ಬೆಂಗಳೂರು.15.ಜುಲೈ.26: ರಾಜ್ಯ ಸರ್ಕಾರ ಶಾಲಾ ಶಿಕ್ಷಕರ ನೇಮಕಾತಿಗೆ ರಾಜ್ಯಪತ್ರ ಹೊರಡಿಸಿದೆ.ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ, ದೈಹಿಕ ಶಿಕ್ಷಣ ಮತ್ತು ಕಂಪ್ಯೂಟರ್ ಸೈನ್ಸ್ ಶಿಕ್ಷಕರು ಸೇರಿ ಒಟ್ಟು 15 ಸಾವಿರ ಶಿಕ್ಷಕರ ನೇಮಕಾತಿಗೆ ಕರುಡ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಮುಂಬರುವ 15 ದಿನಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಅದಾದ ನಂತರ ನೇಮಕಾತಿ ಅಧಿಸೂಚನೆ ಪ್ರಕಟಿಸುವ ಸಾಧ್ಯತೆಗಳಿವೆ.
15 ಸಾವಿರ ಶಿಕ್ಷಕರು:
ಪ್ರಾಥಮಿಕ ಶಾಲೆಯ 900, ಹಿರಿಯ ಪ್ರಾಥಮಿಕ ಶಾಲೆಯ (ಜಿಪಿಟಿ) 8,500, ಪ್ರೌಢ ಶಾಲೆಯ 4,500, ದೈಹಿಕ ಶಿಕ್ಷಣ ಗ್ರೇಡ್-2-150, ದೈಹಿಕ ಶಿಕ್ಷಣ ಗ್ರೇಡ್-1- 450 ಮತ್ತು ಕಂಪ್ಯೂಟರ್ ಶಿಕ್ಷಣ ಬೋಧನೆಗೆ 500 ಶಿಕ್ಷಕರ ನೇಮಕಾತಿಗೆ ರಾಜ್ಯಪತ್ರ ಹೊರಡಿಸಲಾಗಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ 6,905 ಮತ್ತು ಇತರೆ ಜಿಲ್ಲೆಗಳಿಗೆ 8,095 ಹುದ್ದೆಗಳನ್ನು ವಿಂಗಡಿಸಲಾಗಿದೆ.
ವೇಯ್ಟೇಜ್ ನಿಗದಿ:
ನೇಮಕಾತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ಸಿಇಟಿ 70 ಅಂಕ, ಟಿಇಟಿ-20, ಪಿಯುಸಿ 8 ಮತ್ತು ಡಿಇಡಿ ನಲ್ಲಿ 2 ಅಂಕ ಪರಿಗಣನೆ. ಕಂಪ್ಯೂಟರ್ ಸೈನ್ಸ್ ಸಿಇಟಿ 70 ಮತ್ತು ಉಳಿದ 30 ಅಂಕಗಳನ್ನು ನಿಗದಿತ ಪದವಿಯಲ್ಲಿ ಪಡೆಯಲಾಗುತ್ತದೆ. ಜಿಪಿಟಿ ಶಿಕ್ಷಕರಿಗೆ ಸಿಇಟಿ ಶೇ.85, ಪದವಿ 13 ಮತ್ತು ಬಿ.ಇಡಿಯಲ್ಲಿ ಶೇ.2 ಅಂಕಗಳ ಪರಿಗಣಿಸಲಾಗಿದೆ.
ವಯೋಮಿತಿಯನ್ನು ರಾಜ್ಯ ಸರ್ಕಾರವು ಈಗಾಗಲೇ ಮೂರು ವರ್ಷಗಳ ಸಡಿಲಿಕೆ ಮಾಡಿದ್ದು, ಅದರಂತೆ ಸಾಮಾನ್ಯ ವರ್ಗಕ್ಕೆ 38 ವರ್ಷ, ಒಬಿಸಿ 41 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ, ಅಂಗವಿಕಲರಿಗೆ 43 ವರ್ಷದವರಿಗೆ ಅವಕಾಶ ಕಲ್ಪಿಸಿದೆ.
ಆಗಸ್ಟ್ ಮೊದಲ ವಾರದಲ್ಲಿ ಅಧಿಸೂಚನೆ ಸಾಧ್ಯತೆ
ರಾಜ್ಯಪತ್ರವನ್ನು ಮಂಗಳವಾರ ಪ್ರಕಟಿಸಲಾಗಿದೆ. ಜು.29ಕ್ಕೆ 15 ದಿನಗಳ ಸಮಯ ಮುಗಿಯಲಿದೆ. ಅದಾದ ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಬಹುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
2022ರಲ್ಲಿ 15 ಸಾವಿರ ಶಿಕ್ಷಕರ ನೇಮಕ
ಈ ಮೊದಲು 2022ರಲ್ಲಿ ಜಿಪಿಟಿ (ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು) ನೇಮಕಕ್ಕೆ ಅಧಿಸೂಚನೆ ಪ್ರಕಟಿಸಲಾಗಿತ್ತು. ಮಹಿಳಾ ಅಭ್ಯರ್ಥಿಗಳು ತಂದೆ/ಪತಿ ಆದಾಯ ಪ್ರಮಾಣ ಪತ್ರದ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಪ್ರಕರಣವು ಕೆಲವೇ ದಿನಗಳ ಹಿಂದೆಯಷ್ಟೇ ಸುಖಾಂತ್ಯ ಕಂಡಿದೆ. ಅದರಲ್ಲಿ 13,451 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು.

Any questions related to ರಾಜ್ಯ ಸರ್ಕಾರ 15000 ಶಿಕ್ಷಕರ ನೇಮಕಾತಿಗೆ ಕರಡು ಗೆಜೆಟ್ ಅಧಿಸೂಚನೆ!?