|

ಆಗಸ್ಟ್ 11ರಂದು ಕೊಪ್ಪಳದಲ್ಲಿ ಯೂರಿಯ ರಸಗೊಬ್ಬರದ ವಿತರಣೆ

ಕೊಪ್ಪಳ.09.ಆಗಸ್ಟ್.25: ಕೊಪ್ಪಳ ನಗರದ ಗಂಜ್ ಸರ್ಕಲ್ ಆವರಣದಲ್ಲಿ ಇರುವ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿಯಮಿತ, ಸೊಸೈಟಿಯಲ್ಲಿ ಆಗಸ್ಟ್ 11ರ ಸೋಮವಾರದಂದು ಯೂರಿಯ ರಸಗೊಬ್ಬರದ ವಿತರಣೆ ಮಾಡಲಾಗುತ್ತಿದೆ.

ಯೂರಿಯ ಖರೀದಿಸಲು ಇಚ್ಛಿಸುವ ರೈತರು ಖಡ್ಡಾಯವಾಗಿ ಜಮೀನು ಹೊಂದಿರುವ ರೈತನ ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ ಹಾಗು ಜಮೀನಿನ ಪಹಣಿ ಜೆರಾಕ್ಸ್ ಪ್ರತಿ ತರಬೇಕು.

ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಯೂರಿಯ ರಸಗೊಬ್ಬರ ವಿತರಣೆ ಮಾಡಲಾಗುವುದು. ಈ ಹಿಂದೆ ಯೂರಿಯ ರಸಗೊಬ್ಬರ ಖರೀದಿಸಿದ ರೈತರಿಗೆ ಪುನಃ ಯೂರಿಯ ರಸಗೊಬ್ಬರ ವಿತರಿಸುವುದಿಲ್ಲ. ರೈತರ ಹೆಸರಿನಲ್ಲಿ ವಂಚನೆ ಎಸಗುವವರಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Similar Posts

Leave a Reply

Your email address will not be published. Required fields are marked *