ಶಸ್ತ್ರಾಸ್ತ್ರ ಹಿಡಿದಿರುವ ಮಾವೋವಾದಿಗಳೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಮಾವೋವಾದಿಗಳೊಂದಿಗೆ ಮಾತುಕತೆಯನ್ನು ತಳ್ಳಿಹಾಕಿದ್ದಾರೆ. ತೆಲಂಗಾಣದ ನಿಜಾಮಾಬಾದ್ನಲ್ಲಿ ನಡೆದ ಕಿಸಾನ್ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಬುಡಕಟ್ಟು ಜನಾಂಗದವರು, ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಯನ್ನು ಕೊಂದವರೊಂದಿಗೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಹೇಳಿದರು. ಗೃಹ ಸಚಿವರು ಎಡಪಂಥೀಯ ಉಗ್ರಗಾಮಿಗಳು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ರಾಷ್ಟ್ರೀಯ ಮುಖ್ಯವಾಹಿನಿಗೆ ಸೇರುವಂತೆ ಕೇಳಿಕೊಂಡರು. ಮಾರ್ಚ್ 31, 2026 ರೊಳಗೆ ಭಾರತವನ್ನು ಮಾವೋವಾದಿಗಳಿಂದ ಮುಕ್ತಗೊಳಿಸುವ ಕೇಂದ್ರದ ಸಂಕಲ್ಪವನ್ನು ಶ್ರೀ ಶಾ ಪುನರುಚ್ಚರಿಸಿದರು. ದೇಶಾದ್ಯಂತದಿಂದ ಪರಾರಿಯಾಗಿರುವ ಮಾವೋವಾದಿಗಳಿಗೆ ಕಾಂಗ್ರೆಸ್ ಪಕ್ಷವು ತೆಲಂಗಾಣದಲ್ಲಿ ಆಶ್ರಯ ನೀಡಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು. ತೆಲಂಗಾಣ ಮಾವೋವಾದಿಗಳ ಗುಹೆಯಾಗಲು ಬಿಡಬೇಡಿ ಎಂದು ಶ್ರೀ ಶಾ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಕೇಳಿದರು.

