|

ಭಾರತ ಬಿಟ್ಟು ನಾನೆಲ್ಲೂ ಹೋಗಲ್ಲ ಎಂದ ಪಾಕ್ ಪ್ರಜೆ ಸೀಮಾ ಹೈದರ್

ನೋಯ್ಡಾ.26.ಏಪ್ರಿಲ್.25:- ಜಮ್ಮು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ಕೈಗೊಂಡ ಕೇಂದ್ರ ಸರ್ಕಾರ  ಭಾರತದ ಪ್ರೇಮಿ ಸಚಿನ್ ಮೀನಾ ಅವರನ್ನು ವರಿಸಲು ಪಾಕ್ ತೊರೆದು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ ಭಾರತ ಬಿಟ್ಟು ಹೋಗೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.  ಕಟ್ಟುನಿಟ್ಟಿನ ಆದೇಶಗಳನ್ನು ಜಾರಿಗೆ ತಂದಿದ್ದು ಪಾಕ್ ಪ್ರಜೆಗಳಿಗೆ ವೀಸಾ ಕ್ಯಾನ್ಸಲ್ ಮಾಡಿ ಭಾರತದಿಂದ ಗೇಟ್ ಪಾಸ್ ನೀಡಿದೆ.

ಈ‌ ಹಿಂದೆ 2003 ರಲ್ಲಿ ಪ್ರೇಮಿಯನ್ನು ಅರಸಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ಪ್ರಜೆಯಾಗಿರುವ 4 ಮಕ್ಕಳ ತಾಯಿ ಸೀಮಾ ಹೈದರ್‌ಗೂ ಇದೀಗ ಸಂಕಷ್ಟ ಉಂಟಾಗಿದೆ.

ಇನ್ನು ಭಾರತದ ಪ್ರೇಮಿ ಸಚಿನ್ ಮೀನಾ ಅವರನ್ನು ವರಿಸಲು ಪಾಕ್ ತೊರೆದು ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ ಭಾರತ ಬಿಟ್ಟು ಹೋಗೋ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಪಾಕ್ ಮಗಳು, ಆದರೆ ಈಗ ಭಾರತದ ಸೊಸೆ, ಹಾಗಾಗಿ ನಾನು ಭಾರತದಲ್ಲೇ ಇರುತ್ತೇನೆ.‌ ವೀಸಾ ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದ ನಂತರ ಗಡೀಪಾರು ಮಾಡುವ ಭಯದಲ್ಲಿದ್ದಾರೆ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸೀಮಾ, ನಾನು ಪಾಕಿಸ್ತಾನಕ್ಕೆ ಹೋಗಲು ಬಯಸುವುದಿಲ್ಲ. ನನಗೆ ಭಾರತದಲ್ಲಿಯೇ ಇರಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡುತ್ತೇನೆ. ಅಲ್ಲದೆ ನಾನು ಹಿಂದೂ ಧರ್ಮ ಸ್ವೀಕರಿಸಿದ್ದೇನೆ ಎಂದರು.

ಸೀಮಾ ಹೈದರ್ ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲದ ಕಾರಣ, ಅವರಿಗೆ ಭಾರತದಲ್ಲಿ ವಾಸಿಸಲು ಅವಕಾಶ ನೀಡಲಾಗುವುದು ಎಂದು ಅವರ ವಕೀಲರು ಭರವಸೆ ವ್ಯಕ್ತಪಡಿಸಿದ್ದಾರೆ.

ಸೀಮಾ ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಯಲ್ಲ. ಅವರು ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಮೀನಾ ಅವರನ್ನು ವಿವಾಹವಾಗಿರುವುದರಿಂದ ಅವರು ಗಡಿಪಾರಿನಿಂದ ಬಚಾವಾಗುವ ಸಾಧ್ಯತೆಗಳಿವೆ.

Similar Posts

Leave a Reply

Your email address will not be published. Required fields are marked *