜ್,ಪರಮೇಶ್, ಕೇತುಗೌಡ,ಮರಿಯನ ಕೆಂಪೇಗೌಡ, ಜಡೇಗೌಡ, ಶಿವಣ್ಣ, ಬೊಮ್ಮೇಗೌಡ, ಹಾಗೂ ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.
ಪತ್ರಕರ್ತ ಜೆ.ಪ್ರಸನ್ನಕುಮಾರ್ ಕೆಸ್ತೂರು

Similar Posts

Leave a Reply

Your email address will not be published. Required fields are marked *