Home » ಲೈವ್ ನ್ಯೂಸ್ » Mr ಅಂಬೇಡ್ಕರ್ ಸಂವಿಧಾನ ಬರಿಬೇಕಾದ್ರೆ ಎಣ್ಣೆ ಹೊಡೆದಿದ್ರಾ?’ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ

Mr ಅಂಬೇಡ್ಕರ್ ಸಂವಿಧಾನ ಬರಿಬೇಕಾದ್ರೆ ಎಣ್ಣೆ ಹೊಡೆದಿದ್ರಾ?’ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ

ಮಂಡ್ಯ: ಇಂದು ಸಾಮಾಜಿಕ ಜಾಲತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಿ ಜ್ಞಾನಮೂರ್ತಿ ಎಂಬಾತ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ವಿರುದ್ಧ ನಾಲಿಗೆ ಹರಿಬಿಟ್ಟಿರುವ ವಿಡಿಯೊವೊಂದು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸದ್ಯ ಆ ವ್ಯಕ್ತಿ ಇದೀಗ ಪೊಲೀಸರು areest ಮಾಡಿದ್ದಾರೆ.

ಈತ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ವಿಡಿಯೊವೊಂದನ್ನು ಹರಿಬಿಟ್ಟು ಅದರಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಪ್ರಶ್ನಿಸುವ ಭರದಲ್ಲಿ ಅಂಬೇಡ್ಕರ್ ಅವರನ್ನು ಸಂವಿಧಾನ ಬರೆಯಬೇಕಾದರೆ ಎಣ್ಣೆ ಹೊಡೆದಿದ್ರಾ ಎಂದು ಏಕವಚನದಲ್ಲಿ ನಿಂದಿಸಿದ್ದ.

ಈ ವಿಡಿಯೊ ಕಣ್ಣಿಗೆ ಬೀಳುತ್ತಿದ್ದಂತೆ ದಲಿತರು ಹಾಗೂ ಸಂವಿಧಾನ ಪರ ನಾಗರಿಕರು ವಿಡಿಯೊಂದನ್ನು ಹರಡಿ ಈತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈತನ ವಿರುದ್ಧ ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಈ ದೂರಿನ ಮೇರೆಗೆ ಆತನ ಬಂಧನವಾಗಿದೆ.

ಒಂದೆಡೆ ಆತನ ಬಂಧನವಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರೆ, ಮತ್ತೊಂದೆಡೆ ಇದೇ ವ್ಯಕ್ತಿ ಕೊರಳಿಗೆ ಚಪ್ಪಲಿ ಹಾರ ಹಾಕಿದ ಫೋಟೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲವರು ಇದು ಅಂಬೇಡ್ಕರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಕ್ಕೆ ಈತನಿಗೆ ಸದ್ಯ ಬಂದಿರುವ ಪರಿಸ್ಥಿತಿ ಎಂದು ಬರೆದುಕೊಳ್ಳುತ್ತಿದ್ದಾರೆ. ಆದರೆ ಅಸಲಿಯತ್ತಿಗೆ ಇದು ಈಗಿನ ಫೋಟೊವಲ್ಲ, ಇದು ಈ ಹಿಂದೆ ಬೆಂಗಳೂರು ವಿಶ್ವ ವಿದ್ಯಾಲಯದಲ್ಲಿ ನಡೆದಿದ್ದ ಘಟನೆಯದ್ದು ಎಂದು ‘ನಮ್ಮ ಭಾರತ್’ ಫೇಸ್‌ಬುಕ್ ಪೇಜ್ ಬರೆದುಕೊಂಡಿದೆ. ಆಗಲೂ ಸಹ ಈತ ಅಂಬೇಡ್ಕರ್ ವಿರುದ್ಧ ಮಾತನಾಡಿದ್ದ, ಆಗ ಕ್ಷಮೆ ಕೇಳಿದ್ದ ಎನ್ನಲಾಗಿದೆ.

ವಿಡಿಯೊದಲ್ಲಿ ಏನಿದೆ?

ವೈರಲ್ ಆದ ವಿಡಿಯೊದಲ್ಲಿ ಈತ ‘ರೀ ಮಿಸ್ಟರ್ ಅಂಬೇಡ್ಕರ್ ಅವರೇ, ಸಂವಿಧಾನ ಬರಿಬೇಕಾದ್ರೆ ಎಣ್ಣೆ ಏನಾದ್ರೂ ಹೊಡೆದುಕೊಂಡು ಸಂವಿಧಾನ ಬರೆದಿದ್ರಾ? ರೀ ಶಿಕ್ಷಣದಲ್ಲಿ ಮೀಸಲಾತಿ ಕೊಡಿಸಿದ್ದೀರ ಒಳ್ಳೆಯದು, ಶಿಕ್ಷಣದಲ್ಲಿ ಸಮಾನತೆ ತರಬೇಕು ಎಂದು ಕಡಿಮೆ ಅಂಕ ತೆಗೆದರೂ ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಸೀಟು ಸಿಗುವಂತೆ ಮಾಡಿದ್ದೀರ ಒಳ್ಳೆಯದು, ಅವರಿಗೆ ಕಡಿಮೆ ಶುಲ್ಕ ಕಟ್ಟುವಂತೆ ಮಾಡಿದ್ದೀರ ಒಳ್ಳೆಯದು, ಸಂಘ ರಿಜಿಸ್ಟರ್ ಮಾಡಿಕೊಂಡ್ರೆ ಅಲ್ಲೂ ಕಡಿಮೆ ಹಣ ಒಳ್ಳೆಯದು, ಪೆಟ್ರೋಲ್ ಪಂಪ್ ಆರಂಭಿಸಿದರೆ ಅಲ್ಲೂ ಸಬ್ಸಿಡಿ ಒಳ್ಳೆಯದು.

ಇಷ್ಟೆಲ್ಲ ಮೀಸಲಾತಿ ಇದ್ದ ಮೇಲೂ ಪರೀಕ್ಷೆ ಬರೆದು ಪಡೆದುಕೊಳ್ಳುವ ಸರ್ಕಾರಿ ಕೆಲಸದ ಮೇಲೂ ಯಾಕಪ್ಪ ಮೀಸಲಾತಿ?’ ಎಂದು ಪ್ರಶ್ನಿಸಿದ್ದಾನೆ.

ತಪ್ಪು ಮಾಡಿದವರನ್ನು ಕಾನೂನಿಗೆ ಬಿಡಿ

ಇನ್ನು ಈ ಚಪ್ಪಲಿ ಹಾಕಿರುವ ಫೋಟೊ ವೈರಲ್ ಆಗಿದ್ದು, ಸದ್ಯ ಇದು ಕಾನೂನು ಉಲ್ಲಂಘನೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಆ ವ್ಯಕ್ತಿ ಏನೇ ತಪ್ಪು ಮಾಡಿರಲಿ, ಅದನ್ನು ನಿರ್ಧರಿಸಲು ಅಥವಾ ಶಿಕ್ಷೆ ನೀಡಲು ಕಾನೂನು ಇದೆ. ಅದನ್ನು ಬಿಟ್ಟು ಸಾರ್ವಜನಿಕರೇ ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸಹ ಸಂವಿಧಾನ ವಿರುದ್ಧದ ನಡೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

https://x.com/Manushri15/status/2096811910243242150
https://x.com/Manushri15/status/2096811910243242150

Author

ಪ್ರಮುಖ ಸುದ್ದಿ

Stock market

Astrology