|

ಉತ್ಪಾದಕ ಸಂಸ್ಥೆಗಳನ್ನು ಬಲಗೊಳಿಸಲು ಅಗತ್ಯ ಸಹಾಯ
ಒದಗಿಸಲಾಗುವುದು-ಸಿಇಓ ಡಾ.ಗಿರೀಶ ಬದೋಲೆ


ಬೀದರ.04.ಜೂನ್25:- ಕರ್ನಾಟಕದಲ್ಲಿ ಬೀದರ ಜಿಲ್ಲೆಯ ಹಲಬರ್ಗಾ ಗ್ರಾಮ ಪಂಚಾಯತಿಯ ಜನಶ್ರೀ ಮಹಿಳಾ ರೈತ ಉತ್ಪಾದಕರ ಕಂಪನಿ ಮೊಟ್ಟ ಮೊದಲಿಗೆ ಬೀಜ, ರಸಗೊಬ್ಬರ ಪರವಾನಿಗೆ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಉತ್ಪಾದಕ ಸಂಸ್ಥೆಗಳನ್ನು ಬಲಗೊಳಿಸಲು ಅಗತ್ಯ ಸಹಾಯ ಮಾಡಲಾಗುತ್ತದೆ ಎಂದು ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ತಿಳಿಸಿದರು.


ಅವರು ಇತ್ತೀಚಿಗೆ ರಾಷ್ಟಿçಯ ಗ್ರಾಮೀಣ ಜೀವನೋಪಾಯ ಅಭಿಯಾನ ಯೋಜನೆಯಡಿ ಹಲಬರ್ಗಾ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಂಡಿದ್ದ ಜನಶ್ರೀ ಮಹಿಳಾ ರೈತ ಉತ್ಪಾದಕರ ಕಂಪನಿಯ ಉದ್ಘಾಟನಾ ಸಮಾರಂಭದಲ್ಲಿ ಬೀಜ ಹಾಗೂ ರಸಗೊಬ್ಬರಗಳನ್ನು ಕಂಪನಿಯ ಶೇರುದಾರಿಗೆ ನೀಡಿ ಮಾತನಾಡಿದರು.


ಮಹಿಳೆಯರ ಸ್ವಸಹಾಯ ಸಂಘಗಳ ಮುಖಾಂತರ ಗ್ರಾಮೀಣ ಬಡತನ ನಿವಾರಣೆ ಕಾರ್ಯಕ್ರಮವಾಗಿದ್ದು, ಬೀಜ, ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ ಕಂಪನಿ ಲಾಭವಾಗುವಂತೆ ಶ್ರಮಿಸಬೇಕೆಂದು ಹೇಳಿದರು.
ಹಲಬರ್ಗಾ ರಾಚೋಟೇಶ್ವರ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ಸ್ವ-ಸಹಾಯ ಸಂಘದ ಮಹಿಳೆಯರನ್ನು ಒಗ್ಗೂಡಿಸುವ ಮೂಲಕ ಕಂಪನಿ ಸ್ಥಾಪನೆ ಮಾಡಿದ್ದು, ರೈತ ಮಹಿಳೆಯರು ಬೆಳೆಗಳನ್ನು ಬೆಳದು, ಬೆಳೆಗಳ ಸಂಸ್ಕರಣೆ ಹಾಗೂ ಮಾರಾಟ ಮಾಡುವಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ಸ್ವಯಂ ಉದ್ಯೋಗ ಮಾಡಬೇಕೆಂದು ತಿಳಿಸಿದರು.


ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಪಂಚಾಯತ ಡಿಆರ್‌ಡಿಎ ಯೋಜನಾ ನಿರ್ದೇಶಕರು, ಭಾಲ್ಕಿ ಕಾರ್ಯನಿರ್ವಾಹಕ ಅಧಿಕಾರಿಗಳು, ಹಲಬರ್ಗಾ ಗ್ರಾಮ ಪಂಚಾಯತ ಅಧ್ಯಕ್ಷರು, ಹಲಬರ್ಗಾ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಎನ್‌ಆರ್‌ಎಲ್‌ಎಮ್ ಜಿಲ್ಲಾ ಹಾಗೂ ತಾಲ್ಲೂಕ ಮಟ್ಟದ ಸಿಬ್ಬಂದಿಗಳು ಹಾಗೂ ಕಂಪನಿಯ ಶೇರುದಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Similar Posts

Leave a Reply

Your email address will not be published. Required fields are marked *