ಬಾಗಲಕೋಟೆ

  • |

    ಸರ್ಕಾರಿ ಪ್ರಥಮ ದರ್ಜೆ ಕಾಲೇಜು‍ ಪ್ರವೇಶಕ್ಕೆ ವಿರಾಮ.

    ಬಾಗಲಕೋಟೆ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಸೆಳೆಯಲು ಭಾರಿ ಪ್ರಯಾಸ ಪಡಬೇಕು. ಆದರೆ, ಬಾಗಲಕೋಟೆಯ ನವನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನವರು ಹೆಚ್ಚು ಕಸರತ್ತು ಮಾಡಬೇಕಿಲ್ಲ. ಅಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಾರೆ. ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳದಿಂದ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪಾಳಿಯಲ್ಲಿ ಕಾಲೇಜು ನಡೆಸಲಾಗುತ್ತದೆ. ಪಿಯುಸಿ ಫಲಿತಾಂಶ ಶುರುವಾಗುತ್ತಿದ್ದಂತೆಯೇ ಪ್ರವೇಶಕ್ಕೆ ಪೈಪೋಟಿ ಆರಂಭವಾಗುತ್ತದೆ. ಬಾಗಲಕೋಟೆ ಜಿಲ್ಲೆ ಅಲ್ಲದೇ, ಬೆಳಗಾವಿ, ಕೊಪ್ಪಳ, ವಿಜಯಪುರ, ರಾಯಚೂರು ಜಿಲ್ಲೆಯ ವಿದ್ಯಾರ್ಥಿಗಳೂ ಪ್ರವೇಶ ಪಡೆದಿದ್ದಾರೆ. ಈ ಕಾಲೇಜಿನಲ್ಲಿ ಬಿ.ಎ, ಬಿ.ಕಾಂ,…