10/08/2025 12:16 AM

Translate Language

Home » ಲೈವ್ ನ್ಯೂಸ್ » ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

ಇಫ್ಕೋ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ, ರೈತ-ವಿಜ್ಞಾನಿ ಚರ್ಚಾಗೋಷ್ಠಿ

Facebook
X
WhatsApp
Telegram



ರೈತರು ನ್ಯಾನೋ ರಸಗೊಬ್ಬರಗಳ ಬಳಕೆ ಹೆಚ್ಚಿಸಿ: ಸಿಇಓ ವರ್ಣಿತ್ ನೇಗಿ

ಕೊಪ್ಪಳ.09.ಆಗಸ್ಟ್.25: ರೈತರು ತಮ್ಮ ಬೆಳೆಗಳಿಗೆ ನ್ಯಾನೋ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಹೇಳಿದರು.

ಅವರು ಗುರುವಾರ ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಕೃಷಿ ಪತ್ತಿನ ಬ್ಯಾಂಕ್ ಸಭಾಂಗಣದಲ್ಲಿ ಇಫ್ಕೋ ಕಂಪನಿ, ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಕೊಪ್ಪಳ, ಕೃಷಿ ವಿಜ್ಞಾನ ಕೇಂದ್ರ, ಗಂಗಾವತಿ ರವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕೀರಣ ಮತ್ತು ರೈತ-ವಿಜ್ಞಾನಿ ಚಚಾಗೋಷ್ಠಿಯ ಉದ್ಘಾಟಿಸಿ ಮಾತನಾಡಿದರು.

ಯೂರಿಯಾ ಗೊಬ್ಬರ ಕೊರತೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಕಿನ್ನಾಳದಲ್ಲಿ ಒಂದು ಶೈತ್ಯಾಗಾರದ ಬಗ್ಗೆಯೂ ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಮಾನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಬದಲಾದ ಪರಿಸ್ಥಿತಿಯಲ್ಲಿ ನ್ಯಾನೋ ರಸಗೊಬ್ಬರಗಳ ಬಳಕೆ ಪರ್ಯಾಯವಾಗಿ ಮಾಡಿ ರೈತರು ತಮ್ಮ ಬೆಳೆಗಳನ್ನಷ್ಟೇ ಅಲ್ಲದೇ ಪರಿಸರ ಮನುಷ್ಯನ ಆರೋಗ್ಯವನ್ನೂ ಕಾಪಡಿಕೊಳ್ಳಬಹುದು ಎಂದರು.

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ.ರವಿ ಅವರು ನ್ಯಾನೋ ಯೂರಿಯಾ, ನ್ಯಾನೋ ಡಿ.ಎ.ಪಿ. ರಸಗೊಬ್ಬರಗಳ ಬಗ್ಗೆ ಸಮಗ್ರ ವೈಜ್ಞಾನಿಕ ಮಾಹಿತಿ ನೀಡಿ, ಶಿಫಾರಸ್ಸು ಮಾಡಿ ಗೊಬ್ಬರ ಪ್ರಮಾಣವನ್ನು ನ್ಯಾನೋ ರಸಗೊಬ್ಬರಗಲ್ಲದೇ ಕಡ್ಡಾಯವಾಗಿ ಕೊಟ್ಟಿಗೆ ಗೊಬ್ಬರ, ಬೀಜೋಪಚಾರ ಮಾಡುವುದರಿಂದ ಶೇ. 25 ರಿಂದ 50 ರಷ್ಟು ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ನ್ಯಾನೋ ಡಿ.ಎ.ಪಿ. ಬೀಜೋಪಚಾರಕ್ಕೂ ಬಳಸಬಹುದು. ನ್ಯಾನೋ ಡಿ.ಎ.ಪಿ. ರಸ ಗೊಬ್ಬರಗಳನ್ನು ಬಳಸುವಾಗ ಕೇವಲ 125 ಲೀ. ಸಿಂಪರಣಾ ದ್ರಾವಣ ಬಳಸಬೇಕು. ಡ್ರೋನ್ ಮೂಲಕ ಸರಿಯಾಗಿ 10 ಲೀಟರ್ ನೀರಿಗೆ ಶಿಫಾರಸು ಮಾಡಿದ ಪ್ರಮಾಣ ಬಳಸಿದರೆ ಮಾತ್ರ ಪರಿಣಾಮಕಾರಿಯಾದ ಫಲಿತಾಂಶ ಇರುತ್ತದೆ ಎಂದು ವೈಜ್ಞಾನಿಕ ಮಾಹಿತಿ ನೀಡಿದರು.
ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಡಾ. ರಾಘವೇಂದ್ರ ಎಲಿಗಾರ ಅವರು ಮಾತನಾಡಿ, ಮಣ್ಣಿನ ಫಲವತ್ತತೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಇದಕ್ಕೆ ನ್ಯಾನೋ ರಸಗೊಬ್ಬರಗಳ ಬಳಕೆ ಅತೀ ಸೂಕ್ತ ಎಂಬ ಮಾಹಿತಿ ನೀಡಿದರು.

ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಯೂರಿಯಾ ಪೂರೈಕೆ ಕುರಿತು ಮಾತನಾಡಿ, ರೈತರು ಆತುರಕ್ಕೆ ಒಳಗಾಗಬಾರದು. ಜಿಲ್ಲೆಯಲ್ಲಿ ಹಂತ ಹಂತವಾಗಿ ಯೂರಿಯಾ ಗೊಬ್ಬರ ಪೂರೈಸಲಾಗುವುದು ಎಂದು ತಿಳಿಸಿದರು.
ಆರ್.ಜಿ.ಬಿ. ಸದಸ್ಯರಾದ ಅಮರೇಶ ಉಪಲಾಪುರ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.

ಅಧ್ಯಕ್ಷರಾದ ಬಸವರಾಜ ಚಿಲವಾಡಗಿ ಅವರು, ಪತ್ತಿನ ಸಹಕಾರಿ ಬ್ಯಾಂಕನ ನಡೆದು ಬಂದ ದಾರಿ ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ವಿವರಿಸುತ್ತಾ ಕಿನ್ನಾಳ ಹೋಬಳಿ ಒಂದು ಶೈತ್ಯಾಗಾರ ಮಂಜೂರು ಮಾಡದಂತೆ ತಿಳಿಸಿದರು.

ಇದಕ್ಕೂ ಮೊದಲು ಇಫ್ಕೋ ಕಂಪನಿವತಿಯಿಂದ ಆಯೋಜಿಸಿದ ಡ್ರೋನ್ ಮೂಲಕ ನ್ಯಾನೋ ರಸಗೊಬ್ಬರಗಳ ಸಿಂಪರಣೆ ಮಾದರಿ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗಿತ್ತು. ಇಫ್ಕೋ ಕಂಪನಿ ಕ್ಷೇತ್ರ ಅಧಿಕಾರಿ ರಾಘವೇಂದ್ರ ಅವರು ಡ್ರೋನ್ ಮೂಲಕ ಸಿಂಪರಣೆ ಮಾಡುವ ಬಗ್ಗೆ ಮಾಹಿತಿ ನೀಡುತ್ತಾ ಇದುವರೆಗೆ 6000 ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಈ ವರ್ಷ 10,000 ಕ್ಕೂ ಹೆಚ್ಚಿನ ರೈತರಿಗೆ ಈ ಪತ್ರಜ್ಞಾನ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಅಮೃತಾ ಚಿತ್ರಗಾರ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಾಮನಮೂರ್ತಿ ಹಾಗೂ ಪ್ರಕಾಶ ಬಣಕಾರ ಸೇರಿದಂತೆ 200ಕ್ಕೂ ಹೆಚ್ಚು ಪ್ರಗತಿಪರ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD