|

ಕೊಪ್ಪಳ | ಉಚಿತ ಆರೋಗ್ಯ ತಪಾಸಣೆ 14ರಂದು

ಕೊಪ್ಪಳ.11.ಸೆಪ್ಟೆಂಬರ್.25:- ಇತ್ತೀಚೆಗಿನ ವರ್ಷಗಳಲ್ಲಿ ವಯಸ್ಸಿನ ಅಂತರವಿಲ್ಲದೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕವು ನಗರದ ಕೆ.ಎಸ್‌. ಆಸ್ಪತ್ರೆ ಸಹಯೋಗದಲ್ಲಿ ಸೆ. 14ರಂದು ಬೆಳಿಗ್ಗೆ 9 ಗಂಟೆಯಿಂದ ಪ್ರಶಾಂತ್ ಬಡಾವಣೆಯಲ್ಲಿರುವ ಶ್ರೀ ವಿಠ್ಠಲಕೃಷ್ಣ ದೇವಸ್ಥಾನದ ಸಮುದಾಯ ಭವನದಲ್ಲಿ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.

ಆರಂಭಿಕ ಹಂತದಲ್ಲಿ ಮಹಾಸಭಾದ ಸದಸ್ಯತ್ವ ಹೊಂದಿದ ಸದಸ್ಯರಿಗೆ ಮಾತ್ರ ಆದ್ಯತೆ ಮೇರೆಗೆ ತಪಾಸಣೆ ನಡೆಯಲಿದೆ. ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ಪತ್ತೆಗೆ ಇಸಿಜಿ ಸೇರಿದಂತೆ ಹಲವು ಪರೀಕ್ಷೆ ಹಾಗೂ ವೈದ್ಯರೊಂದಿಗೆ ಸಮಾಲೋಚನೆ ಸೌಲಭ್ಯ ಇರಲಿದೆ. 

ಆರೋಗ್ಯ ಶಿಬಿರ ಮತ್ತು ಸದಸ್ಯತ್ವ ನೋಂದಣಿಗಾಗಿ ಸಂಘದ ರಾಜ್ಯ ಕೇಂದ್ರ ಕಾರ್ಯಕಾರಿಣಿ ಸಮಿತಿ ಸದಸ್ಯ ಎಚ್‌.ಬಿ. ದೇಶಪಾಂಡೆ 7348983604 ಅಥವಾ ಜಿಲ್ಲಾ ಚುನಾಯಿತ ಪ್ರತಿನಿಧಿ ಗುರುರಾಜ ಎನ್‌. ಜೋಶಿ  9986680835 ಅವರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ:  ಗುರುರಾಜ ಎನ್‌. ಜೋಶಿ  9986680835 ಅವರನ್ನು ಸಂಪರ್ಕಿಸಬಹುದು,

Similar Posts

Leave a Reply

Your email address will not be published. Required fields are marked *