ದೃಷ್ಟಿ ಹೀನ ಕೆಂಪಮ್ಮನಿಗೆ ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಹಣ ಇಲ್ಲ

ಯಳಂದೂರು.28.ಜೂನ್.25:-ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಅಂಬೇಡ್ಕರ್ ಬಡಾವಣೆಯ ವೃದ್ದೆ ಕೆಂಪಮ್ಮ( 75)  ಎಂಬುವರಿಗೆ  ಎರಡು ಕಣ್ಣುಗಳು ದೃಷಿಯನ್ನು ಕಳೆದುಕೊಂಡು ತುಂಬಾ ಕಡುಬಡತನದಿಂದ ಒಬ್ಬಳೆ‌ ಬದುಕುತ್ತಿದ್ದಾಳೆ.

ಒಬ್ಬ ಮಗನಿದ್ದಾನೆ ಆತನು ಕೂಡ ಮದ್ಯ ವ್ಯಸನಿ ಆದ್ರೂ ತಾಯಿ‌ ಸೇವೆ ಮಾಡಿಕೊಂಡು ಒಬ್ಬನೆ ಆಳುತ್ತಾನೆ ನಮಗೆ ಯಾರು ಇಲ್ಲ ನಮಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲವೆಂದು.

ಇವರಿಗೆ ಸರಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀ ಹಣವಾಗಲಿ ಹಾಗೂ  ಪಡಿತರ ಅಕ್ಕಿಯಾಗಲಿ ಸಿಗುತ್ತಿಲ್ಲ. ಪಿಂಚಣಿ ಸೇವೆಯೊಂದೆ ಬರುತ್ತಿದೆ ಅಷ್ಟೇ.

ಚಾಮರಾಜನಗರ ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾಗಲಿ,  ಯಳಂದೂರು ತಾಲ್ಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷರುಗಾಲಿ ಇತ್ತ ಮುಖಮಾಡುತ್ತಿಲ್ಲ, ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆ ಸಂಪೂರ್ಣ ತಲುಪಿದೆ ಎಂದು ಪ್ರತಿಷ್ಠೆ ತೋರಿಸುಕೊಳ್ಳುತ್ತಿದ್ದಾರೆ.

ದಯವಿಟ್ಟು ಕೆಂಪಮ್ಮನವರಂತಹ ವೃದ್ದೆಯನ್ನು ಗುರುತಿಸಿ ಅವರಿಗೆ ಸರಕಾರದ ಯೋಜನೆಯನ್ನು ತಲುಪಿಸಿ.

ಕೆಂಪಮ್ಮನಂತಹ ವಂಚಿತ ವೃದ್ದರು ತುಂಬಾ ನೇ ಇದ್ದಾರೆ ಇಂತವರನ್ನು ಗುರುತಿಸಿ ಅವರಿಗೆ ಪಡಿತರ ಅಕ್ಕಿ, ಗೃಹಲಕ್ಷ್ಮೀ ಯೋಜನೆ,ಪಿಂಚಣಿ ಸೇವೆ  ತಲುಪುವಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಕರ್ತವ್ಯದಲ್ಲಿ ಭಾಗಿಯಾಗಬೇಕು.

ವರದಿ.ಪ್ರಸನ್ನಕುಮಾರ್ ಕೆಸ್ತೂರು

Similar Posts

Leave a Reply

Your email address will not be published. Required fields are marked *