ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಿಂದ ‘ಪ್ರತಿಭಾ ಪುರಸ್ಕಾರ’ಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘವು ತನ್ನ ಸದಸ್ಯ ಹಾಗೂ ಸಹಸದಸ್ಯರ ಮಕ್ಕಳಿಗೆ 2025ನೇ ಸಾಲಿನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲು ಅರ್ಜಿಗಳನ್ನು ಆಹ್ವಾನಿಸಿದೆ.

ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪುರಸ್ಕಾರವನ್ನು ನೀಡಲಾಗುತ್ತಿದೆ.

ಪ್ರತಿಭಾ ಪುರಸ್ಕಾರವನ್ನು ಆಗಸ್ಟ್ 23 ರಂದು ಜರುಗುವ ಸರ್ವಸದಸ್ಯರ ಸಭೆಯಲ್ಲಿ ವಿತರಿಸಲಾಗುವುದು ಎಂದು ಸಂಘದ ಅಧ್ಯಕ್ಷ ರಮೇಶ್ ಪಾಳ್ಯ ಹಾಗೂ ಕಾರ್ಯದರ್ಶಿ (ಪ್ರಭಾರ) ಹೆಚ್.ಎಸ್. ಕೆಂಪರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಮಾನದಂಡಗಳು:

* ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು: ಶೇಕಡಾ 85ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

* ಪಿ.ಯು.ಸಿ. (ಎಲ್ಲ ವಿಭಾಗಗಳು) ವಿದ್ಯಾರ್ಥಿಗಳು: ಶೇಕಡಾ 80ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

* ಪದವಿ/ಸ್ನಾತಕೋತ್ತರ ಪದವಿ (ಎಲ್ಲಾ ರೀತಿಯ ಪದವಿ) ವಿದ್ಯಾರ್ಥಿಗಳು: ಶೇಕಡಾ 80ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ವಿದ್ಯಾರ್ಥಿಗಳು ತಮ್ಮ 2025ನೇ ಇಸವಿಯಲ್ಲಿ ನಡೆದ ಪರೀಕ್ಷೆಯ ಅಂಕಪಟ್ಟಿಯ ಜೆರಾಕ್ಸ್ ಪ್ರತಿ, ಇತ್ತೀಚಿನ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ ಆಗಸ್ಟ್ 10 ರ ಒಳಗಾಗಿ ಸಂಘಕ್ಕೆ ವಿವರಗಳನ್ನು ಸಲ್ಲಿಸಬೇಕು.

ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಮಾನ್ಯತೆ:

ಶೈಕ್ಷಣಿಕ ಸಾಧನೆಯ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿ (ಉದಾಹರಣೆಗೆ: ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ ಇತ್ಯಾದಿ) ಯಾವುದೇ ವಿಶೇಷ ಸಾಧನೆ ಮಾಡಿದ್ದಲ್ಲಿ, ಅದಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಸಾಧನೆಗಳನ್ನು ಆಡಳಿತ ಮಂಡಳಿಯು ಪರಿಶೀಲಿಸಿ, ಆಯ್ಕೆಯಾದವರನ್ನು ಸಭೆಯಲ್ಲಿ ಅಭಿನಂದಿಸಲಿದೆ.

Similar Posts

Leave a Reply

Your email address will not be published. Required fields are marked *