ಹೊಸ ದೆಹಲಿ.16.ಮಾರ್ಚ್.26: ಎಂಟನೇ ವೇತನ ಆಯೋಗದ ಶಿಫಾರಸುಗಳು ಅಂತಿಮವಾಗುವ ಸಮಯ ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ (8th CPC) ಸಮಾಲೋಚನೆಗಳನ್ನು ಪ್ರಾರಂಭಿಸಿದೆ 4. ಸಾರ್ವಜನಿಕರು ಮತ್ತು ಪಾಲುದಾರರಿಂದ ಸಲಹೆಗಳನ್ನು ಸಲ್ಲಿಸಲು 2026ರ ಏಪ್ರಿಲ್ 30ರವರೆಗೆ ಅವಕಾಶ ಕಲ್ಪಿಸಲಾಗಿದೆ
ಏಳನೇ ವೇತನ ಆಯೋಗದ ಅವಧಿ 2025ರ ಡಿಸೆಂಬರ್ 31ಕ್ಕೆ ಮುಗಿದಿದೆ. ಎಂಟನೇ ವೇತನ ಆಯೋಗ ಜಾರಿಗೆ ಬರುತ್ತಿದೆ. ಎಂಟನೇ ವೇತನ ಆಯೋಗವು ಕೋಟ್ಯಂತರ ಸರ್ಕಾರಿ ನೌಕರರು ಮತ್ತು ನಿವೃತ್ತರಿಗೆ ಸಂಬಳ, ಪಿಂಚಣಿ, ಭತ್ಯೆಗಳನ್ನು ಪರಿಷ್ಕರಿಸುವ ಕೆಲಸ ಮಾಡುತ್ತಿದೆ.
ಅಧಿಸೂಚನೆಯಾಗಿ 18 ತಿಂಗಳೊಳಗೆ ಆಯೋಗವು ತನ್ನ ಈ ಜವಾಬ್ದಾರಿಯನ್ನು ಮುಗಿಸಬೇಕಿದೆ. ವೇತನ, ಪಿಂಚಣಿ ಮತ್ತು ಭತ್ಯೆ ಪರಿಷ್ಕರಣೆ ಕುರಿದಂತೆ ಉದ್ಯೋಗಿಗಳು, ಪಿಂಚಣಿದಾರು, ಉದ್ಯೋಗಿಗಳ ಒಕ್ಕೂಟಗಳು ಮತ್ತಿತರ ಭಾಗೀದಾರರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ. 2026ರ ಏಪ್ರಿಲ್ 30ರವರೆಗೂ ಆನ್ಲೈನ್ ಪೋರ್ಟಲ್ನಲ್ಲಿ ಈ ಸಲಹೆಗಳನ್ನು ಕಳುಹಿಸುವ ಅವಕಾಶ ಇರುತ್ತದೆ.
ಎಂಟನೇ ವೇತನ ಆಯೋಗದ ಕಾರ್ಯಾಚರಣೆ ನಿಯಮ ಅಥವಾ ಟರ್ಮ್ಸ್ ಆಫ್ ರೆಫರೆನ್ಸ್ಗೆ 2025ರ ನವೆಂಬರ್ 3ರಂದು ಅಧಿಸೂಚನೆ ಕೊಡಲಾಗಿದೆ. ಇದಾಗಿ 18 ತಿಂಗಳು ಎಂದರೆ 2027ರ ಏಪ್ರಿಲ್-ಮೇ ತಿಂಗಳೊಳಗೆ ಆಯೋಗವು ವೇತನ ನಿಗದಿಗೆ ಅಂತಿಮ ಸೂತ್ರಗಳನ್ನು ಶಿಫಾರಸು ಮಾಡಬೇಕಾಗುತ್ತದೆ.
ದೇಶದಲ್ಲಿ ಸದ್ಯ ಸಕ್ರಿಯವಾಗಿರುವ 50 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿದ್ದಾರೆ. 69 ಲಕ್ಷ ಪಿಂಚಣಿದಾರರಿದ್ದಾರೆ. ಫಲಾನುಭವಿಗಳ ಸಂಖ್ಯೆ ಒಟ್ಟು 1.2 ಕೋಟಿಯಷ್ಟು ಆಗಬಹುದು.
ಎಂಟನೇ ವೇತನ ಆಯೋಗವು ಎಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಬಹುದು?
ಎಂಟನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ ಮಾಡಬಹುದಾದ ವೇತನ ಏರಿಕೆ ಶೇ. 20-35ರಷ್ಟು ಇರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ವೇತನ ಪರಿಷ್ಕರಣೆಯಲ್ಲಿ ಮುಖ್ಯ ಭಾಗವಾಗಿರುವುದು ಫಿಟ್ಮೆಂಟ್ ಫ್ಯಾಕ್ಟರ್. ಇದು 2.4ರಿಂದ 3.0 ಶ್ರೇಣಿಯಲ್ಲಿ ಇರಬಹುದು. ಮೂಲವೇತನ ಪರಿಷ್ಕರಣೆಗೆ ಆಧಾರವಾಗುವ ಈ ಫಿಟ್ಮೆಂಟ್ ಫ್ಯಾಕ್ಟರ್ ಹಲವು ಆರ್ಥಿಕ ಅಂಶಗಳನ್ನು ಆಧರಿಸಿರುತ್ತದೆ.
ಮುಂದಿನ 12-18 ತಿಂಗಳಲ್ಲಿ ಹಣದುಬ್ಬರ ಎಷ್ಟಿರಬಹುದು ಎಂಬಿತ್ಯಾದಿ ಆರ್ಥಿಕ ಅಂಶಗಳು ಎಂಟನೇ ವೇತನ ಆಯೋಗದ ಶಿಫಾರಸಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ಬಾರಿ ಒಟ್ಟಾರೆ ವೇತನ ಹೆಚ್ಚಳ ಸುಮಾರು ಶೇ. 20-35ರಷ್ಟಿರಬಹುದು. 7ನೇ ವೇತನ ಆಯೋಗದಿಂದ ಶೇ. 23-25ರಷ್ಟು ಸಂಬಳ ಹೆಚ್ಚಳ ಆಗಿತ್ತು. ಅದಕ್ಕೂ ಹಿಂದಿನ 6ನೇ ವೇತನ ಆಯೋಗವು ಶೇ. 40ರಷ್ಟು ವೇತನ ಏರಿಕೆಗೆ ಶಿಫರಸು ಮಾಡಿತ್ತು.






Any questions related to ಕೇಂದ್ರ ಸರ್ಕಾರಿ ನೌಕರರಿಗೆ ಶೇ 35ರಷ್ಟು ವೇತನ ಏರಿಕೆಯಾ ??