ಮೈಸೂರು.10.ಜುಲೈ.26: ಉನ್ನತ ಮಟ್ಟದ ಶಿಕ್ಷಣಕಾಗಿ ಕಾಯತಿರುವ ವಿಧ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಪ್ರಸಕ್ತ ಸಾಲಿನ ಪ್ರಥಮ ವರ್ಷದ ಎಂ.ವಿ.ಎ (MVA – Master of Visual Arts) ಸ್ನಾತಕೋತ್ತರ ಪದವಿ ಪ್ರವೇಶಾತಿಗಾಗಿ ಬಿ.ವಿ.ಎ (BVA) ಅಥವಾ ಸಮಾನಾಂತರ ಕೋರ್ಸುಗಳಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಯುಯುಸಿಎಂಎಸ್ (UUCMS) ಪೋರ್ಟಲ್ https://uucms.karnataka.gov.in ವೆಬ್‌ಸೈಟ್ ಮೂಲಕ ಜುಲೈ 18 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಈ ಎಂ.ವಿ.ಎ ಸ್ನಾತಕೋತ್ತರ ಪದವಿಯು ದೃಶ್ಯಕಲೆಯಲ್ಲಿ 2 ವರ್ಷಗಳ (4 ಸೆಮಿಸ್ಟರ್‍ಗಳು) ಸಿಬಿಸಿಎಸ್ (CBCS) ಪದ್ದತಿಯ ಕೋರ್ಸು ಆಗಿದ್ದು, ಚಿತ್ರಕಲೆ (Painting), ಶಿಲ್ಪಕಲೆ (Sculpture) ಹಾಗೂ ಗ್ರಾಫಿಕ್ಸ್ (Graphics) ವಿಷಯಗಳಲ್ಲಿ ವಿಶೇಷ ಅಧ್ಯಯನವನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ: 0821-2438931 ಅನ್ನು ಸಂಪರ್ಕಿಸಬಹುದೆಂದು ಕಾಲೇಜಿನ ಡೀನ್ ತಿಳಿಸಿದ್ದಾರೆ.





Any questions related to ಮೈಸೂರು ವಿವಿ ಸ್ನಾತಕೋತ್ತರ ಪದವಿ ಪ್ರವೇಶಾತಿ ಕೊನೆಯ ದಿನಾಂಕ 18 ಜುಲೈ .?