|

ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ-ಎಂ.ಎಸ್.ಶ್ರೀಧರ್

ಬೀದರ.28.ಜೂನ್.25:- ಭಾರತ ಸಂಸ್ಕೃತಿಯಲ್ಲಿ ಮಾದಕ ವಸ್ತುಗಳಿಗೆ ನೆಲೆಯಿಲ್ಲ ಆದರು ನಮ್ಮ ಈಗಿನ ಯುವ ಪಿಳಿಗೆ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಇದರಿಂದ ಯುವಕರ ಯುವ ಕ್ರಾಂತಿ ಕೆಡವುತ್ತಿದೆ ಮತ್ತು ಪಾಶ್ಚಿಮತ್ಯ ಸಂಸ್ಕೃತಿಯ ಇದಕ್ಕೆ ಮೂಲ ಎಂದು ಬೀದರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ಎಸ್.ಶ್ರೀಧರ್ ತಿಳಿಸಿದರು.


ಅವರು ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೀದರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೀದರ, ಹೇಮಾ ಎಜುಕೇಶನಲ್ ಐಂಡ್ ಚಾರಿಟೇಬಲ್ ಟ್ರಸ್ಟ್ ಬೀದರ, ಭವಾನಿ ಮಹಿಳಾ ಮಂಡಳ ಬೀದರ, ಸಂಯುಕ್ತ ಶಿಕ್ಷಣ ಸಂಸ್ಥೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಔರಾದ ತಾಲ್ಲೂಕಿನ ಕಂದಗೂಳ ಗ್ರಾಮದ ಡಾ. ಬಾಬು ಜಗಜೀವನರಾಮ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟಿçಯ ಮಾದಕ ವಸ್ತುವಿನ ವಿರೋಧ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಈಗಿನ ಒತ್ತಡದ ಜಗತ್ತಿನಲ್ಲಿ ಯುವ ಜನತೆ ವೇಗಕ್ಕೆ ತಾಳ ಹಾಕಲು ತಪ್ಪುದಾರಿ ಹಿಡಿಯುತ್ತಿದ್ದಾರೆ. ನಮ್ಮ ಇಂದಿನ ಜೀವನಶೈಲಿಯಲ್ಲಿ ಮೋಜು, ಮಸ್ತಿ, ತಡ ರಾತ್ರಿಯ ಪಾರ್ಟಿ ಇತ್ಯಾದಿಗಳು ಮಾಮೂಲಿಯಾಗಿವೆ. ಈ ಹಂತದಲ್ಲಿ ಹದಿ ಹರೆಯದ ಯುವ ಜನರು ದಾರಿ ತಪ್ಪುವುದು ಸಾಮಾನ್ಯ. ಈ ದಿಸೆಯಲ್ಲಿ ತಂದೆ-ತಾಯoದಿರ ಆಸರೆ, ಮಾರ್ಗದರ್ಶನ ಅತೀ ಅವಶ್ಯಕವಾಗಿದೆ ಎಂದರು.


ಈ ಸಂದರ್ಭದಲ್ಲಿ ಡಯಟ್ ಬೀದರನ ನಿವೃತ್ತ ಉಪನ್ಯಾಸಕರಾದ ಟಿ.ಜೆ.ಹಾದಿಮನಿ, ಬೀದರ ಹಿರಿಯ ಸಾಹಿತಿ ವಿಜಯಲಕ್ಷಿö್ಮÃ ಕೌಟಗೆ, ಕಂದಗೂಳ ಪ್ರಫುಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮೈಜೊದ್ದಿನ್, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರತ್ನ ಸುಭಾಷ, ನಿಟ್ಟೂರ ಪಾಲಿಟೆಕ್ನಿಕ್ ಕಾಲೇಜಿನ ಅಧ್ಯಕ್ಷ ಬಸವರಾಜ ಪಾಟಿಲ್, ಸದಸ್ಯ ನಾಗರಾಜ ಹುಲಸೂರೆ, ಜಿಲ್ಲಾ ಮಹಿಳಾ ದೂರು ನಿರ್ವಹಣಾ ಸಮಿತಿ, ಕರ್ನಾಟಕ ಲೋಕಯುಕ್ತ ಬೀದರ, ಡಾ. ಬಾಬು ಜಗಜೀವನರಾಮ ಪ್ರೌಢ ಶಾಲೆಯ ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

Similar Posts

Leave a Reply

Your email address will not be published. Required fields are marked *