ರಾಯಚೂರು.09.ಆಗಸ್ಟ್ .25: ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ, ರಾಷ್ಟಿçಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಇವರ ನಿರ್ದೇಶನದಂತೆ ದೇಶದಾದ್ಯಂತ 90 ದಿನಗಳ ಕಾಲ ನ್ಯಾಯಾಲಯಗಳಲ್ಲಿ ಮಧ್ಯಸ್ಥಗಾರಿಕೆ ಅಭಿಯಾನ ಅಂಗವಾಗಿ ಆಗಸ್ಟ್ 7ರ ಗುರುವಾರ ದಂದು ನಗರದ ಎ.ಪಿ.ಎಮ್.ಪಿ.ಸಿ ಹಿಂದುಗಡೆಯ ಬಸವೇಶ್ವರ ಕಾಲೋನಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಮಧ್ಯಸ್ಥಗಾರಿಕೆ ಅಭಿಯಾನಕ್ಕೆ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹೆಚ್.ಎ. ಸಾತ್ವಿಕ್ ಅವರು ಚಾಲನೆ ನೀಡಿದರು.
ಅಭಿಯಾನಕ್ಕೆ ಈ ವೇಳೆ ಮಾತನಾಡಿ, ಈ ಮಧ್ಯಸ್ಥಗಾರಿಕೆ ಅಭಿಯಾನದಲ್ಲಿ ಎಲ್ಲಾ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸುವಂತಹ ಮಹತ್ವದ ಇಚ್ಛೆಯನ್ನು ಮತ್ತು ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ನುರಿತ ವಕೀಲರಗಳು ಮತ್ತು ನ್ಯಾಯಾಧೀಶರು ಭಾಗವಹಿಸಿ ಕಕ್ಷಿಗಾರರಿಗೆ ಸಂಧಾನಕಾರರಾಗಿ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಅಷ್ಟೇ ಅಲ್ಲದೇ ಸಂಧಾನ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರು ಕೂಡ ಭಾಗವಹಿಸಲಿದ್ದಾರೆ. ಜನರ ಪ್ರಕರಣಗಳಿಗೆ ಸಂಬoಧಪಟ್ಟoತಹ ಮಾಹಿತಿಗಳನ್ನು ಕೊಡುತ್ತಾರೆ ಎಂದರು.
ಸಂಧಾನ ಪ್ರಕ್ರಿಯೆ ಯಾವುದೇ ಕಕ್ಷಿಗಾರರು ಯಾವುದೇ ಕಾರಣಕ್ಕೂ ಹಣವನ್ನು ಖರ್ಚು ಮಾಡುವಂತಿಲ್ಲ. ಈ ಅಭಿಯಾನಕ್ಕೆ ಅಗತ್ಯವಿರುವ ಎಲ್ಲಾ ಖರ್ಚು ವೆಚ್ಚಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದಲೇ ಭರಿಸಲಾಗುತ್ತದೆ. ಒಂದು ಪ್ರಕರಣ ನ್ಯಾಯಾಲಯದಲ್ಲಿ ಇತ್ಯಾರ್ಥ ಆದಲ್ಲಿ ಒಬ್ಬ ಕಕ್ಷಿಗಾರ ಸೊಲುತ್ತಾರೆ. ಮತ್ತು ಇನ್ನೊಬ್ಬ ಕಕ್ಷ್ಷಿಗಾರ ಗೆಲುವು ಸಾಧಿಸುತ್ತಾರೆ. ಆದರೆ ಮಧ್ಯಸ್ಥಿಕೆ ಮೂಲಕ ವಿಲೇವಾರಿಯಾದ ಪ್ರಕರಣದಲ್ಲಿ ಕಕ್ಷಿಗಾರರು ಪ್ರೀತಿ ವಿಶ್ವಾಸದಿಂದ ಪರಸ್ಪರ ರಾಜಿ ಆಗುವುದರಿಂದ, ಸೋಲು ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಇದೇ ಸಂದರ್ಭದಲ್ಲಿ ರಾಯಚೂರಿನ ರೋಟರಿ ಕ್ಲಬ್ ಕೃಷ್ಣಾ ತುಂಗೆಯ ಅಧ್ಯಕ್ಷರಾದ ಪವನ್ ಕಿಶೋರ ಪಾಟೀಲ್, ರೋಟರಿ ಕ್ಲಬ್ ಅಸಿಸ್ಟೆಂಟ್ ಗೌರ್ವನರಾದ ಲಕ್ಷ್ಮೀಕಾಂತ್ ರೆಡ್ಡಿ, ರೋಟರಿ ಕ್ಲಬ್ ಕಾರ್ಯದರ್ಶಿಗಳಾದ ಅಮರೇಶ ರೆಡ್ಡಿ, ವಕೀಲರು, ನ್ಯಾಯಾಧೀಶರು ಸೇರಿದಂತೆ ಇತರರು ಇದ್ದರು.