|

ಶಾಂತಿಯ ಮಾರ್ಗವನ್ನು ತೋರಿಸಿದ ತಥಾಗತ್ ಗೌತಮ ಬುದ್ಧ .

ಚಿಕ್ಕೋಡಿ.18.ಮೇ.25:- ಚಿಕ್ಕೋಡಿ ಲೋಕಸಭಾ ಸದಸ್ಯರಾದ ಕು ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ನಿಪ್ಪಾಣಿ ತಾಲೂಕಿನ  ಹಂಚಿನಾಳ (ಕೆ.ಎಸ್.) ಗ್ರಾಮದ ತಥಾಗತ ಗೌತಮ ಬುದ್ಧ ಮತ್ತು ವಿಶ್ವರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಶ್ಠಾಪನಾ ಸಮಿತಿ ನೇತೃತ್ವದಲ್ಲಿ ಆಯೋಜಿಸಲಾದ ಬುದ್ಧ ಪ್ರತಿಮೆ ಸ್ಥಾಪನೆ ಮತ್ತು ಧಮ್ಮ ಪರಿಷತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು
ಶಾಂತಿಯ ಮಾರ್ಗವನ್ನು ತೋರಿಸಿದ ಗೌತಮ ಬುದ್ಧ ಮತ್ತು ಬೋಧಿ ಸತ್ವ ಪಂಚ ಧಾತು ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ  ಈ ವೇಳೆ ಪುಷ್ಪ ‌ನಮನಗಳನ್ನು ಸಲ್ಲಿಸಿದರು.


ಈ ಸಂದರ್ಭದಲ್ಲಿ ಪು. ಭದಂತ್ ಆರ್ ಆನಂದ್ ಥೀರೋ, ಪು. ಭದಂತ್ ಪ್ರೊ. ಡಾ. ಯಶ್ ಕಶ್ಯಪನ್, ಪು.ಭದಂತ್ ಎಸ್.ಸಂಬೋಧಿ ಥೇರೋ, ಪು. ಭದಂತ್ ಗೋವಿಂದೋ ಮಾನದೊ ಅವರು ಸೇರಿ  ಸಮಿತಿಯ ಪದಾಧಿಕಾರಿಗಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Similar Posts

Leave a Reply

Your email address will not be published. Required fields are marked *