Home » ಲೈವ್ ನ್ಯೂಸ್ » ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಟೆಕ್ನಿಕಲ್ ಅಸಿಸ್ಟೆಂಟ್ ಹಾಗೂ ಮಲ್ಟಿ ಟಾಸ್ಕಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Facebook
X
WhatsApp
Telegram

ಬೀದರ,22.ಫೆಬ್ರವರಿ.26:- ಭಾರತ ಜನಗಣತಿ 2027ರ ಕಾರ್ಯಕ್ಕಾಗಿ ಬೀದರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಎಲ್ಲಾ ಭಾರತ ಜನಗಣತಿ 2027 ರ ಚಾರ್ಜಗಳಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ (21) ಮತ್ತು ಎಂಟಿಎಸ್ (ಮಲ್ಟಿ ಟಾಸ್ಕಿಂಗ್) (02) ಹುದ್ದೆಗಳಿಗೆ 18 ತಿಂಗಳಿಗಾಗಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸಲು ಅರ್ಜಿ ಅವ್ಹಾನಿಸಲಾಗಿದೆ ಎಂದು ಬೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದೋದ್ಧೇಶ ಸಹಕಾರ ಸಂಘ (ನಿ) ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

ಅಭ್ಯರ್ಥಿಯು ನಿಗದಿ ಪಡಿಸಿರುವ ವಿದ್ಯಾರ್ಹತೆಯಲ್ಲ್ಲಿ 60% ಮೇಲ್ಪಟ್ಟು ಅಂಕ ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ, ಕಡಿಮೆ ಅಂಕ ಪಡೆದವರನ್ನು ಅರ್ಜಿ ನೀಡಲಾಗುವುದಿಲ್ಲ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ವಯೋಮಿತಿ ಜನರಲ್-35, ಓಬಿಸಿ-38 ಹಾಗೂ ಎಸ್‍ಸಿ/ಎಸ್‍ಟಿ-40 ರ ಮಿತಿ ಮೀರಿರಬಾರದು. ಅಭ್ಯರ್ಥಿಯು ಕಡ್ಡಾಯವಾಗಿ ಕೇಂದ್ರ ಸ್ಥಾನ ಬೀದರ ಜಿಲ್ಲೆಯಲ್ಲಿಯೇ ವಾಸಿಸತಕ್ಕದ್ದು.

ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಫೆಬ್ರವರಿ.25 ರೊಳಗಾಗಿ ರೂ.50 ಶುಲ್ಕ ಪಾವತಿಸಿ ಖುದ್ದಾಗಿ ಅರ್ಜಿಯನ್ನು ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳ ಸ್ವಯಂ ಧೃಡಿಕರಣದೊಂದಿಗೆ ಜೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಧೋದ್ಧೇಶ ಸಹಕಾರ ಸಂಘ (ನಿ) ಜಿಲ್ಲಾಧಿಕಾರಿಗಳ ಕಛೇರಿ, ಬೀದರದಲ್ಲಿ ಫೆಬ್ರವರಿ.26 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜೀದರ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿದ್ಧೋದ್ಧೇಶ ಸಹಕಾರ ಸಂಘ (ನಿ) ಜಿಲ್ಲಾಧಿಕಾರಿಗಳ ಕಛೇರಿ ಬೀದರ, ಅಥವಾ www.bidar.nic.in ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology