Home » ಲೈವ್ ನ್ಯೂಸ್ » ಒಳಮೀಸಲಾತಿ ಗೊಂದಲ ಮಾರ್ಚ್ 28ಕ್ಕೆ ಬಗೆಹರಿಯುತ್ತೆ : ಗೃಹ ಸಚಿವ ಜಿ ಪರಮೇಶ್ವರ..

ಒಳಮೀಸಲಾತಿ ಗೊಂದಲ ಮಾರ್ಚ್ 28ಕ್ಕೆ ಬಗೆಹರಿಯುತ್ತೆ : ಗೃಹ ಸಚಿವ ಜಿ ಪರಮೇಶ್ವರ..

Facebook
X
WhatsApp
Telegram

ಬೆಂಗಳೂರು.15.ಮಾರ್ಚ್.26: ರಾಜ್ಯದಲ್ಲಿ ಒಳಮೀಸಲಾತಿ ಗೊಂದಲ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಕಾಂಗ್ರೆಸ್ ವಿರುದ್ಧ ವಿಪಕ್ಷಗಳು ಮುಗಿಬಿದ್ದಿವೆ.ಸದ್ಯ ಒಳಮೀಸಲಾತಿ ಬಗ್ಗೆ ಇದೇ ತಿಂಗಳು ಸರ್ಕಾರ ತಾರ್ಕಿಕ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದ್ದು, ಈ ತಿಂಗಳಾoತ್ಯಕ್ಕೆ ನಡೆಯುವ ಕ್ಯಾಬಿನೆಟ್ ಮೀಟಿಂಗ್ನನಲ್ಲಿ ಚರ್ಚೆ ಮಾಡಲಾಗುವುದು.ತುಮಕೂರಲ್ಲಿ ಮಾತಾಡಿದ ಅವರು, ಮಾರ್ಚ್ 28ಕ್ಕೆ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಆ ಒಂದು ಸಂಪುಟ ಸಭೆಯ ಬಳಿಕ ಒಳ ಮೀಸಲಾತಿ ಜಾರಿಗೆ ಬರಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಳ ಮೀಸಲಾತಿ ಜಟಾಪಟಿ ವಿಚಾರಕ್ಕೆ ಸಂಬಂಧಪಟ್ಟಂತೆ ಮಾರ್ಚ್ 28ರಂದು ಸಿಎಂ ಸಿದ್ದರಾಮಯ್ಯ ವಿಶೇಷ ಸಂಪುಟ ಸಭೆ ಕರೆದಿದ್ದಾರೆ. ಬಹುತೇಕ ಅವತ್ತು ಎಲ್ಲಾ ಗೊಂದಲ ಬಗೆಹರಿಯುತ್ತದೆ ಎಂದು ಅಂದುಕೊಂಡಿದ್ದೇನೆ. ಸಭೆಯಲ್ಲಿ ತೀರ್ಮಾನವಾದ ಬಳಿಕ ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತದೆ ಎಂದರು.

ಸರ್ಕಾರದ ಆದೇಶದ ಬಳಿಕ ನಮ್ಮ ಆಯ್ಕೆ ಪ್ರಕ್ರಿಯೆ ಶುರುವಾಗುತ್ತದೆ. 50,000 ಹುದ್ದೆ ನೇಮಕ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ.ಪೊಲೀಸ್ ಇಲಾಖೆಯಲ್ಲಿ 8 ಸಾವಿರ ಹುದ್ದೆಗಳು ಖಾಲಿ ಇವೆ. ರಾಜ್ಯ ಸರ್ಕಾರ ತೀರ್ಮಾನ ನಂತರ ತುರ್ತಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಸಿಲಿಂಡರ್ ಸಮಸ್ಯೆ ಇಲ್ಲ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಮಸ್ಯೆ ತಲೆದೂರಿದೆ ಎನ್ನುತ್ತಿದ್ದಾರೆ. ಆದರೆ ಗ್ರಹ ಬಳಿಕೆಯ ಸಿಲಿಂಡರ್ಗಳ ಸಮಸ್ಯೆ ಇಲ್ಲ ಹೋಟೆಲ್ನವರಿಗೆ ಒಂದೆರಡು ದಿನ ಸಮಸ್ಯೆ ಆಗಬಹುದು. ಕಾಳಸಂತೆಯಲ್ಲಿ ಸಿಲಿಂಡರ್ ಗಳನ್ನು ಮಾರಾಟ ಮಾಡಿದರೆ ಕಠಿಣವಾದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology