10/08/2025 4:05 AM

Translate Language

Home » ಲೈವ್ ನ್ಯೂಸ್ » ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ತಲೆ ಎತ್ತಲಿದೆ 200 ಕೋಟಿ ರೂ.ವೆಚ್ಚದ 200 ಅಡಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ

ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ತಲೆ ಎತ್ತಲಿದೆ 200 ಕೋಟಿ ರೂ.ವೆಚ್ಚದ 200 ಅಡಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ

Facebook
X
WhatsApp
Telegram

ಬೆಂಗಳೂರು.20.ಜೂನ್.25:- ಬೆಂಗಳೂರು ವಿಶ್ವವಿದ್ಯಾಲಯ ಬೆಂಗಳೂರು. ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಆವರಣದಲ್ಲಿ 200 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಒಳಗೊಂಡ ಥೀಮ್ ಪಾರ್ಕ್ ಹಾಗೂ ಸಂವಿಧಾನದ‌ ಮ್ಯೂಸಿಯಂ ಶೀಘ್ರವೇ ತಲೆ ಎತ್ತಲಿದೆ.

ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ಥೀಮ್ ಪಾರ್ಕ್ ಹಾಗೂ ಸಂವಿಧಾನದ ಮ್ಯೂಸಿಯಂ ಸ್ಥಾಪಿಸಲು ಸರ್ಕಾರ ಮುಂದಾಗಿದೆ.

ಗುರುವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಉದ್ದೇಶಿತ ಯೋಜನೆ ಕುರಿತು ಚರ್ಚಿಸಿದರು.

2019-20ನೇ ಸಾಲಿನ ಆಯವ್ಯಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಥೀಮ್ ಪಾರ್ಕ್ ಹಾಗೂ ಸಂವಿಧಾನದ ಮ್ಯೂಸಿಯಂ ಸ್ಥಾಪನೆ‌ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು.

“ಸಂವಿಧಾನ ರಚನೆಯ ಇತಿಹಾಸ, ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದೇಶದಿಂದ ಬೃಹತ್‌ ಮಟ್ಟದ ಸಂವಿಧಾನ ಮ್ಯೂಸಿಯಂ ಸ್ಥಾಪಿಸಲಾಗುವುದು ಎಂದು ಸರ್ಕಾರ ಹೇಳಿತ್ತು.

ಜ್ಞಾನಭಾರತಿ ಆವರಣದಲ್ಲಿ ಮ್ಯೂಸಿಯಂ

ಡಾ.ಬಿ.ಆರ್. ಅಂಬೇಡ್ಕರ್ ಥೀಮ್ ಪಾರ್ಕ್ ಹಾಗೂ ಸಂವಿಧಾನ ಮ್ಯೂಸಿಯಂ ಸ್ಥಾಪನೆಗೆ ಜ್ಞಾನಭಾರತಿ ಆವರಣವೇ ಸೂಕ್ತ ಎಂಬ ತಜ್ಞರ ಅಭಿಪ್ರಾಯ ಆಧರಿಸಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲು ಸರ್ಕಾರ ಮುಂದಾಗಿದೆ.

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಜ್ಞಾನಭಾರತಿ ಆವರಣ‌ ಮುಖ್ಯದ್ವಾರದ ಬಳಿ ಇರುವ 25 ಎಕರೆ ಜಾಗವನ್ನು (ಬೆಂಗಳೂರು-ಮೈಸೂರು ರೈಲ್ವೆ ಟ್ರ್ಯಾಕ್‌ ನಿಂದ ಎನ್‌.ಎಸ್‌.ಎಸ್‌ ಕೇಂದ್ರದ ಮಧ್ಯ ಭಾಗದ ರಸ್ತೆಯ ಬಲ ಬದಿ) ಸಮಾಜ ಕಲ್ಯಾಣ ವಶಕ್ಕೆ ಪಡೆಯಲು ಸಿಎಂ ಸೂಚಿಸಿದ್ದಾರೆ.

ಜ್ಞಾನಭಾರತಿ ಅವರಣವೇ ಸೂಕ್ತ ಎಂಬ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಶಾಲೆಯ ಅಭಿಪ್ರಾಯ ಆಧರಿಸಿ ಜಾಗ ಆಯ್ಕೆ ಮಾಡಲಾಗಿದೆ.

ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಜಾಗವನ್ನು ವಶಕ್ಕೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಥೀಮ್ ಪಾರ್ಕ್ ನಲ್ಲಿ ಏನೆಲ್ಲಾ ಇರಲಿದೆ?

ಥೀಮ್‌ ಪಾರ್ಕ್‌ನಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ರವರ 200 ಅಡಿ ಎತ್ತರದ ಪ್ರತಿಮೆ.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಬದುಕು, ಬರಹ, ಸಾಧನೆ ಹಾಗೂ ಭಾರತ ಸಂವಿಧಾನ ರಚನೆಯ ಇತಿಹಾಸದ ಬಗ್ಗೆ ಮ್ಯೂಸಿಯಂ.

ಡಾ.ಬಿ.ಆರ್‌.ಅಂಬೇಡ್ಕರ್‌ ಸ್ಮಾರಕ ಬೃಹತ್‌ ಗ್ರಂಥಾಲಯ.

ಬೌದ್ಧ ಸ್ತೂಪಗಳು ಮತ್ತು ವಿವಿಧ ಶಿಲ್ಪ ಕಲಾಕೃತಿಗಳು.

ಕಾನ್ಫರೆನ್ಸ್‌ ಹಾಲ್‌, ಮಿನಿ ಥಿಯೇಟರ್‌, ಉದ್ಯಾನವನ, ಸಂಗೀತ ಕಾರಂಜಿ ಇತ್ಯಾದಿ ಇರಲಿದೆ.

ಆಂಧ್ರದಲ್ಲಿರುವ ಪ್ರತಿಮೆ‌ ಎತ್ತರವೆಷ್ಟು?

ಆಂಧ್ರಪ್ರದೇಶ ಸರ್ಕಾರ ವಿಜಯವಾಡದ ಸ್ವರಾಜ್ ಮೈದಾನದಲ್ಲಿ ವಿಶ್ವದ ಅತಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಈ ಪ್ರತಿಮೆಯು 206 ಅಡಿ ಎತ್ತರವಿದ್ದು, ಅಮರಾವತಿಯ ಅಂಬೇಡ್ಕರ್ ಸ್ಮೃತಿ ವನದಲ್ಲಿ 81 ಅಡಿ ಎತ್ತರದ ಪೀಠದ ಮೇಲೆ ಸ್ಥಾಪಿಸಲಾಗಿದೆ.(ಇಲ್ಲಿ 125 ಅಡಿ ಅಂಬೇಡ್ಕರ್ ಪ್ರತಿಮೆ ಎತ್ತರ, 81 ಅಡಿ ಪೀಠದ ಎತ್ತರ ಸೇರಿ ಒಟ್ಟು 206 ಅಡಿ ಎಂದು ಪರಿಗಣಿಸಲಾಗಿದೆ)

ಪ್ರತಿಮೆ ಹಾಗೂ ಉದ್ಯಾನವನ್ನು 18.81 ಎಕರೆ ವಿಸ್ತೀರ್ಣದಲ್ಲಿ ಒಟ್ಟು 404.35 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD