|

ರಾಯಚೂರು ಜಿಲ್ಲಾ ಪತ್ರಕರ್ತರ ಸಹಕಾರಕ್ಕೆ ಮನದುಂಬಿ ವಂದಿಸಿದ ಉಪ ಲೋಕಾಯುಕ್ತರು

ರಾಯಚೂರು.01.ಸೆಪ್ಟೆಂಬರ್.25:-ರಾಯಚೂರ ಜಿಲ್ಲೆಯ ತಮ್ಮ ಪ್ರವಾಸ ಕಾರ್ಯಕ್ರಮಕ್ಕೆ ರಾಯಚೂರು ಜಿಲ್ಲೆಯ ಎಲ್ಲ ಪತ್ರಕರ್ತರಿಂದ ಅತ್ಯುತ್ತಮವಾದ ಸಹಕಾರ ಸಿಕ್ಕಿದೆ. ಎಲ್ಲ ಪತ್ರಕರ್ತ ಮಿತ್ರರಿಗೆ ಮನದುಂಬಿ ವಂದಿಸುವೆ ಎಂದು ಉಪ ಲೋಕಾಯುಕ್ತರಾದ ಬಿ.ವೀರಪ್ಪ ಅವರು ತಿಳಿಸಿದರು.

ಆಗಸ್ಟ್ 30 ರಂದು ಸಂಜೆ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಯಚೂರ ಜಿಲ್ಲಾ ಪ್ರವಾಸ ಕಾರ್ಯಕ್ರಮದಲ್ಲಿ ಆಗಸ್ಟ್ 28ರಂದು ಇಡೀ ದಿನ ಹಾಗೂ ಆಗಸ್ಟ್ 29 ಮತ್ತು ಆಗಸ್ಟ್ 30ರಂದು ಕೊನೆಯ ಎರಡು ದಿನ ಬೆಳಗಿನ ಅವಧಿಯಲ್ಲಿ ಅನಿರೀಕ್ಷಿತ ಭೇಟಿ ಕಾರ್ಯಕ್ರಮಕ್ಕೆ ರಾಯಚೂರ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಆಗಮಿಸಿ ವರದಿ ಮಾಡಿದ್ದಾರೆ.

ರಾಜ್ಯಮಟ್ಟದ, ಪ್ರಾದೇಶಿಕ ಮತ್ತು ಸ್ಥಳೀಯ ಎಲ್ಲ ಪತ್ರಿಕೆಗಳಲ್ಲಿ, ನಮ್ಮ ಪ್ರವಾಸ ಕಾರ್ಯಕ್ರಮದ ಸುದ್ದಿಗಳಿಗೆ ವಿಶೇಷ ಸ್ಥಳವಕಾಶ ನೀಡಿ ಪ್ರಕಟಿಸಿದ್ದನ್ನು ನಾನು ಮೂರು ದಿನವೂ ಖುದ್ದು ಗಮನಿಸಿದ್ದೇನೆ.

ವಿಶೇಷವಾಗಿ ಟಿವಿ ವಾಹಿನಿಯ ಪ್ರತಿನಿಧಿಗಳು ಕ್ಯಾಮರಾ ಹೊತ್ತುಕೊಂಡು ಮೂರು ದಿನವೂ ನಮ್ಮ ಜೊತೆಗೆ ಸುತ್ತಿದ್ದಾರೆ.

ಟಿವಿ ವಾಹಿನಿಗಳ ವರದಿಗಾರರು ನಾನು ಇರುವ ವಾಸ್ತವ್ಯದ ಸ್ಥಳಕ್ಕೆ ಆಗಮಿಸಿ ಪ್ರವಾಸ ಕಾರ್ಯಕ್ರಮದ ಬಗ್ಗೆ ಮಾತನಾಡಿಸಿ ಟಿವಿ ವಾಹಿನಿಗಳಲ್ಲಿ ವಿಶೇಷ ವರದಿ ಪ್ರಕಟಿಸಿದ್ದಾರೆ. ರಾಯಚೂರು ಜಿಲ್ಲೆಯ ಎಲ್ಲ ಮಾಧ್ಯಮ ಪ್ರತಿನಿಧಿಗಳ ಸಹಕಾರಕ್ಕೆ ತಾವು ಕೃತಜ್ಞತೆ ಸಲ್ಲಿಸುವುದಾಗಿ ಉಪ ಲೋಕಾಯುಕ್ತರು ತಿಳಿಸಿದರು.

Similar Posts

Leave a Reply

Your email address will not be published. Required fields are marked *