Home » ಲೈವ್ ನ್ಯೂಸ್ » ರಾಜ್ಯದ 50 ಸರ್ಕಾರಿ ಪ್ರೌಢಶಾಲೆ ಇನ್ಮುಂದೆ ಪದವಿ ಪೂರ್ವ ಕಾಲೇಜು ಸ್ಥಾಪನೆ. ಶಿಕ್ಷಣ ಇಲಾಖೆ ಆದೇಶ

ರಾಜ್ಯದ 50 ಸರ್ಕಾರಿ ಪ್ರೌಢಶಾಲೆ ಇನ್ಮುಂದೆ ಪದವಿ ಪೂರ್ವ ಕಾಲೇಜು ಸ್ಥಾಪನೆ. ಶಿಕ್ಷಣ ಇಲಾಖೆ ಆದೇಶ

Facebook
X
WhatsApp
Telegram

ಬೆಂಗಳೂರು.15.ಮಾರ್ಚ್.26: ರಾಜ್ಯ ಸರ್ಕಾರ ರಾಜ್ಯಾದ್ಯಂತ ಅರ್ಹ 50 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಹೊಸ ಕಾಲೇಜುಗಳು ಕಾರ್ಯಾರಂಭಗೊಳ್ಳಲಿವೆ.

15 ಕಿ.ಮೀ. ವ್ಯಾಪ್ತಿಯ ಸರ್ಕಾರಿ ಅಥವಾ ಅನುದಾನಿತ ಪಪೂ ಕಾಲೇಜುಗಳಿಲ್ಲದ ಮತ್ತು 10ನೇ ತರಗತಿಯಲ್ಲಿ ಕನಿಷ್ಠ 40 ವಿದ್ಯಾರ್ಥಿಗಳಿರುವ ಪ್ರೌಢಶಾಲೆಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಶಾಲೆಯಲ್ಲಿ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದರೆ, 15 ಕಿ.ಮೀ. ದೂರದ ಮಿತಿ ಸಡಿಲಿಸಿ ಮೇಲ್ದರ್ಜೆಗೇರಿಸಲಾಗುವುದು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ 4 ಶಾಲೆ, ಕೆಕೆಆರ್‌ಡಿಬಿಯಿಂದ 14 ಶಾಲೆಗಳ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಹುದ್ದೆಗಳ ಮರುಹಂಚಿಕೆ ಸಾಧ್ಯವಾಗದಿದ್ದಲ್ಲಿ, ಹೊಸ ಹುದ್ದೆಗಳಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿದೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology