|

ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆ ಸೆ.27ಕ್ಕೆ

ಬೀದರ.14.ಸೆಪ್ಟೆಂಬರ.25:- ಬೀದರ ಇಮಾಮಪೂರ ಜಿ.ಎನ್.ನಗರದ ನಾರಂಜಾ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ ಇದರ ಆಡಳಿತ ಮಂಡಳಿಗೆ ನಿರ್ದೇಶಕರ ಚುನಾವಣೆಯನ್ನು ಸೆಪ್ಟೆಂಬರ್.27 ರಂದು ನಿಗದಿಪಡಿಸಲಾಗಿರುತ್ತದೆ ಎಂದು ಚುನಾವಣಾಧಿಕಾರಿಗಳು, ನಾಸಸಕಾ(ನಿ) ಇಮಾಮಪೂರ ಹಾಗೂ ಸಹಾಯಕ ಆಯುಕ್ತರು ಬೀದರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಟ್ಟು 13 ನಿರ್ದೇಶಕರ ಆಯ್ಕೆ ಮಾಡಬೇಕಾಗಿರುತ್ತದೆ. ಇವುಗಳ ಪೈಕಿ 11 ನಿರ್ದೇಶಕರ ಸ್ಥಾನಗಳು “ಎ” ವರ್ಗ ಕಬ್ಬು ಬೆಳೆಗಾರರ ಮತಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿರುತ್ತದೆ. ಇದರಲ್ಲಿ 01 ಸ್ಥಾನ ಪ.ಜಾತಿ, 01 ಸ್ಥಾನ ಪ.ಪಂ. ಮತ್ತು 02 ಸ್ಥಾನಗಲು ಮಹಿಳೆಯರಿಗೆ ಹಾಗೂ 01 ಸ್ಥಾನ ಹಿಂದುಳಿದ ಪ್ರವರ್ಗ-ಎ ಮತ್ತು -1 ಸ್ಥಾನ ಹಿಂದುಳಿದ ಪ್ರವರ್ಗ-ಬಿ ಕ್ಕೆ ಸೇರಿದವರಿಗೆ ಮೀಸಲಿರಿಸಲಾಗಿರುತ್ತದೆ. “ಬಿ” ವರ್ಗದ ಕಬ್ಬು ಬೆಳೆಗಾರರಲ್ಲದ ಮತಕ್ಷೇತ್ರದಿಂದ 01 ಸ್ಥಾನ ಮತ್ತು “ಸಿ” ವರ್ಗದ ಸಹಕಾರ ಸಂಘಗಳಿಗೆ 01 ಸ್ಥಾನಕ್ಕೆ ನಿರ್ದೇಶಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡಬೇಕಾಗಿರುತ್ತದೆ.

ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸುತ್ತಿರುವ ಅಭ್ಯರ್ಥಿಗಳನ್ನು ನಾಮಪತ್ರವನ್ನು ದಿನಾಂಕ: 12-09-2025ರ ಬೆಳಿಗ್ಗೆ 11 ಗಂಟೆಯಿoದ ಮಧ್ಯಾಹ್ನ 3 ಗಂಟೆಯವರೆಗೆ ಪ್ರಾರಂಭ ದಿನಾಂಕವಾಗಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 19-09-2025 ರ ಮಧ್ಯಾಹ್ನ 3 ಗಂಟೆಗೆಯವರೆಗೆ ಇರುತ್ತದೆ.

ದಿನಾಂಕ: 20-09-2025 ರಂದು ನಾಮಪತ್ರಗಳನ್ನು ಪರಿಶೀಲನೆಗೆ ನಿಗದಿಪಡಿಸಿದ್ದು, ದಿನಾಂಕ: 21-09-2025ರ ಮಧ್ಯಾಹ್ನ 3 ಗಂಟೆಯೊಳಗಾಗಿ ನಾಮಪತ್ರವನ್ನು ಹಿಂದಕ್ಕೆ ತೆಗೆದುಕೊಳ್ಳಬಹುದಾಗಿದೆ.

ಅವಶ್ಯಕವಿದ್ದಲ್ಲಿ ದಿನಾಂಕ: 27-09-2025 ರಂದು ಮತದಾನ ದಿನಾಂಕ ಎಂದು ನಿಗದಿಪಡಿಸಲಾಗಿದೆ.

Similar Posts

Leave a Reply

Your email address will not be published. Required fields are marked *