Home » ಲೈವ್ ನ್ಯೂಸ್ » ಶ್ರೀ ವಿಠ್ಠಲ ಕೃಷ್ಣ ದೇವಸ್ತಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿoದ ಆಚರಿಸಲಾಗುತ್ತಿದೆ.

ಶ್ರೀ ವಿಠ್ಠಲ ಕೃಷ್ಣ ದೇವಸ್ತಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿoದ ಆಚರಿಸಲಾಗುತ್ತಿದೆ.

ಕೊಪ್ಪಳ, ೪- ನಗರದ ಶ್ರೀ ವಿಠ್ಠಲ ಕೃಷ್ಣ ದೇವಸ್ತಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಡಗರ ಸಂಭ್ರಮದಿAದ ಆಚರಿಸಲಾಗುತ್ತಿದೆ.
ಶುಕ್ರವಾರ ಮತ್ತು ಶನಿವಾರ ಎರಡುದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದಲ್ಲಿ ಜರುಗಲಿದ್ದು, ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕö್ಯ ಪ್ರತಿಷ್ಠಾನದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.


ಕೃಷ್ಣಾಷ್ಠಮಿ ಅಂಗವಾಗಿ ದೇವಸ್ಥಾನದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ಮಂತ್ರ ಮುಗ್ದರನ್ನಾಗಿಸುವಂತಿತ್ತು. ಮೊದಲನೆ ದಿನವಾದ ಶುಕ್ರವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ವಿಠ್ಠಲ ಕೃಷ್ಣ ಹಾಗೂ ಶ್ರೀ ಮುಖ್ಯ ಪ್ರಾಣ ದೇವರಿಗೆ ಸುಪ್ರಭಾತ, ನಿರ್ಮಲಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ವಿವಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಣ್ಣೆ ಅಲಂಕಾರ : ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಭಕ್ತರಿಂದ ಶ್ರೀ ಕೃಷ್ಣನಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ನಂತರ ಮಹಿಳೆಯರು ಮತ್ತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವೇಷಭೂಷಣ ಸ್ಪರ್ಧೆ ಜರುಗಿತು. ದೇವಸ್ಥಾನಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ಕೃಷ್ಣನ ದರ್ಶನ ಪಡೆದರು.
ಅರ್ಘ್ಯ ಪ್ರಧಾನ : ಸಂಪ್ರದಾಯದoತೆ ದೇವಸ್ಥಾನದಲ್ಲಿ ಮದ್ಯರಾತ್ರಿ ೧೨:೦೩ ಗಂಟೆಗೆ ಉಪವಾಸ ನಿರತ ಭಕ್ತರಿಂದ ಅರ್ಘ್ಯ ಪ್ರಧಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇಂದಿನ ಕಾರ್ಯಕ್ರಮ: ಇಂದು ಸೆ.೫ರಂದು ಶನಿವಾರ ಬೆಳಿಗ್ಗೆ ೫ ಗಂಟೆಗೆ ಶ್ರೀ ವಿಠ್ಠಲ ಕೃಷ್ಣ ಹಾಗೂ ಶ್ರೀ ಮುಖ್ಯ ಪ್ರಾಣ ದೇವರಿಗೆ ಸುಪ್ರಭಾತ, ನಿರ್ಮಲಾಭಿಷೇಕ, ವಿಷ್ಣು ಸಹಸ್ರನಾಮ ಪಾರಾಯಣ ತೊಟ್ಟಿಲು ಸೇವೆ ಮಧ್ಯಾಹ್ನ ೪ಗಂಟೆಗೆ ಪ್ರವಚನ ೫:೩೦ಕ್ಕೆ ದೇವರ ಗ್ರಾಮ ಪ್ರದಕ್ಷಿಣೆ, ಗೋಪಾಲಕಾವಲಿ ಇತರ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ಕೋರಿದೆ.

 

Author

ಪ್ರಮುಖ ಸುದ್ದಿ

Stock market

Astrology