|

ಐದು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿ

ಬೆಂಗಳೂರು.07.ಜನವರಿ.26: ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1983ರಿಂದ ಐದು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸನ್ಮಾನ್ಯ ಮುಖ್ಯಮಂತ್ರಿ Siddaramaiah ಅವರು ಈ ರಾಜ್ಯ ಕಂಡ ಜನಮಾನಸದ ನಾಯಕರು.

ಅಲ್ಪಸಂಖ್ಯಾತರು, ಹಿಂದುಳಿದವರು, ದುರ್ಬಲ ವರ್ಗಗಳು ಹಾಗೂ ಪರಿಶಿಷ್ಟ ಜಾತಿ–ಪಂಗಡಗಳ ಸಮಗ್ರ ಸಬಲೀಕರಣಕ್ಕೆ ದೂರದೃಷ್ಟಿಯ ನಾಯಕತ್ವ ನೀಡಿದ ಫಲವಾಗಿ, ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ದಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅಪೂರ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಸಮಾಜವಾದದ ತತ್ವದ ನೆಲೆಯಲ್ಲಿ ಸಾಮಾಜಿಕ ನ್ಯಾಯದ ರಾಜಕಾರಣ ರೂಪಿಸಿಕೊಂಡ ಅವರು, ರಾಜ್ಯದಲ್ಲಿ 16 ಬಾರಿ ಬಜೆಟ್ ಮಂಡಿಸಿದ ವಿಶಿಷ್ಟ ಕೀರ್ತಿಗೂ ಪಾತ್ರರು.
ಆಡಳಿತಗಾರರಾಗಿಯೂ ಆರ್ಥಿಕ ತಜ್ಞರಾಗಿಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ರೂಪಿಸಿದ ಅವರ ಯೋಜನೆಗಳು ಚಿರಸ್ಥಾಯಿಯಾಗಿ ದೇಶಕ್ಕೇ ಮಾದರಿಯಾಗಿವೆ.
ಈ ಮಹತ್ವದ ಸಾಧನೆಗೆ ಹೃತ್ಪೂರ್ವಕ ಶುಭಾಶಯಗಳು.

Similar Posts

Leave a Reply

Your email address will not be published. Required fields are marked *